Cash Transaction Limits Per Day: ಹೊಸ ಹಣಕಾಸು ವರ್ಷದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುತ್ತಿದೆ ಎಂದು ಹೇಳಬಹುದು. ಹೌದು, ದೇಶದ ಹಣಕಾಸು ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇದರ ನಡುವೆ ಈಗ ಬ್ಯಾಂಕುಗಳಲ್ಲಿ ಜನರು ಮಾಡಿರುವ ಸೇವಿಂಗ್ ಖಾತೆಗೆ ಸಂಬಂಧಿಸಿದಂತೆ ಕೂಡ ಕೆಲವು ಹೊಸ ಬದಲಾವಣೆ ಜಾರಿಗೆ ಬರುತ್ತಿದೆ. ಇನ್ನು ಜಾರಿಗೆ ಬರುತ್ತಿರುವ ಹೊಸ ನಿಯಮಗಳ ಪ್ರಕಾರ, ಇನ್ನುಮುಂದೆ ಜನರು ತಮ್ಮ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಇಟ್ಟರೆ ಅವರು ಕಡ್ಡಾಯವಾಗಿ ದಂಡ ಪಾವತಿ ಮಾಡಬೇಕು. ಹೌದು, ಬ್ಯಾಂಕ್ ಖಾತೆಗಳಲ್ಲಿ ಹಣ ಇಡುವುದಕ್ಕೆ ಸಂಬಂಧಿಸಿದಂತೆ ಈಗ ಭಾರತೀಯ ತೆರಿಗೆ ಇಲಾಖೆ ನಿಯಮ ಜಾರಿಗೆ ತಂದಿದೆ.
ಬ್ಯಾಂಕ್ ಖಾತೆಗೆ ಜಾರಿಗೆ ಬಂತು ಹೊಸ ನಿಯಮ
ಹೌದು, ಭಾರತೀಯ ತೆರಿಗೆ ಇಲಾಖೆ (Income Tax department India) ಈಗ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ದೇಶದಲ್ಲಿ ಜಾರಿಗೆ ತರಲು ಮುಂದಾಗಿದೆ. ಇನ್ನುಮುಂದೆ ತೆರಿಗೆ ಇಲಾಖೆ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಇನ್ನುಮುಂದೆ ಇದಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟರೆ ಕಡ್ಡಾಯವಾಗಿ ದಂಡ ಪಾವತಿ ಮಾಡಬೇಕು. ಅಕ್ರಮ ಹಣಕಾಸಿನ ವಹಿವಾಟು ತಡೆಗಟ್ಟುವ ಉದ್ದೇಶದಿಂದ ದೇಶದಲ್ಲಿ ಹೊಸ ಹಣಕಾಸು ವರ್ಷದಿಂದ ಹೊಸ ಹಣಕಾಸು ನಿಯಮ ಜಾರಿಗೆ ತರಲು ಈಗ ಕೇಂದ್ರ ತೆರಿಗೆ ಇಲಾಖೆ ಮುಂದಾಗಿದೆ.
ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ಮಾತ್ರ ಇಡಬಹುದು
ಕೇಂದ್ರ ತೆರಿಗೆ ಇಲಾಖೆ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಇನ್ನುಮುಂದೆ ಬ್ಯಾಂಕುಗಳಲ್ಲಿ ಸೇವಿಂಗ್ ಖಾತೆ ಇದ್ದವರು ಒಂದು ದಿನಕ್ಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಹಣವನ್ನು ಡೆಪಾಸಿಟ್ ಮಾಡಿದರೆ ಅವರಿಗೆ ತೆರಿಗೆ ನೋಟೀಸ್ ಕಳುಹಿಸಲು ಈಗ ಕೇಂದ್ರ ತೆರಿಗೆ ಇಲಾಖೆ ನಿರ್ಧಾರ ಮಾಡಿದೆ. ಕಪ್ಪು ಹಣ ಮತ್ತು ಅಕ್ರಮ ಹಣಕಾಸು ವಹಿವಾಟು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ತೆರಿಗೆ ಇಲಾಖೆ ಹೊಸ ಹಣಕಾಸು ವರ್ಷದಿಂದ ಹೊಸ ಹಣಕಾಸು ನೀತಿ ನಿಯಮ ಜಾರಿಗೆ ತಂದಿದೆ. ಹಾಗಾದರೆ ಬ್ಯಾಕ್ ಖಾತೆಯಲ್ಲಿ ಒಂದು ದಿನಕ್ಕೆ ಎಷ್ಟು ಹಣ ಡೆಪಾಸಿಟ್ ಮಾಡಬಹುದು ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.
ಭಾರತೀಯ ತೆರಿಗೆ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಒಂದು ದಿನಕ್ಕೆ ಎರಡು ಲಕ್ಷ ರೂಪಾಯಿಗಳ ತನಕ ನಗದು ಹಣ ವಹಿವಾಟಿ ಮಾಡಬಹುದು ಮತ್ತು ಅದನ್ನು ಬ್ಯಾಂಕ್ ಖಾತೆಯಲ್ಲಿ ಇಡಬಹುದು, ಆದರೆ ಆತ ಹಣದ ಮೂಲವನ್ನು ಆತ ಬ್ಯಾಂಕ್ ಅಧಿಕಾರಿಗಳು ಕೇಳಿದಾಗ ಕಡ್ಡಾಯವಾಗಿ ನೀಡಬೇಕು. 1961 ರ ಆದಾಯ ತೆರಿಗೆ ಸೆಕ್ಷನ್ 269ST ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ 2 ಲಕ್ಷ ರೂಪಾಯಿಯ ತನಕ ನಗದು ಹಣದ ವಹಿವಾಟು ಮಾಡಬಹುದು.
ಇನ್ನು ಒಬ್ಬ ವ್ಯಕ್ತಿ ಎರಡು ಬ್ಯಾಂಕ್ ಖಾತೆಗಳಲ್ಲಿ ಒಂದೇ ದಿನಕ್ಕೆ ಎರಡು ಲಕ್ಷ ರೂಪಾಯಿಯಿಗಿಂತ ಅಧಿಕ ನಗದು ಹಣದ ವಹಿವಾಟು ಮಾಡಿದರೆ ಆತ ಕಡ್ಡಾಯವಾಗಿ ದಂಡ ಪಾವತಿ ಮಾಡಬೇಕು. ದೇಶದಲ್ಲಿ ನಗದು ಹಣದ ವಹಿವಾಟುಗಳಿಗೆ ಮಿತಿಯನ್ನು ಹಾಕಿಕೊಳ್ಳಲಾಗಿದೆ ಮತ್ತು ಆ ಮಿತಿಯ ಅಡಿಯಲ್ಲಿ ಹಣದ ವಹಿವಾಟು ಮಾಡುವುದು ಕೂಡ ಕಡ್ಡಾಯ ಇನ್ನು ಬ್ಯಾಂಕಿನಲ್ಲಿ ಎರಡು ಲಕ್ಷಕ್ಕಿಂತ ಅಧಿಕ ಹಣಕಾಸು ವಹಿವಾಟನ್ನು ಒಂದೇ ದಿನದಲ್ಲಿ ಮಾಡಿದರೆ ಆತ ತೆರಿಗೆ ಅಧಿಕಾರಿಗಳಿಗೆ ಆ ಹಣದ ಮೂಲ ತಿಳಿಸಿಕೊಡುವುದು ಅತೀ ಕಡ್ಡಾಯ ಆಗಿದೆ.