Platina 125: 71 ಸಾವಿರಕ್ಕೆ ಮನೆಗೆ ತನ್ನಿ 78 Km ಮೈಲೇಜ್ ಕೊಡುವ ಈ ಬಜಾಜ್ ಬೈಕ್, ಮೈಲೇಜ್ ಪಿತಾಮಹ

Bajaj Platina 125 New Model 2025: ಹಲವು ವರ್ಷಗಳಿಂದ ಗ್ರಾಹಕರ ನಂಬಿಕೆಯನ್ನು ಗಳಿಸಿಕೊಂಡು ಬಂದಿರುವ ಬಜಾಜ್ ಕಂಪನಿ (Bajaj Motor Company) ಈಗ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ ಆಕರ್ಷಕ ಬೈಕ್ ಬಿಡುಗಡೆ ಮಾಡಿದೆ ಎಂದು ಹೇಳಬಹುದು. ಹೌದು, ಬಡವರಿಗಾಗಿ ಮತ್ತು ರೈತರಿಗಾಗಿ ಬಜಾಜ್ ಈಗ ಹೊಸ ಮಾದರಿಯ ಬಜಾಜ್ ಪ್ಲಾಟಿನ ಬೈಕ್ ಬಿಡುಗಡೆ ಮಾಡಿದ್ದು ಈ ಬೈಕ್ ಸದ್ಯ ದೇಶದಲ್ಲಿ ದಾಖಲೆಯ ಬುಕಿಂಗ್ ಕಾಣುತ್ತಿದೆ ಎಂದು ಹೇಳಬಹುದು. ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಬೈಕ್ ಹುಡುಕುತ್ತಿರುವವರಿಗೆ ಮತ್ತು ಪ್ರತಿನಿತ್ಯ ಸಾಕಷ್ಟು ದೂರ ಬೈಕ್ ಪ್ರಯಾಣ ಮಾಡುವವರಿಗೆ ಈ ಬಜಾಜ್ ಬೈಕ್ ಉತ್ತಮ ಆಯ್ಕೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಬಜಾಜ್ ಕಂಪನಿ ಲಾಂಚ್ ಮಾಡಿರುವ 2025 ರ ಮಾದರಿಯ ಹೊಸ ಬಜಾಜ್ ಪ್ಲಾಟಿನ ಬೈಕ್ ಬೆಲೆ ಎಷ್ಟು ಮತ್ತು ಮೈಲೇಜ್ ಎಷ್ಟು ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

WhatsApp Group Join Now
Telegram Group Join Now

ಬಜಾಜ್ ಪ್ಲಾಟಿನ ಬೆಲೆ ಮತ್ತು ಮೈಲೇಜ್
ಬಜಾಜ್ ಕಂಪನಿಯ ಜನಪ್ರಿಯ ಬೈಕ್ ಅನಿಸಿಕೊಂಡಿರುವ ಬಜಾಜ್ ಪ್ಲಾಟಿನ (Bajaj Platina) ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿರುವ ಬೈಕ್ ಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಬಜಾಜ್ ಪ್ಲಾಟಿನ ಬೈಕ್ ಬಡವರಿಗಾಗಿ ಲಾಂಚ್ ಮಾಡಿದ ಬೈಕ್ ಆಗಿದೆ ಮತ್ತು ಹೆಚ್ಚು ಹೆಚ್ಚು ದೂರ ಪ್ರಯಾಣ ಮಾಡುವವರಿಗೆ ಈ ಬೈಕ್ ಉತ್ತಮ ಆಯ್ಕೆ ಕೂಡ ಆಗಿದೆ. ಕಡಿಮೆ ಬೆಲೆ ಮತ್ತು ಹೆಚ್ಚು ಮೈಲೇಜ್ ಕೊಡುವ ಬೈಕ್ ನೀವು ಖರೀದಿ ಮಾಡಬೇಕು ಅಂದರೆ ನಿಮಗೆ ಬಜಾಜ್ ಪ್ಲಾಟಿನ ಒಂದು ಉತ್ತಮ ಆಯ್ಕೆ ಆಗಿರಲಿದೆ.

ಬಜಾಜ್ ಪ್ಲಾಟಿನ ಹಲವು ಆದುನಿಕ ಫೀಚರ್ ಗಳನ್ನೂ ಕೂಡ ಒಳಗೊಂಡಿದೆ. 2025 ರ ಬಜಾಜ್ ಪ್ಲಾಟಿನ 125 ಬೈಕ್ ದೇಶದಲ್ಲಿ ದಾಖಲೆಯ ಮಾರಾಟ ಕಂಡ ಬೈಕ್ ಗಳ ಪಟ್ಟಿಗೆ ಕೂಡ ಸೇರಿಕೊಂಡಿದೆ. ಸ್ಪೀಡೋಮೀಟರ್, ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಹೊಸ ಫೀಚರ್ ಗಳನ್ನೂ ನಾವು ಹೊಸ ಮಾದರಿಯ ಬಜಾಜ್ ಪ್ಲಾಟಿನ 125 (Bajaj Platina 125) ನಲ್ಲಿ ಕಾಣಬಹುದು. LED ಹೆಡ್ ಲೈಟ್ ಮತ್ತು LED ಇಂಡಿಕೇಟರ್ ಕೂಡ ಬಜಾಜ್ ಪ್ಲಾಟಿನ ಬೈಕ್ ನಲ್ಲಿ ಕಾಣಬಹುದು. ಟ್ಯೂಬ್ ಲೆಸ್ ಟೈಯರ್ ಮತ್ತು ಡ್ರಮ್ ಹಾಗು ಡಿಸ್ಕ್ ಆಯ್ಕೆಯನ್ನು ಬಜಾಜ್ ಪ್ಲಾಟಿನ ನಲ್ಲಿ ನೋಡಬಹುದು.

ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಬಜಾಜ್ ಪ್ಲಾಟಿನ ಬೈಕಿನ ಆರಂಭಿಕ ಬೆಲೆ 71 ಸಾವಿರ ರೂಪಾಯಿ ಆಗಿದೆ. ಕೇವಲ 71 ಸಾವಿರಕ್ಕೆ ನೀವು ಬಜಾಜ್ ಪ್ಲಾಟಿನ 125 ಬೈಕ್ ಖರೀದಿ ಮಾಡಬಹುದು. 124cc BS6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುವ ಬಜಾಜ್ ಪ್ಲಾಟಿನ 125 ಬೈಕ್ ಸುಮಾರು 78 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ. ಬಜಾಜ್ ಪ್ಲಾಟಿನ ಬೈಕ್ ಅನ್ನು ಮೈಲೇಜ್ ಪಿತಾಮಹ ಎಂದು ಕೂಡ ಕರೆಯುತ್ತಾರೆ ಮತ್ತು ಅದಕ್ಕೆ ಕಾರಣ ಬಜಾಜ್ ಪ್ಲಾಟಿನ 78 Km ಮೈಲೇಜ್ ಕೊಡುವುದರಿಂದ ಆಗಿದೆ.

Leave a Comment