Hero Xoom: 87 ಸಾವಿರಕ್ಕೆ ಮನೆಗೆ ತನ್ನಿ 60 Km ಮೈಲೇಜ್ ಕೊಡುವ ಈ ಹೀರೋ ಸ್ಕೂಟರ್, ಯುವತಿಯರಿಗಾಗಿ

Hero Xoom Scooter Price And Mileage: ಹೀರೋ ಕಂಪನಿ (Hero Company) ಈಗಾಗಲೇ ಸಾಕಷ್ಟು ಮಾದರಿಯ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಲಾಂಚ್ ಮಾಡಿದೆ ಎಂದು ಹೇಳಬಹುದು. ಸ್ಕೂಟರ್ ಮಾರಾಟದಲ್ಲಿ ಜನರ ಮೆಚ್ಚುಗೆ ಗಳಿಸಿಕೊಂಡಿರುವ ಹೀರೋ ಕಂಪನಿ ಈಗ ಹೊಸ ಮಾದರಿಯ ಸ್ಕೂಟರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುವುದರ ಮೂಲಕ ಇನ್ನಷ್ಟು ಜನರ ವಿಶ್ವಾಸ ಗಳಿಸಿಕೊಂಡಿದೆ. ಯುವಕರಿಗೆ ಮತ್ತು ಯುವತಿಯರಿಗೆ ಇಷ್ಟವಾಗುವ ಕಡಿಮೆ ತೂಕದ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಅನ್ನು ಈಗ ಹೀರೋ ಕಂಪನಿ ಲಾಂಚ್ ಮಾಡಿದ್ದು ಸದ್ಯ ಈ ಸ್ಕೂಟರ್ ಸಾಕಷ್ಟು ಬುಕಿಂಗ್ ಆಗುವುದು ಮಾತ್ರವಲ್ಲದೆ 2024 ರ ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಸ್ಕೂಟರ್ ಕೂಡ ಅನಿಸಿಕೊಂಡಿದೆ. ಹಾಗಾದರೆ ಹೀರೋ ಕಂಪನಿಯ ಜನರ ಮೆಚ್ಚಿನ ಈ ಸ್ಕೂಟರ್ ಯಾವುದು ಮತ್ತು ಇದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಯುವಕರ ಮನಗೆದ್ದ ಹೀರೋ Xoom
ಉತ್ತರವಾದ ನೋಟವನ್ನು ಹೊಂದಿರುವ ಹೀರೋ Xoom ಸ್ಕೂಟರ್ (Hero xoom scooter) ಈಗ ಯುವಕರ ಮನಸ್ಸು ಗೆಲ್ಲುವಲ್ಲೂ ಯಶಸ್ವಿಯಾಗಿದೆ ಎಂದು ಹೇಳಬಹುದು. ಹೀರೋ ಕಂಪನಿಯ ಜನಪ್ರಿಯ ಸ್ಕೂಟರ್ ಅನಿಸಿಕೊಂಡಿರುವ ಹೀರೋ Xoom 125cc ಸ್ಕೂಟರ್ ಆಗಿದ್ದು ಕಡಿಮೆ ತೂಕ ಹೊಂದಿರುವ ಕಾರಣ ಯುವತಿಯರಿಗೂ ಕೂಡ ಬೆಸ್ಟ್ ಎಂದು ಹೇಳಬಹುದು. ಬೇರೆ ಮಾದರಿಯ ಹೀರೋ ಸ್ಕೂಟರ್ ಗಳಿಗೆ ಹೋಲಿಕೆ ಮಾಡಿದರೆ ಹೀರೋ Xoom ವಿಭಿನ್ನವಾದ ಲುಕ್ ಹೊಂದಿದ್ದು ಇದು ಸ್ಕೂಟರ್ ಹೆಚ್ಚು ಹೆಚ್ಚು ಯುವತಿಯರು ಖರೀದಿ ಮಾಡುತ್ತಿದ್ದಾರೆ.

ಹೀರೋ Xoom ಸ್ಕೂಟರ್ ಬೆಲೆ ಮತ್ತು ಮೈಲೇಜ್
ಬೆಲೆಯಲ್ಲಿ ಕೂಡ ಹೀರೋ Xoom ಜನರ ಮೆಚ್ಚುಗೆಗೆ ಕಾರಣವಾಗಿದೆ. ಹೀರೋ Xoom 125 ಸ್ಕೂಟರ್ ಆರಂಭಿಕ ಬೆಲೆ ಸುಮಾರು 87 ಸಾವಿರ ರೂಪಾಯಿ ಆಗಿದೆ ಮತ್ತು ವಿವಿಧ ಮಾದರಿಯನ್ನು ವಿವಿಧ ಬೆಲೆಯನ್ನು ಕಾಣಬಹುದು. ಚಾಲಕರ ಸುರಕ್ಷತೆಯ ಉದ್ದೇಶದಿಂದ ಹೀರೋ Xoom ಎರಡು ಚಕ್ರದಲ್ಲಿ ಡಿಸ್ಕ್ ಬ್ರೇಕ್ ಕೂಡ ಹೊಂದಿದೆ ಮತ್ತು ಈ ಸ್ಕೂಟರ್ ನಲ್ಲಿ ನಾವು ಲೊಕೇಶನ್, ಮೊಬೈಲ್ ಚಾರ್ಜಿಂಗ್, ಡಿಜಿಟಲ್ ಡಿಸ್ಪ್ಲೇ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಒಳಗೊಂಡಿದೆ.

ಇನ್ನು ಮೈಲೇಜ್ ಬಗ್ಗೆ ಮಾತನಾಡುವುದರೆ, ಹೀರೋ Xoom ಸ್ಕೂಟರ್ ಸುಮಾರು 60 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ. ಹೀರೋ Xoom 9.8 bhp ಪವರ್ ಮತ್ತು 10.4 nm ಟಾರ್ಕ್ ಕೂಡ ಉತ್ಪಾದನೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಹೀರೋ Xoom ಸ್ಕೂಟರ್ ಆರಂಭಿಕ ಬೆಲೆ 87 ಸಾವಿರ ರೂಪಾಯಿ ಆಗಿದೆ ಮತ್ತು ಬೇರೆಬೇರೆ ಮಾದರಿಯ ಮೇಲೆ ಬೆಲೆ ಏರಿಕೆಯಾಗಿದೆ. ಸ್ಪೋರ್ಟಿ ಲುಕ್, LED ಹೆಡ್ ಲೈಟ್ ಮತ್ತು LED ಇಂಡಿಕೇಟರ್ ಸೇರಿದಂತೆ ಹಲವು ವಿಶೇಷತೆ ಈ ಸ್ಕೂಟರ್ ನಲ್ಲಿದೆ.

Leave a Comment