Mini Sprinklers Subsidy For Farmers: ಸದ್ಯದ ದಿನಗಳಲ್ಲಿ ಸಾಕಷ್ಟು ರೈತರಿಗೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕೆಲವು ರೈತರು ನೀರಿದ್ದರೂ ಪಂಪ್ ಸೆಟ್ ಇಲ್ಲದೆ ಪಂಪ್ ಸೆಟ್ ಖರೀದಿ ಮಾಡಲು ಆಗದೆ ಕಷ್ಟಪಡುತ್ತಿದ್ದಾರೆ. ಇದರ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ರೈತರಿಗಾಗಿ ಹಲವು ಹೊಸ ಯೋಜನೆಯನ್ನು ಪರಿಚಯ ಮಾಡಿದೆ ಎಂದು ಹೇಳಬಹುದು. ಹೌದು, ರೈತರ ತೋಟ ಮತ್ತು ಹೊಲಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸರಬರಾಜು ಆಗಬೇಕು ಅನ್ನುವ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದಲ್ಲಿ ಈಗಾಗಲೇ ಹಲವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಇದರ ನಡುವೆ ಈಗ ಕೇಂದ್ರ ಸರ್ಕಾರ ದೇಶದ ರೈತರಿಗಾಗಿ ಇನ್ನೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆಯ ಅಡಿಯಲ್ಲಿ ದೇಶದ ರೈತರು ತಮ್ಮ ತೋಟಕ್ಕೆ ಅಥವಾ ಹೊಲಕ್ಕೆ ಮಿನಿ ಸ್ಪ್ರಿಂಕ್ಲರ್ ಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಹಣ ಪಡೆದುಕೊಳ್ಳಬಹುದು. ಹಾಗಾದರೆ ಯಾವ ಯಾವ ರೈತರು ತಮ್ಮ ತೋಟಕ್ಕೆ ಮಿನಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿಕೊಳ್ಳಲು ಸಬ್ಸಿಡಿ ಪಡೆಯಬಹುದು ಮತ್ತು ಅದಕ್ಕೆ ಬೇಕಾದ ಅರ್ಹತೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಿನಿ ಸ್ಪ್ರಿಂಕ್ಲರ್ ಗಳನ್ನು ಅಳವಡಿಸಿಕೊಳ್ಳಲು ಸರ್ಕಾರದಿಂದ ಸಿಗಲಿದೆ ಸಬ್ಸಿಡಿ
ಹೌದು, ಕೇಂದ್ರ ಸರ್ಕಾರ ಈಗ ದೇಶದ ರೈತರಿಗೆ ತಮ್ಮ ಹೊಲಕ್ಕೆ ಅಥವಾ ತೋಟಕ್ಕೆ ಮಿನಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿಕೊಳ್ಳಲು ಶೇಕಡಾ 75 ರಷ್ಟು ಸಬ್ಸಿಡಿ ನೀಡಲು ಮುಂದಾಗಿದೆ. ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ತಮ್ಮ ತೋಟಕ್ಕೆ ಅಥವಾ ಹೊಲಕ್ಕೆ ಮಿನಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿಕೊಳ್ಳಬಹುದು. ನೀರಿನ ಅಪವ್ಯಯ ಆಗಬಾರದು ಮತ್ತು ರೈತರ ಹೊಲಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸರಬರಾಜು ಆಗಬೇಕು ಅನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದಿದೆ.
ಮಿನಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ…?
ಆಸಕ್ತ ರೈತರು ಕೇಂದ್ರ ಸರ್ಕಾರದಿಂದ ಮಿನಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ರೈತರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಹಲವು ದಾಖಲೆಯನ್ನು ನೀಡಿ ಮಿನಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಸಣ್ಣ ಮತ್ತು ಅತೀ ಸಣ್ಣ ರೈತರು, SC-ST ವರ್ಗದವರು ಮತ್ತು ಮಹಿಳಾ ರೈತರು ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡಗಳು
* ಅರ್ಜಿ ಸಲ್ಲಿಸುವ ರೈತ ಭಾರತದ ನಿವಾಸಿ ಆಗಿರಬೇಕು
* ಅರ್ಜಿ ಸಲ್ಲಿಸುವ ರೈತ ಕೃಷಿ ಭೂಮಿಯ ಮಾಲೀಕತ್ವ ಹೊಂದಿರುವುದು ಕಡ್ಡಾಯ
* ಅರ್ಜಿ ಸಲ್ಲಿಸುವ ರೈತ ಕನಿಷ್ಠ 2 ಹೆಕ್ಟೇರ್ ನೀರಾವರಿ ಭೂಮಿಯನ್ನು ಹೊಂದಿರಬೇಕು
* ಆಧಾರ್ ಮತ್ತು ಪಾನ್ ಕಾರ್ಡ್ ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡುವುದು ಕಡ್ಡಾಯ
* ರೈತ ತಮ್ಮ ಜಮೀನಿಗೆ ನೀರಾವರಿ ಮೂಲ ಹೊಂದಿರಬೇಕು
ಆನ್ಲೈನ್ ನೋಂದಣಿ ಕೂಡ ಜಾರಿಯಲ್ಲಿ ಇದ್ದು ರೈತರು ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ ಅರ್ಜಿ ಸಲ್ಲಿಸಬಹುದು. ಕೇಂದ್ರದ ರಾಜ್ ಕಿಸಾನ್ ವೆಬ್ಸೈಟ್ ಗೆ ಭೇಟಿನೀಡಿ ರೈತ ತಮ್ಮ ಎಲ್ಲಾ ದಾಖಲೆಯನ್ನು ನೀಡುವುದರ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಸದ್ಯ ರಾಜಸ್ಥಾನಕ್ಕೆ ರಾಜ್ಯಕ್ಕೆ ಈಗಾಗಲೇ ಅರ್ಜಿ ಕರೆಯಲಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯದ ರೈತರು ಕೂಡ ಅರ್ಜಿ ಸಲ್ಲಿಸಬಹುದು.