Hero Duet Electric Scooter: ಈಗಿನ ಕಾಲದ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ ಮತ್ತು ಅದಕ್ಕೆ ಕಾರಣ ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಪೆಟ್ರೋಲ್ ಬೆಲೆ ಎಂದು ಹೇಳಬಹುದು. ಇದರ ನಡುವೆ ಸಾಕಷ್ಟು ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ದೇಶದಲ್ಲಿ ಲಾಂಚ್ ಮಾಡಿದೆ ಎಂದು ಹೇಳಬಹುದು. ಸದ್ಯ ಹೀರೋ ಕಂಪನಿ (Hero Motor Company) ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ್ದು ಈ ಎಲೆಕ್ಟ್ರಿಕ್ ಸ್ಕೂಟರ್ ಜನರ ಮೆಚ್ಚುಗೆ ಗಳಿಸಿಕೊಳ್ಳುವಲ್ಲಿ ಮತ್ತೆ ಯಶಸ್ವಿಯಾಗಿದೆ ಎಂದು ಹೇಳಬಹುದು. ಹಾಗಾದರೆ ಹೀರೋ ಕಂಪನಿ ಲಾಂಚ್ ಮಾಡಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಯಾವುದು ಮತ್ತು ಸ್ಕೂಟರ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾರುಕಟ್ಟೆಗೆ ಬಂತು ಹೀರೋ ಡುಯೆಟ್ ಎಲೆಕ್ಟ್ರಿಕ್ ಸ್ಕೂಟರ್ (Hero Duet Electric Scooter)
ಹೊಸ ಹೊಸ ಬಗೆಯ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುವಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ಹೀರೋ ಕಂಪನಿ ಈಗ ಎಲೆಕ್ಟ್ರಿಕ್ ಮಾದರಿಯ ಡುಯೆಟ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಹಿಂದೆ ಡುಯೆಟ್ ಸ್ಕೂಟರ್ ಅನ್ನು ನಾವು ಪೆಟ್ರೋಲ್ ಮಾದರಿಯಲ್ಲಿ ಖರೀದಿ ಮಾಡಬಹುದಾಗಿತ್ತು, ಆದರೆ ಈಗ ಎಲೆಕ್ಟ್ರಿಕ್ ಮಾದರಿಯಲ್ಲಿ ಕೂಡ ಹೀರೋ ಡುಯೆಟ್ ಸ್ಕೂಟರ್ ಅನ್ನು ಖರೀದಿ ಮಾಡಬಹುದು.
ಹೀರೋ ಡುಯೆಟ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು ಮೈಲೇಜ್
ಹೀರೋ ಕಂಪನಿ ಸಾಕಷ್ಟು ವರ್ಷಗಳಿಂದ ಜನರ ವಿಶ್ವಾಸವನ್ನು ಗಳಿಸಿಕೊಂಡು ಬಂದ ಮೋಟಾರ್ ಕಂಪನಿ ಆಗಿದೆ. ಸದ್ಯ ಹೀರೋ ಈಗ ಡುಯೆಟ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆ ಮಾಡಿದೆ ಮತ್ತು ಹೀರೋ ಡುಯೆಟ್ ಎಲೆಕ್ಟ್ರಿಕ್ ಸ್ಕೂಟರ್ ಸುಮಾರು 100 ಕಿಲೋಮೀಟರ್ ತನಕ ಮೈಲೇಜ್ ಕೊಡಲಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಹಲವು ಮಾದರಿಯಲ್ಲಿ ಹೀರೋ ಡುಯೆಟ್ ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆಗಿದೆ ಮತ್ತು ಹೀರೋ ಡುಯೆಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 80 ಸಾವಿರ ರೂಪಾಯಿಯಿಂದ 1.2 ಲಕ್ಷ ರೂಪಾಯಿಯಲ್ಲಿ ಖರೀದಿ ಮಾಡಬಹುದು.
ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 100 ಕಿಲೋಮೀಟರ್ ಮೈಲೇಜ್ ಕೊಡುವ ಹೀರೋ ಡುಯೆಟ್ ಸ್ಕೂಟರ್ ಗೆ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಲು 5 ಘಂಟೆ ಸಮಯ ತಗೆದುಕೊಳ್ಳುತ್ತದೆ. ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಹೀರೋ ಕಂಪನಿಯ ಇನ್ನೊಂದು ಮಾದರಿಯ ಅತೀ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಮುಂದಿನ ವರ್ಷ ಅಂದರೆ 2026 ರಲ್ಲಿ ಮಾರುಕಟ್ಟೆಗೆ ಲಾಂಚ್ ಆಗಲಿದೆ. 2026 ರ ವರ್ಷದಲ್ಲಿ ಹೀರೋ ಡುಯೆಟ್ E ಅನ್ನುವ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆಗಲಿದ್ದು ಈ ಸ್ಕೂಟರ್ ಬೆಲೆ ಸುಮಾರು 52 ಸಾವಿರ ರೂ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಹೀರೋ ಡುಯೆಟ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ
ಮಾರುಕಟ್ಟೆಗೆ ಬಿಡುಗಡೆ ಆಗಿರುವ ಹೀರೋ ಡುಯೆಟ್ ಎಲೆಕ್ಟ್ರಿಕ್ ಸ್ಕೂಟರ್ ಹಲವು ಆಧುನಿಕ ಫೀಚರ್ ಒಳಗೊಂಡಿದೆ ಎಂದು ಹೇಳಬಹುದು. ಹೌದು, ಡಿಜಿಟಲ್ ಡಿಸ್ಪ್ಲೇ, ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್, ಲೊಕೇಶನ್, ಮೊಬೈಲ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಯನ್ನು ನಾವು ಈ ಹೀರೋ ದುಕ್ಟ್ ಸ್ಕೂಟರ್ ನಲ್ಲಿ ನೋಡಬಹುದು.