Central Government Employees DA Hike: ದೇಶದಲ್ಲಿ ಯುಗಾದಿ ಹಬ್ಬವನ್ನು (Ugadi Festival) ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಇದರ ನಡುವೆ ಈಗ ಹೊಸ ಹಣಕಾಸು ವರ್ಷ ಇನ್ನೇನು ಆರಂಭ ಆಗಬೇಕಿದೆ. ಹಣಕಾಸು ವರ್ಷದ ಆರಂಭಕ್ಕೆ ಈಗ ಕೇಂದ್ರ ಸರ್ಕಾರ ದೇಶದ ಎಲ್ಲಾ ಸರ್ಕಾರೀ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಹೌದು, ಸರ್ಕಾರೀ ನೌಕರರ ಸಂಬಳದ ವಿಷಯವಾಗಿ ನರೇಂದ್ರ ಮೋದಿಯವರು ಈಗ ದೇಶದ ಎಲ್ಲಾ ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್ ನೀಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೊಸ ಹಣಕಾಸು ವರ್ಷದಿಂದ ಎಲ್ಲಾ ಸರ್ಕಾರೀ ನೌಕರರು ಅಧಿಕ ಸಂಬಳ ಪಡೆದುಕೊಳ್ಳಲಿದ್ದಾರೆ. ಹಾಗಾದರೆ ನರೇಂದ್ರ ಮೋದಿಯವರು ದೇಶದ ಎಲ್ಲಾ ಸರ್ಕಾರೀ ನೌಕರರಿಗೆ ನೀಡಿದ ಗುಡ್ ನ್ಯೂಸ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸರ್ಕಾರೀ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಿದ ನರೇಂದ್ರ ಮೋದಿ
ಹೌದು, ಯುಗಾದಿ ಹಬ್ಬದ ಉಡುಗೊರೆ ನೀಡಿರುವ ನರೇಂದ್ರ ಮೋದಿಯವರು (Narendra Modi) ಈಗ ಕೇಂದ್ರ ಸರ್ಕಾರೀ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡುವುದರ ಮೂಲಕ ದೇಶದ ಎಲ್ಲಾ ಸರ್ಕಾರೀ ನೌಕರರಿಗೆ ಯುಗಾದಿ ಹಬ್ಬದ ಉಡುಗೊರೆ ನೀಡಿದ್ದಾರೆ. ನಿನ್ನೆ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳ ಮತ್ತು ಪಿಂಚಣಿದಾರರ ಪರಿಹಾರ ತುಟ್ಟಿಭತ್ಯೆಯನ್ನು ಶೇಕಡಾ 2 ರಷ್ಟು ಹೆಚ್ಚಳ ಮಾಡಲು ಈಗ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇನ್ನು ಹೊಸ ತುಟ್ಟಿಭತ್ಯೆ ಮತ್ತು ಪಿಂಚಣಿ ಪರಿಹಾರ ತುಟ್ಟಿ ಮುಂದಿನ ವರ್ಷ, ಅಂದರೆ ಜನವರಿ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ತಿಳಿಸಿದೆ.
ಸುಮಾರು 48 ಲಕ್ಷ ಕೇಂದ್ರ ಸರ್ಕಾರೀ ನೌಕರರಿಗೆ ಲಾಭ
ಕೇಂದ್ರ ಸರ್ಕಾರ ಈಗ ತುಟ್ಟಿಭತ್ಯೆ ಹೆಚ್ಚಳ ಮಾಡಿರುವ ಕಾರಣ ಸುಮಾರು 48.66 ಲಕ್ಷ ಕೇಂದ್ರ ಸರ್ಕಾರೀ ನೌಕರರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಅದೇ ರೀತಿಯಲ್ಲಿ 66 ಲಕ್ಷ ಪಿಂಚಣಿದಾರರು ಕೂಡ ಪರಿಹಾರ ತುಟ್ಟಿ ಲಾಭ ಪಡೆದುಕೊಳ್ಳಲಿದ್ದಾರೆ. ಇನ್ನು ಈ ಹಿಂದೆ ಶೇಕಡಾ 53 ರಷ್ಟು ಇದ್ದ ಕೇಂದ್ರ ಸರ್ಕಾರೀ ನೌಕರರ ತುಟ್ಟಿಭತ್ಯೆ ಈಗ ಶೇಕಡಾ 55 ಏರಿಕೆ ಆಗಿದೆ. 2026 ರ ವರ್ಷದಿಂದ ಎಲ್ಲಾ ಸರ್ಕಾರೀ ನೌಕರರು 2 % ಹೆಚ್ಚುವರಿ ತುಟ್ಟಿಭತ್ಯೆ ಪಡೆದುಕೊಳ್ಳಲಿದ್ದಾರೆ.
8 ನೇ ವೇತನ ಆಯೋಗದ ಬಗ್ಗೆ ಕೂಡ ಚರ್ಚೆ
ನಿನ್ನೆ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗದ (8th Pay Commission) ಬಗ್ಗೆ ಕೂಡ ಚರ್ಚೆ ಮಾಡಲಾಗಿದೆ. ಒಂದುವೇಳೆ ದೇಶದಲ್ಲಿ 8ನೇ ವೇತನ ಆಯೋಗ ಜಾರಿಗೆ ಬಂದರೆ ಕೇಂದ್ರ ಸರ್ಕಾರೀ ನೌಕರರು ಇನ್ನಷ್ಟು ಹೆಚ್ಚಿನ ವೇತನ ಪಡೆದುಕೊಳ್ಳಲಿದ್ದಾರೆ. ಸದ್ಯ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳದ ತೀರ್ಮಾನ ತಗೆದುಕೊಳ್ಳಲಿದೆ ಮತ್ತು ಮುಂದಿನ ದಿನಗಳಲ್ಲಿ 8ನೇ ವೇತನ ಆಯೋಗದ ಬಗ್ಗೆ ತೀರ್ಮಾನ ತಗೆದುಕೊಳ್ಳುವ ಸಾಧ್ಯತೆ ಇದೆ.