New Tata Sumo Car: ಜನರ ಸುರಕ್ಷತೆ ಮತ್ತು ಅವರ ಬಜೆಟ್ ಗೆ ಅನುಗುಣವಾಗಿ ಟಾಟಾ ಕಂಪನಿ (Tata Company) ಕಡಿಮೆ ಬೆಲೆಯ ಕಾರುಗಳನ್ನು ಲಾಂಚ್ ಮಾಡುವಲ್ಲಿ ಬಹಳ ಹೆಸರುವಾಸಿ ಎಂದು ಹೇಳಬಹುದು. ಇದರ ನಡುವೆ ಟಾಟಾ ಕಂಪನಿಯ ಸುಮೋ ಕಾರ್ ಬಗ್ಗೆ ಎಲ್ಲರೂ ಕೇಳೇ ಇರುತ್ತೀರಿ. ಟಾಟಾ ಸುಮೋ ಟಾಟಾ ಕಂಪನಿಯ ಜನಪ್ರಿಯ ಕಾರ್ ಎಂದು ಹೇಳಿದರೆ ತಪ್ಪಾಗಲ್ಲ. ಟಾಟಾ ಸುಮೋ (Tata Sumo) ಹಲವು ವರ್ಷಗಳಿಂದ ಜನರ ಮೆಚ್ಚುಗೆ ಗಳಿಸಿಕೊಂಡು ಬಂದಿದೆ. ಟಾಟಾ ಕಂಪನಿ 2025 ರ ಮಾದರಿಯ ಹೊಸ ಟಾಟಾ ಸುಮೋ ಕಾರನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಟಾಟಾ ಸುಮೋ ಟಾಟಾ ಕಂಪನಿಯ ಅತೀ ದೊಡ್ಡ ಕಾರ್ ಕೂಡ ಆಗಿದೆ. ಹೊಸ ಟಾಟಾ ಸುಮೋ ಕಾರಿನ ಬೆಲೆ ಮತ್ತು ಫೀಚರ್ ಕಂಡು ಜನರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಹೊಸ ಟಾಟಾ ಸುಮೋ ಕಾರಿನ ಮೇಲೆ ಮತ್ತು ಕಾರಿನ ಫೀಚರ್ ಏನೆಂದು ನಾವೀಗ ತಿಳಿಯೋಣ.
ಮಾರುಕಟ್ಟೆಗೆ ಬರಲಿದೆ ಹೊಸ ಮಾದರಿಯ ಟಾಟಾ ಸುಮೋ
ಟಾಟಾ ಕಂಪನಿಯ ಜನಪ್ರಿಯ ಕಾರ್ ಆಗಿರುವ ಟಾಟಾ ಸುಮೋ ಹಲವು ವರ್ಷಗಳಿಂದ ಹಿಂದೆ ಸ್ಥಗಿತವಾಗಿತ್ತು ಮಾತು ಟಾಟಾ ಸುಮೋ ಹಳೆಯ ಮಾದರಿಯ ಕಾರುಗಳನ್ನು ನಾವು ರಸ್ತೆಯ ಮೇಲೆ ನೋಡಬಹುದಾಗಿದೆ. ಇದರ ಕಡಿಮೆ ಕಳೆದ ಎರಡು ವರ್ಷಗಳಿಂದ ಟಾಟಾ ಕಂಪನಿ ಹೊಸ ಮಾದರಿಯ ಸುಮೋ ಕಾರನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ ಅನ್ನುವ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೊಸ ಟಾಟಾ ಸುಮೋ ಕಾರು ಹೇಗಿರಲಿದೆ…?
ಟಾಟಾ ಸುಮೋ ಮತ್ತೆ ಭಾರತದ ಮಾರುಕಟ್ಟೆಗೆ ಲಾಂಚ್ ಆಗುತ್ತದೆ ಅನ್ನುವ ಸುದ್ದಿ ಹರಿದಾಡಿದ್ದೆ ತಡ ಹೊಸ ಟಾಟಾ ಸುಮೋ ಕಾರ್ ಹೇಗಿರಲಿದೆ ಮತ್ತು ಅದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಕೂಡ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಾಗಾದರೆ ಹೊಸ ಟಾಟಾ ಸುಮೋ ಕಾರಿನ ಬೆಲೆ ಎಷ್ಟು, ಕಾರಿನ ವಿಶೇಷತೆ ಏನು ಮತ್ತು ಯಾವಾಗ ಕಾರ್ ಲಾಂಚ್ ಆಗಲಿದೆ ಎಂದು ನಾವು ತಿಳಿಯೋಣ.
ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಹೊಸ ಟಾಟಾ ಸುಮೋ ಕಾರ್ 2026 ನೇ ಇಸವಿಯಲ್ಲಿ ಮಾರುಕಟ್ಟೆಗೆ ಲಾಂಚ್ ಆಗಲಿದೆ ಎಂದು ಹೇಳಲಾಗುತ್ತಿದೆ. ಡಿಜಿಟಲ್ ಮೀಟರ್ ಗಳು, LED ಹೆಡ್ ಲೈಟ್ ಗಳು, 360 ಡಿಗ್ರಿ ಕ್ಯಾಮೆರಾ, AC ಮತ್ತು ಏರ್ ಬ್ಯಾಗ್ ಗಳು ಸೇರಿದಂತೆ ಹಲವು ಅಧಿಕ ವಿಶೇಷತೆ ಹೊಸ ಟಾಟಾ ಸುಮೋ ಕಾರಿನಲ್ಲಿ ನಾವು ನೋಡಬಹುದು. ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಹೊಸ ಟಾಟಾ ಸುಮೋ ಸುಮಾರು 16 ಕಿಲೋಮೀಟರ್ ಮೈಲೇಜ್ ಕೊಡಲಿದೆ ಎಂದು ಅಂದಾಜು ಮಾಡಲಾಗಿದೆ.
ಇನ್ನು ಟಾಟಾ ಕಾರ್ ಬಜೆಟ್ ಬೆಲೆಯಲ್ಲಿ ಕಾರ್ ಲಾಂಚ್ ಮಾಡುವುದರಲ್ಲಿ ಹೆಸರುವಾಸಿ, ಮತ್ತು 2026 ರಲ್ಲಿ ಲಾಂಚ್ ಆಗಲಿರುವ ಹೊಸ ಟಾಟಾ ಸುಮೋ ಕಾರಿನ ಬೆಲೆ ಸುಮಾರು 16 ಲಕ್ಷ ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಇನ್ನು ಟಾಟಾ ಕಂಪನಿ ಟಾಟಾ ಸುಮೋ ಕಾರ್ ಲಾಂಚ್ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ನೀಡದೆ ಇದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ 2026 ರಲ್ಲಿ ಟಾಟಾ ಹೊಸ ಸುಮೋ ಕಾರನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ ಎಂದು ಹರಿದಾಡುತ್ತಿದೆ.