ATM Usage Charges Hike: ಏಪ್ರಿಲ್ 1 ನೇ ತಾರೀಕಿನಿಂದ ಹೊಸ ಹಣಕಾಸು ವರ್ಷ (New Financial Year) ಆರಂಭ ಆಗಿದೆ ಮತ್ತು ಹೊಸ ಹಣಕಾಸು ವರ್ಷದಲ್ಲಿ ಅನೇಕ ಹೊಸ ಬದಲಾವಣೆಗಳು ಜಾರಿಗೆ ಬರಲಿದೆ ಎಂದು ಹೇಳಬಹುದು. ಇದರ ನಡುವೆ ಈಗ RBI ಹೊಸ ಹಣಕಾಸು ವರ್ಷದ ಆರಂಭದಲ್ಲೇ ಬ್ಯಾಂಕಿಂಗ್ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಜಾರಿಗೆ ತರಲು ಮುಂದಾಗಿದೆ. ಇನ್ನು RBI ಜಾರಿಗೆ ತರುತ್ತಿರುವ ಹೊಸ ನಿಯಮಗಳ ಪ್ರಕಾರ, ಮುಂದಿನ ದಿನಗಳಲ್ಲಿ ATM ಬಳಸುವವರಿಗೆ ದೊಡ್ಡ ಮೊತ್ತದ ಶುಲ್ಕ ಪಾವತಿ ಮಾಡಬೇಕು. ಹೌದು, ATM ಕಾರ್ಡ್ ಶುಲ್ಕಗಳ ನಿಯಮದಲ್ಲಿ ಈಗ RBI ಹೊಸ ಬದಲಾವಣೆ ಜಾರಿಗೆ ತಂದಿದೆ ಮತ್ತು ಹೊಸ ಬದಲಾವಣೆಯ ಪ್ರಕಾರ ಏಪ್ರಿಲ್ 1 ನೇ ತಾರೀಕಿನಿಂದ ATM ವಹಿವಾಟುಗಳ ಶುಲ್ಕ ಹೆಚ್ಚಳ ಆಗಲಿದೆ. ಹಾಗಾದರೆ ಏಪ್ರಿಲ್ 1 ನೇ ತಾರೀಕಿನಿಂದ ATM ವಹಿವಾಟು ನಿಯಮದಲ್ಲಿ ಆಗಲಿರುವ ಬದಲಾವಣೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭ
ಏಪ್ರಿಲ್ 1 ನೇ ತಾರೀಕಿನಿಂದ ಹೊಸ ಹಣಕಾಸು ವರ್ಷ ಆರಂಭ ಆಗಲಿದೆ ಮತ್ತು ಹೊಸ ಹಣಕಾಸು ವರ್ಷದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಬದಲಾವಣೆ ಕೂಡ ಆಗಲಿದೆ. ಇನ್ನು ಹೊಸ ಬದಲಾವಣೆಗಳ ಪ್ರಕಾರ, ಏಪ್ರಿಲ್ 1 ನೇ ತಾರೀಕಿನಿಂದ ATM ಬಳಸುವವರು ತಮ್ಮ ವಹಿವಾಟಿಗೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು. ಹೌದು, ATM ವಹಿವಾಟಿನ ಮೇಲೆ ಈಗ RBI ಹೆಚ್ಚುವರಿ ಶುಲ್ಕ ಹಾಕಲು ತೀರ್ಮಾನವನ್ನು ಮಾಡಿದೆ. ನಿಗದಿತ ವಹಿವಾಟಿಗಿಂತ ಹೆಚ್ಚು ಬಾರಿ ATM ಬಳಕೆ ಮಾಡಿದರೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು.
ATM ಬಳಸುವವರು ಕೊಡಬೇಕು ಹೆಚ್ಚುವರಿ ಶುಲ್ಕ
ಈ ಹಿಂದೆ RBI ನಿಯಮದ ಪ್ರಕಾರ ನಿಗದಿತ ವಹಿವಾಟಿಗಿಂತ ಹೆಚ್ಚು ATM ಬಳಕೆ ಮಾಡಿದರೆ 21 ರೂಪಾಯಿಗಳ ಶುಲ್ಕ ಪಾವತಿ ಮಾಡಬೇಕಾಗಿತ್ತು, ಆದರೆ ಈಗ ATM ಶುಲ್ಕದಲ್ಲಿ ಎರಡು ರೂಪಾಯಿ ಏರಿಕೆ ಮಾಡಲಾಗಿದೆ. ATM ಶುಲ್ಕದಲ್ಲಿ ಏಪ್ರಿಲ್ 1 ನೇ ತಾರೀಕಿನಿಂದ ಬದಲಾವಣೆ ಆಗಲಿದೆ ಮತ್ತು ಬದಲಾದ ನಿಯಮಗಳ ಪ್ರಕಾರ ATM ಬಳಸುವವರು ಹೊಸ ಹಣಕಾಸು ವರ್ಷದಲ್ಲಿ ನಿಗದಿತ ಬಳಕೆಗಿಂತ ಹೆಚ್ಚು ಬಾರಿ ಬಳಕೆ ಮಾಡಿದರೆ 2 ರೂಪಾಯಿ ಅಧಿಕ ಶುಲ್ಕ ಪಾವತಿ ಮಾಡಬೇಕು. ಹೊಸ ಹಣಕಾಸು ವರ್ಷದಿಂದ ನಿಗದಿತ ಬಳಕೆಗಿಂತ ಅಧಿಕ ಬಾರಿ ATM ಬಳಕೆ ಮಾಡಿದರೆ ಪ್ರತಿ ವಹಿವಾಟಿಗೆ 23 ರೂಪಾಯಿ ಶುಲ್ಕ ಪಾವತಿ ಮಾಡಬೇಕು RBI ತಿಳಿಸಿದೆ.
ಎಷ್ಟು ಬಾರಿ ATM ಬಳಸಿದರೆ ಶುಲ್ಕ ಕಟ್ಟಬೇಕು
RBI ನಿಯಮಗಳ ಪ್ರಕಾರ ಮೂರೂ ಬಾರಿ ATM ಬಳಕೆ ಮಾಡಿದರೆ ಉಚಿತವಾಗಿ ಹಣ ಹಿಂಪಡೆಯಬಹುದು, ಆದರೆ ಅದಕ್ಕೂ ಹೆಚ್ಚಿನ ಬಾರಿ ಹಣವನ್ನು ATM ಮೂಲಕ ಹಿಂಪಡೆದರೆ ಪ್ರತಿ ವಹಿವಾಟಿನ ಮೇಲೆ 23 ರೂಪಾಯಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು ಎಂದು RBI ತಿಳಿಸಿದೆ. ಏಪ್ರಿಲ್ 1 ನೇ ತಾರೀಕಿನಿಂದ ದೇಶಾದ್ಯಂತ ಈ ನಿಯಮ ಜಾರಿಗೆ ಬರಲಿದೆ.