Yamaha RX 100 Bike Relaunch In India: ಒಂದು ಕಾಲದಲ್ಲಿ ಯುವಕರ ನಿದ್ದೆ ಕೆಡಿಸಿದ್ದ ಬೈಕ್ ಅಂದರೆ ಅದು ಯಮಹಾ ಕಂಪನಿಯ (Yamaha Motor Company) RX 100 ಬೈಕ್ (Yamaha RX 100) ಎಂದು ಹೇಳಬಹುದು. ಯಮಹಾ RX 100 ಬೈಕ್ ಬಂದರೆ ಸಾಕು ಒಮ್ಮೆ ಎಲ್ಲಾ ಜನರು ಕೂಡ ತಿರುಗಿ ನೋಡುತ್ತಿದ್ದರು. ಇದರ ನಡುವೆ ಕೆಲವು ಅನಿವಾರ್ಯ ಕಾರಣಗಳಿಂದ ಪಡ್ಡೆ ಹುಡುಗರ ಮೆಚ್ಚಿನ ಬೈಕ್ ಅನಿಸಿಕೊಂಡಿದ್ದ ಯಮಹಾ RX 100 ಮಾರಾಟ ಸ್ಥಗಿತವಾಗಿತ್ತು. ಸದ್ಯ ಮತ್ತೆ ಈಗ ಯಮಹಾ RX 100 ಮಾರುಕಟ್ಟೆಗೆ ಲಾಂಚ್ ಆಗುತ್ತಿದ್ದು ಇದು ಯುವಕರ ಸಂತಸಕ್ಕೆ ಕಾರಣವಾಗಿದೆ. ಹೊಸ ಮಾದರಿಯಲ್ಲಿ ಮತ್ತು ಹೊಸ ವಿಶೇಷತೆಯಲ್ಲಿ ಮತ್ತೆ ಈಗ ಯಮಹಾ RX 100 ಬೈಕ್ ಮಾರುಕಟ್ಟೆಗೆ ಬರುತ್ತಿದೆ. ಹಾಗಾದರೆ ಮತ್ತೆ ಮಾರುಕಟ್ಟೆಗೆ ಬರುತ್ತಿರುವ ಹೊಸ ಯಮಹಾ RX 100 ಬೈಕಿನ ಬೆಲೆ ಮತ್ತು ಫೀಚರ್ ಏನು ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.
ಮತ್ತೆ ಬಂತು ಯಮಹಾ RX 100 ಬೈಕ್
ಹೌದು, ಮಾರುಕಟ್ಟೆಗೆ ಮತ್ತೆ ಯಮಹಾ RX 100 ಬೈಕ್ ಲಾಂಚ್ ಆಗಲಿದೆ. ಇನ್ನು ಮೂಲಗಳಿದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಯಮಹಾ RX 100 ಬೈಕ್ ಮುಂದಿನ ವರ್ಷ, ಅಂದರೆ ಜೂನ್ 2026 ರಲ್ಲಿ ಮಾರುಕಟ್ಟೆಗೆ ಲಾಂಚ್ ಆಗಲಿದ್ದು ಯುವಕರು ಖರೀದಿ ಮಾಡಬಹುದು. ಯಮಹಾ ಕಂಪನಿಯ ಜನಪ್ರಿಯ ಬೈಕ್ ಅನಿಸಿಕೊಂಡಿರುವ RX 100 ಭಾರತದಲ್ಲಿ ಮತ್ತೆ ಲಾಂಚ್ ಆದರೆ ದಾಖಲೆಯ ಮಾರಾಟ ಕಾಣುವುದಂತೂ ಖಂಡಿತ ಎಂದು ಹೇಳಬಹುದು.
ಹೊಸ ಯಮಹಾ RX 100 ಬೈಕಿನ ಬೆಲೆ ಮತ್ತು ಮೈಲೇಜ್
ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಯಮಹಾ RX 100 ಬೈಕ್ ಬಜೆಟ್ ಬೆಲೆಯಲ್ಲಿ ಜನರ ಕೈಸೇರಲಿದೆ ಎಂದು ಅಂದಾಜು ಮಾಡಲಾಗಿದೆ. ಹೊಸ ಯಮಹಾ RX 100 ಬೈಕ್ ನೇರವಾಗಿ ರಾಯಲ್ ಎಂಫಿಎಲ್ಡ್ (Royal Enfield) ಬೈಕಿಗೆ ಪೈಪೋಟಿ ಕೊಡುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕೂಡ ಹೇಳಲಾಗುತ್ತಿದೆ. USB ಚಾರ್ಜಿಂಗ್, LED ಹೆಡ್ ಲೈಟ್, ಡಿಜಿಟಲ್ ಮೀಟರ್, LED ಇಂಡಿಕೇಟರ್, 11 ಲೀಟರ್ ನ ದೊಡ್ಡ ಇಂಧನ ಟ್ಯಾಂಕ್ ಹೀಗೆ ಹಲವು ಫೀಚರ್ ಗಳನ್ನೂ ನಾವು ಹೊಸ ಯಮಹಾ RX 100 ಬೈಕಿನಲ್ಲಿ ಕಾಣಬಹುದು.
ಇನ್ನು ಬೆಲೆ ಮತ್ತು ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಮಾರುಕಟ್ಟೆಗೆ ಲಾಂಚ್ ಆಗುತ್ತಿರುವ ಹೊಸ ಯಮಹಾ RX 100 ಬೈಕಿನ ಬೆಲೆ ಕೊಂಚ್ ಅಧಿಕ ಎಂದು ಹೇಳಬಹುದು. ಹೌದು, ಹೊಸ ಯಮಹಾ RX 100 ಬೈಕಿನ ಆರಂಭಿಕ ಬೆಲೆ ಸುಮಾರು 1.4 ಲಕ್ಷ ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಅದೇ ರೀತಿಯಲ್ಲಿ ಮೈಲೇಜ್ ವಿಷಯಕ್ಕೆ ವಿಷಯಕ್ಕೆ ಬರುವುದಾದರೆ, ಒಮ್ಮೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದರೆ ಸುಮಾರು 495 ಕಿಲೋಮೀಟರ್ ತನಕ ಚಲಿಸಬಹುದು, ಅಂದರೆ 45 ಕಿಲೋಮೀಟರ್ ಮೈಲೇಜ್ ಕೊಡಲಿದೆ.