Budget Cars: ಇಲ್ಲಿದೆ ನೋಡಿ ಅಗ್ಗದ 4 ಕಾರುಗಳು, ಕಡಿಮೆ ಬೆಲೆ & 35 ಕಿಲೋಮೀಟರ್ ಮೈಲೇಜ್

Top 4 Budget Cars In India: ಈಗಿನ ಕಾಲದ ಜನರು ಬಜೆಟ್ ಕಾರ್ (Budget Cars) ಖರೀದಿ ಮಾಡಲು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳಬಹುದು, ಅದೇ ರೀತಿಯಲ್ಲಿ ವಾಹನ ತಯಾರಕ ಕಂಪನಿಗಳು ಕೂಡ ಮಾರುಕಟ್ಟೆಗೆ ಹಲವು ಬಜೆಟ್ ಕಾರುಗಳನ್ನು ಲಾಂಚ್ ಮಾಡುತ್ತಿದೆ. ಇದರ ನಡುವೆ ಈ 4 ಬಜೆಟ್ ಕಾರುಗಳು ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ. ಯಾರು ಯಾರು ಹೆಚ್ಚು ಮೈಲೇಜ್ ಕೊಡುವ ಬಜೆಟ್ ಕಾರ್ ಹುಡುಕುತ್ತಾರೋ ಅವರಿಗೆ ಈ 4 ಕಾರುಗಳು ಬಹಳ ಇಷ್ಟವಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟ ಕಾಣುತ್ತಿರುವ ಆ ನಾಲ್ಕು ಬಜೆಟ್ ಕಾರುಗಳು ಯಾವುದು ಮತ್ತು ಆ ಕಾರುಗಳ ಮೈಲೇಜ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

WhatsApp Group Join Now
Telegram Group Join Now

ಮಾರುತಿ ಸುಜುಕಿ S-Presso (Maruti Suzuki S-Presso)
ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಕಾರ್ ಅನಿಸಿಕೊಂಡಿರುವ ಮಾರುತಿ ಸುಜುಕಿ S-Presso ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಸುಮಾರು 4.5 ಲಕ್ಷ ರೂ ಬೆಲೆಯ ಈ S-Presso ಕಾರಿಗೆ ಬೇಡಿಕೆ ಹೆಚ್ಚಾಗಿದ್ದು 2025 ರ ವರ್ಷದಲ್ಲಿ ದಾಖಲೆಯ ಬುಕಿಂಗ್ ಕೂಡ ಕಂಡಿದೆ ಎಂದು ಹೇಳಬಹುದು. CNG ಮತ್ತು ಪೆಟ್ರೋಲ್ ಮಾದರಿಯಲ್ಲಿ ಸಿಗುವ S-Presso ಕಾರ್ CNG ಮಾದರಿಯಲ್ಲಿ ಸುಮಾರು 35 ಕಿಲೋಮೀಟರ್ ಮೈಲೇಜ್ ಕೊಟ್ಟರೆ ಪೆಟ್ರೋಲ್ ಮಾದರಿಯಲ್ಲಿ ಸುಮಾರು 22 ಕಿಲೋಮೀಟರ್ ತನಕ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ.

ಡಟ್ಸನ್ ರೆಡಿ ಗೋ (Datsun Redi Go) 
ಡಟ್ಸನ್ ರೆಡಿ ಗೋ ಕಾರ್ ಕೂಡ ದೇಶದಲ್ಲಿ ಹೆಚ್ಚು ಮಾರಾಟ ಕಾಣುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಸುಮಾರು 6 ಲಕ್ಷ ರೂ ಆರಂಭಿಕ ಬೆಲೆಯಲ್ಲಿ ಸಿಗುವ ಡಟ್ಸನ್ ರೆಡಿ ಗೋ ಕಾರು ದೇಶದಲ್ಲಿ ಯುವಕರ ನೆಚ್ಚಿನ ಕಾರ್ ಕೂಡ ಅನಿಸಿಕೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಸಿಗುವ ಈ ಡಟ್ಸನ್ ರೆಡಿ ಗೋ ಸುಮಾರು 19 -23 ಕಿಲೋಮೀಟರ್ ತನಕ ಮೈಲೇಜ್ ಕೊಡುತ್ತದೆ ಎಂದು ಹೇಳಬಹುದು. 2025 ರ ಹೊಸ ಮಾದರಿಯ ಡಟ್ಸನ್ ರೆಡಿ ಗೋ ಕಾರು ಹಲವು ಅಧಿಕ ವಿಶೇಷತೆ ಕೂಡ ಒಳಗೊಂಡಿದೆ.

ಮಾರುತಿ ಸುಜುಕಿ ಆಲ್ಟೊ 800 (Maruti Suzuki Alto 800)
ಮಾರುತಿ ಕಂಪನಿಯ ಇನ್ನೊಂದು ಜನಪ್ರಿಯ ಕಾರ್ ಆಗಿರುವ ಮಾರುತಿ ಸುಜುಕಿ ಆಲ್ಟೊ 800 ಕೂಡ ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿರುವ ಕಾರುಗಳಲ್ಲಿ ಒಂದಾಗಿದೆ. 2024 ರ ವರ್ಷದಲ್ಲಿ ದಾಖಲೆಯ ಮಾರಾಟ ಕಂಡಿದ್ದ ಮಾರುತಿ ಸುಜುಕಿ ಆಲ್ಟೊ 800 2025 ರ ವರ್ಷದಲ್ಲಿ ಕೂಡ ದಾಖಲೆಯ ಬುಕಿಂಗ್ ಕಂಡಿದೆ. ಸುಮಾರು 4 ಲಕ್ಷ ರೂಪಾಯಿಯಿಂದ ಆರಂಭ ಆಗುವ ಮಾರುತಿ ಸುಜುಕಿ ಆಲ್ಟೊ 800 ಕಾರ್ CNG ಮತ್ತು ಪೆಟ್ರೋಲ್ ಮಾದರಿಯಲ್ಲಿ ಲಭ್ಯವಿದೆ. CNG ಮಾದರಿ 35 ಕಿಲೋಮೀಟರ್ ಮೈಲೇಜ್ ಕೊಟ್ಟರೆ ಪೆಟ್ರೋಲ್ ಮಾದರಿ ಸುಮಾರು 22 ಕಿಲೋಮೀಟರ್ ತನಕ ಮೈಲೇಜ್ ನೀಡುತ್ತದೆ.

ರೆನಾಲ್ಟ್ ಕ್ವಿಡ್ (Renault Kwid)
ರೆನಾಲ್ಟ್ ಕಂಪನಿಯ ಬಜೆಟ್ ಬೆಲೆಯ ಕಾರ್ ಆಗಿರುವ ರೆನಾಲ್ಟ್ ಕ್ವಿಡ್ ಕೂಡ ದೇಶದಲ್ಲಿ 2024 ರ ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಕಾರ್ ಅನಿಸಿಕೊಂಡಿದೆ. 5 ಲಕ್ಷ ರೂ ಬೆಲೆಯಿಂದ ಆರಂಭ ಆಗುವ ರೆನಾಲ್ಟ್ ಕ್ವಿಡ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಲಭ್ಯವಿದೆ. ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ, ರೆನಾಲ್ಟ್ ಕ್ವಿಡ್ ಕಾರ್ ಸುಮಾರು 23 ಕಿಲೋಮೀಟರ್ ಮೈಲೇಜ್ ಕೊಡಲಿದೆ.

Leave a Comment