Tata Punch Ev 2025 Price And Mileage: ದೇಶದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳ (Electric Cars) ಮಾರಾಟ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡುತ್ತಿದ್ದಾರೆ. ಇದರ ನಡುವೆ ಹಲವು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.
ಇದರ ನಡುವೆ ನೀವು 2025 ರ ವರ್ಷದಲ್ಲಿ ಎಲೆಕ್ಟ್ರಿಕ್ ಕಾರ್ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ನಿಮಗೆ ಈ ಕಾರ್ ಒಂದು ಉತ್ತಮ ಆಯ್ಕೆ ಆಗಲಿದೆ. ಹೌದು, ಟಾಟಾ ಕಂಪನಿಯ ಈ ಎಲೆಕ್ಟ್ರಿಕ್ ಕಾರ್ ದೇಶದಲ್ಲಿ ಅತೀ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು 2025 ರ ವರ್ಷದಲ್ಲಿ ದಾಖಲೆ ಬುಕಿಂಗ್ ಕಂಡಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ 2025 ರ ವರ್ಷದಲ್ಲಿ ದಾಖಲೆಯ ಬುಕಿಂಗ್ ಕಂಡಿರುವ ಟಾಟಾ ಎಲೆಕ್ಟ್ರಿಕ್ ಕಾರ್ (Tata Electric Cars) ಯಾವುದು ಮತ್ತು ಈ ಕಾರಿನ ಬೆಲೆ ಮತ್ತು ಮೈಲೇಜ್ ಎಷ್ಟು ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.
ದೇಶದಲ್ಲಿ ದಾಖಲೆಯ ಬುಕಿಂಗ್ ಕಂಡ ಟಾಟಾ ಪಂಚ್ (Tata Punch)
ಹೌದು, ಟಾಟಾ ಕಂಪನಿ ಸೇಫ್ಟಿ ವಿಚಾರದಲ್ಲಿ ಜನರ ಮೆಚ್ಚುಗೆ ಗಳಿಸಿಕೊಂಡಿರುವುದು ಮಾತ್ರವಲ್ಲದೆ ಜನರಿಗೆ ಕಡಿಮೆ ಬೆಲೆಗೆ ಕಾರ್ ಒದಗಿಸುವಲ್ಲಿ ಕೂಡ ಹೆಸರುವಾಸಿಯಾಗಿದೆ. ಸದ್ಯ ಟಾಟಾ ಕಂಪನಿಯ ಜನಪ್ರಿಯ ಕಾರ್ ಅನಿಸಿಕೊಂಡಿರುವ ಟಾಟಾ ಪಂಚ್ 2025 ರ ವರ್ಷದಲ್ಲಿ ದಾಖಲೆಯ ಮಾರಾಟ ಕಾಣುವುದರ ಜೊತೆಗೆ ದಾಖಲೆಯ ಬುಕಿಂಗ್ ಕಂಡಿದೆ ಎಂದು ಹೇಳಬಹುದು. ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಫೀಚರ್, ಬೆಲೆ ಮತ್ತು ಮೈಲೇಜ್ ಕಂಡು ಜನರು ಹೆಚ್ಚು ಹೆಚ್ಚು ಕಾರ್ ಬುಕ್ ಮಾಡುತ್ತಿದ್ದಾರೆ.
2025 ರ ಟಾಟಾ ಪಂಚ್ ಕಾರಿನ ಬೆಲೆ ಮತ್ತು ಫೀಚರ್
ಟಾಟಾ ಪಂಚ್ 5 ಸ್ಟಾರ್ ಕಾರ್ ಆಗಿದ್ದು ನಿಮಗೆ ಉತ್ತಮ ಸೇಫ್ಟಿ ನೀಡುತ್ತದೆ ಎಂದು ಹೇಳಬಹುದು. 10 ಲಕ್ಷ ರೂಪಾಯಿಯ ಆರಂಭಿಕ ಬೆಲೆಯ ಟಾಟಾ ಪಂಚ್ ಕಾರಿನ ಟಾಪ್ ಎಂಡ್ ಬೆಲೆ 14.50 ಲಕ್ಷ ರೂಪಾಯಿ ಆಗಿದೆ. ನೀವು ಸುಮಾರು 1.5 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿಕೊಂಡು ಹಣಕಾಸು ಸಂಸ್ಥೆಯಿಂದ EMI ಮೂಲಕ ಕೂಡ ಕಾರ್ ಖರೀದಿ ಮಾಡಬಹುದು.
ನೀವು 1.5 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿ ಬೇಸಿಕ್ ಟಾಟಾ ಪಂಚ್ ಖರೀದಿ ಮಾಡಿದರೆ ನಿಮಗೆ ತಿಂಗಳ EMI 22482 ರೂಪಾಯಿ ಬರುತ್ತದೆ. ಇನ್ನು 35 kWh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಟಾಟಾ ಪಂಚ್ ಗರಿಷ್ಟ 190 nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಒಮ್ಮೆ ಫುಲ್ ಚಾರ್ಜ್ ಮಾಡಲು 5 ಘಂಟೆ ಸಮಯ ತಗೆದುಕೊಳ್ಳುವ ಟಾಟಾ ಪಂಚ್ ಕಾರಿಗೆ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 420 Km ಮೈಲೇಜ್ ಕೊಡಲಿದೆ. ಹಲವು ಐಷಾರಾಮಿ ಕಾರುಗಳಲ್ಲಿ ಹಲವು ಫೀಚರ್ ಗಳನ್ನೂ ನಾವು ಈ ಟಾಟಾ ಪಂಚ್ ಕಾರಿನಲ್ಲಿ ನೋಡಬಹುದು. ಕಡಿಮೆ ಬೆಲೆಗೆ ನೀವು 5 ಸ್ಟಾರ್ ಕಾರ್ ಖರೀದಿ ಮಾಡಬೇಕು ಅಂದರೆ ನಿಮಗೆ ಟಾಟಾ ಪಂಚ್ ಕಾರ್ ಒಂದು ಉತ್ತಮವಾದ ಆಯ್ಕೆ ಎಂದು ಹೇಳಬಹುದು.