Unknown Call display In Mobile: ಮೊಬೈಲ್ ಬಳಸುವವರಿಗೆ ಇದೊಂದು ಗುಡ್ ನ್ಯೂಸ್ ಎಂದು ಹೇಳಬಹುದು. ಹೌದು, ಟೆಲಿಕಾಂ ಕ್ಷೇತ್ರದಲ್ಲಿ ಈಗ ಬಹುದೊಡ್ಡ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನುಮುಂದೆ ಅನ್ಯ ಕರೆಗಳು ಬರುವುದು ಮತ್ತು ಅನ್ಯ ಕರೆಗಳ ಗುರುತು ಪತ್ತೆಹಚ್ಚುವ ಉದ್ದೇಶದಿಂದ ಈಗ ಭಾರತೀಯ ಟೆಲಿಕಾಂ ಸಂಸ್ಥೆ ದೇಶದಲ್ಲಿ ಬಹುದೊಡ್ಡ ಬದಲಾವಣೆ ಜಾರಿಗೆ ತರಲು ಮುಂದಾಗಿದೆ ಎಂದು ಹೇಳಬಹುದು. ಇನ್ನು ಹೊಸ ನಿಯಮಗಳ ಪ್ರಕಾರ, ಇನ್ನುಮುಂದೆ ಮೊಬೈಲ್ ನಲ್ಲಿ ಯಾವುದೇ ಅನ್ಯ ಕರೆಗಳು ಬರುವುದಿಲ್ಲ ಎಂದು ಹೇಳಬಹುದು. ಹಾಗಾದರೆ ಟೆಲಿಕಾಂ (Telecom) ಕ್ಷೇತ್ರದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ.
ಇನ್ಮುಂದೆ ಮೊಬೈಲ್ ಡಿಸ್ಪ್ಲೇ ಆಗಲಿದೆ ಕರೆದಾರರ ಹೆಸರು
ಟೆಲಿಕಾಂ ಸಂಸ್ಥೆ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ ಇನ್ನಮುಂದೆ ಮೊಬೈಲ್ ನಂಬರ್ ಸೇವ್ ಇಲ್ಲದೆ ಇದ್ದರೂ ಕೂಡ ಮೊಬೈಲ್ ನಲ್ಲಿ ಯಾರು ಕರೆ ಮಾಡಿರುತ್ತಾರೋ ಅವರ ಹೆಸರು ಡಿಸ್ಪ್ಲೇ ಆಗಲಿದೆ. ಕರೆಗಳ ಮೂಲಕ ವಂಚನೆ ಮಾಡುವವರ ಸಂಖ್ಯೆ ಜಾಸ್ತಿಯಾದ ಕಾರಣ ಭಾರತೀಯ ಟೆಲಿಕಾಂ ಸಂಸ್ಥೆ ಈಗ ಟೆಲಿಕಾಂ ಕ್ಷೇತ್ರದಲ್ಲಿ ಈ ಬದಲಾವಣೆ ಮಾಡಲು ಮುಂದಾಗಿದೆ. ಅನ್ಯ ನಂಬರ್ ಗಳಿಂದ ಕರೆ ಬಂದರೆ ಜನರು ಗೊಂದಲಕ್ಕೆ ಒಳಗಾಗಬಾರದು ಅನ್ನುವ ಉದ್ದೇಶದಿಂದ ಭಾರತೀಯ ಟೆಲಿಕಾಂ ಸಂಸ್ಥೆ ಈಗ ಈ ಹೊಸ ನಿಯಮ ಜಾರಿಗೆ ಬಂದಿದೆ.
ದೇಶದಲ್ಲಿ ಹೆಚ್ಚಾಗುತ್ತಿದೆ ಡಿಜಿಟಲ್ ವಂಚನೆ
ದೇಶದಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚಾಗಿದೆ ಮತ್ತು ಅನ್ಯ ನಂಬರ್ ನಿಂದ ಕರೆಮಾಡಿ ಜನರನ್ನು ವಂಚಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣಗಳಿಂದ ಭಾರತೀಯ ಟೆಲಿಕಾಂ ಸಂಸ್ಥೆ ಇನ್ನುಮುಂದೆ ಅನ್ಯ ನಂಬರ್ ನಿಂದ ಬರುವ ಕರೆ ಯಾರು ಮಾಡಿರುತ್ತಾರೋ ಅವರ ಹೆಸರನ್ನು ಮೊಬೈಲ್ ಡಿಸ್ಪ್ಲೇ ಮೇಲೆ ತೋರಿಸಲು ಮುಂದಾಗಿದೆ. ಇನ್ನುಮುಂದೆ ಮೊಬೈಲ್ ಬಳಸುವವರು ಯಾರಾದರೂ ಅನ್ಯ ಸಂಖ್ಯೆಯಿಂದ ಕರೆ ಮಾಡಿದರೆ ಅವರ ಹೆಸರು ತಿಳಿದುಕೊಳ್ಳಬಹುದು.
ಕರೆ ಮಾಡಿದವರ ನಿಜವಾದ ಹೆಸರು ಕಾಣಲಿದೆ
ಯಾರಾದರೂ ಅನ್ಯ ಸಂಖ್ಯೆಯಿಂದ ನಿಮಗೆ ಕರೆ ಮಾಡಿದರೆ ಅವರ ನಿಜವಾದ ಹೆಸರು ನಿಮ್ಮ ಮೊಬೈಲ್ ಮೇಲೆ ಡಿಸ್ಪ್ಲೇ ಆಗುವಂತೆ ಹೊಸ ಸಿಸ್ಟಮ್ ಅನ್ನು ಈಗ ಭಾರತೀಯ ಟೆಲಿಕಾಂ ಸಂಸ್ಥೆ ಜಾರಿಗೆ ತಂದಿದೆ. ಇನ್ನುಮುಂದೆ ಅಪರಿಚಿತ ಮೊಬೈಲ್ ಸಂಖ್ಯೆ ಗುರುತಿಸಲು ಬೇರೆ ಯಾವೂದೆಯೋ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಮತ್ತು ನಿಮ್ಮ ಮೊಬೈಲ್ ಡಿಸ್ಪ್ಲೇ ಮೇಲೇನೆ ಅವರ ಹೆಸರು ಬರಲಿದೆ. ಟೆಲಿಕಾಂ ಕಂಪನಿಗಳು ಈಗ ನೋಕಿಯಾ, HP ಮತ್ತು ಡೆಲ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಸಿಮ್ ಕಾರ್ಡ್ ಯಾರ ಹೆಸರಿನಲ್ಲಿ ಇದೆಯೋ ಅವರ ಹೆಸರು ಡಿಸ್ಪ್ಲೇ ಆಗುವಂತೆ ಈಗ ಸಿಸ್ಟಮ್ ಅನ್ನು ಬದಲಾವಣೆ ಮಾಡಲಾಗುತ್ತಿದೆ. ಸದ್ಯ ಈ ಸಿಸ್ಟಮ್ ಪರೀಕ್ಷೆ ಕೂಡ ಈಗಾಗಲೇ ಆರಂಭ ಆಗಿದೆ ಮತ್ತು ಇನ್ನೇನು ಕೆಲವೇ ದಿನಗಳಲ್ಲಿ ದೇಶದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.