Home Loan Subsidy: ಮನೆ ಕಟ್ಟುವವರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್, ಕೇಂದ್ರದಿಂದ ಸಿಗಲಿದೆ ಸಬ್ಸಿಡಿ

Home loan Subsidy In Awas Yojana-Urban: ಸ್ವಂತ ಮನೆ ಕಟ್ಟುವ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಇದ್ದೆ ಇರುತ್ತದೆ, ಆದರೆ ಸ್ವಂತ ಮನೆ ಕಟ್ಟಲು ಬೇಕಾಗುವಷ್ಟು ಹಣ ಇಲ್ಲದೆ ಸಾಕಷ್ಟು ಜನರು ಹಲವು ಸಂಘ-ಸಂಸ್ಥೆ ಮತ್ತು ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡು ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದರ ನಡುವೆ ಸ್ವಂತ ಮನೆ ಕಟ್ಟುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಯ ಅಡಿಯಲ್ಲಿ ಹಣಕಾಸಿನ ಸಹಾಯ ಕೂಡ ಮಾಡುತ್ತಿದೆ.

WhatsApp Group Join Now
Telegram Group Join Now

ಇದರ ನಡುವೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಗ ಸ್ವಂತ ಮನೆ ಕಟ್ಟುವವರಿಗೆ ಭರ್ಜರಿ ಗೂಡ ನ್ಯೂಸ್ ನೀಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ವಂತ ಮನೆ ಕಟ್ಟಲು ಮಾಡಿರುವ ಸಾಲದ ಮೇಲೆ ಈಗ ನರೇಂದ್ರ ಮೋದಿ ಸರ್ಕಾರ ಸಬ್ಸಿಡಿ ನೀಡಲು ಮುಂದಾಗಿದೆ. ಯಾರು ಯಾರು ಸ್ವಂತ ಮನೆ ಕಟ್ಟಲು ಸಾಲ ಮಾಡಿಕೊಂಡಿದ್ದಾರೋ ಅವರು ಮನೆ ಸಾಲದ ಮೇಲೆ ಸಬ್ಸಿಡಿ ಪಡೆದುಕೊಳ್ಳಬಹುದು. ಹಾಗಾದರೆ ಗೃಹ ಸಾಲದ ಮೇಲೆ ಸಬ್ಸಿಡಿ ಪಡೆದುಕೊಳ್ಳುವುದು ಹೇಗೆ ಮತ್ತು ಬೇಕಾದ ಅರ್ಹತೆ ಹಾಗು ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇಂದ್ರದಿಂದ ಸಿಗಲಿದೆ ಗೃಹಸಾಲದ ಮೇಲೆ ಸಬ್ಸಿಡಿ
ಕೇಂದ್ರ ಸರ್ಕಾರ ಸ್ವಂತ ಮನೆ ಕಟ್ಟುವ ಬಡವರಿಗಾಗಿ ಈಗಾಗಲೇ ಆವಾಸ್ ಯೋಜನೆಯನ್ನು (PM Awas Scheme) ಜಾರಿಗೆ ತಂದಿದೆ ಮತ್ತು ಆವಾಸ್ ಯೋಜನೆಯ ಅಡಿಯಲ್ಲಿ ದೇಶದ ಸಾಕಷ್ಟು ಬಡವರು ಸ್ವಂತ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇದರ ನಡುವೆ ಈಗ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆವಾಸ್ ಯೋಜನೆ-ನಗರ (PM Awas Scheme-Urban) ಅನ್ನುವ ಹೊಸ ಯೋಜನೆಯನ್ನು ಯಾರಿಗೆ ತಂದಿದೆ. ಆವಾಸ್ ಯೋಜನೆಯ ಮುಂದಿನ ಹಂತವಾಗಿದ್ದು ನಗರ ಪ್ರದೇಶದಲ್ಲಿ ವಾಸಿಸುವ ಜನರಿಗಾಗಿ ಈ ಆವಾಸ್ ಯೋಜನೆ-ನಗರ ಅನ್ನುವ ಇನ್ನೊಂದು ಹೊಸ ಸ್ಕೀಮ್ ಜಾರಿಗೆ ತರಲಾಗಿದೆ.

ಎಷ್ಟು ಮೊತ್ತದ ಗೃಹಸಾಲದ ಮೇಲೆ ಸಿಗಲಿದೆ ಸಬ್ಸಿಡಿ
ಕೇಂದ್ರ ಸರ್ಕಾರದ ಗೃಹಸಾಲದ ಒಂದು ನಿರ್ಧಿಷ್ಟ ಮೊತ್ತದ ಮೇಲೆ ಸಬ್ಸಿಡಿ ನೀಡಲು ಮುಂದಾಗಿದೆ. ಸ್ವಂತ ಮನೆ ಕಟ್ಟುವ ಬಡವರು 35 ಲಕ್ಷ ರೂಪಾಯಿಯ ಮನೆಗೆ ಸುಮಾರು 25 ಲಕ್ಷ ರೂಪಾಯಿಗಳಷ್ಟು ಸಾಲವನ್ನು ಮಾಡಿಕೊಳ್ಳುತ್ತಾರೆ, ಇನ್ನು ಈ 25 ಲಕ್ಷಕ್ಕೆ ಕೇಂದ್ರದಿಂದ ಸಬ್ಸಿಡಿ ಪಡೆದುಕೊಳ್ಳಾಬಹುದು. ಇನ್ನು ಸಾಲದ ಸುಮಾರು 8 ಲಕ್ಷ ರೂಪಾಯಿ ಮೊತ್ತದ ಮೇಲೆ ಶೇಕಡಾ 4 % ಸಬ್ಸಿಡಿ ಹಣವನ್ನು ಕೇಂದ್ರದಿಂದ ಮನೆ ಸಾಲ ಮಾಡಿಕೊಂಡವರು ಪಡೆಯಬಹುದು. ಅರ್ಹ ಫಲಾನುಭವಿಗಳು ಸುಮಾರು 1.8 ಲಕ್ಷ ರೂಪಾಯಿಗಳ ವರೆಗೆ ಸಾಲದ ಮೇಲೆ ಸಬ್ಸಿಡಿ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸಬ್ಸಿಡಿ ಮೊತ್ತವನ್ನು ವಿವಿಧ ಕಂತುಗಳ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಯಾರು ಯಾರು ಸಬ್ಸಿಡಿ ಪಡೆಯಲು ಅರ್ಹರು
ಕೇಂದ್ರದ ಆವಾಸ್ ಯೋಜನೆ-ನಗರ ಅಡಿಯಲ್ಲಿ ಕೆಲವು ವರ್ಗದ ಜನರು ಮಾತ್ರ ಮನೆ ಸಾಲದ ಮೇಲೆ ಸಬ್ಸಿಡಿ ಹಣ ಪಡೆದುಕೊಳ್ಳಬಹುದು. ಯಾವ ವರ್ಗದ ಜನರು ಈ ಯೋಜನೆಯಲ್ಲಿ ಸಬ್ಸಿಡಿ ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ ಪಟ್ಟಿ ಇಲ್ಲಿದೆ.

* ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಜನರು
* ಕಡಿಮೆ ಆದಾಯ ಕೊಂಡಿರುವ ಕುಟುಂಬದವರು
* ಮಧ್ಯಮ ಆದಾಯ ಹೊಂದಿರುವ ಕುಟುಂಬದವರು
* ವಾರ್ಷಿಕವಾಗಿ 3 ಲಕ್ಷ ರೂಪಾಯಿಗಿಂತಲೂ ಕಡಿಮೆ ಆದಾಯ ಹೊಂದಿರುವ ಕುಟುಂಬದವರು
* ಬೇರೆ ಎಲ್ಲಿಯೂ ಸ್ವಂತ ಮನೆ ಇಲ್ಲದವರು

Leave a Comment