Second PUC Result Karnataka: PUC ಪರೀಕ್ಷೆ (PUC Exam) ಬರೆದ ಮಕ್ಕಳು ಸದ್ಯ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಬಹುದು. ಇನ್ನು PUC ಪರೀಕ್ಷೆಯ ಮೌಲ್ಯಮಾಪನ ಕೂಡ ನಡೆದಿದ್ದು ಸದ್ಯ ಸರ್ಕಾರ ಈಗ PUC ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲು ಮುಂದಾಗಿದೆ. ಪರೀಕ್ಷೆಯ ಫಲಿತಾಂಶದ ದಿನಾಂಕವನ್ನು ಈಗ ರಾಜ್ಯ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ ಮತ್ತು ಮಕ್ಕಳು ಈ ದಿನಾಂಕದಂದು ಫಲಿತಾಂಶ ನೋಡಬಹುದು. ಹಾಗಾದರೆ PUC ರಿಸಲ್ಟ್ ಯಾವ ಮತ್ತು ರಿಸಲ್ಟ್ ನೋಡುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ದಿನದಂದು ಸೆಕೆಂಡ್ PUC ರಿಸಲ್ಟ್
ಹೌದು, PUC ಮಕ್ಕಳ ಪರೀಕ್ಷೆಯ ಮೌಲ್ಯಮಾಪನ ಪೂರ್ಣವಾಗಿದ್ದು ಸದ್ಯ ಕರ್ನಾಟಕ ಶಿಕ್ಷಣ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲು PUC ರಿಸಲ್ಟ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿದೆ. ಏಪ್ರಿಲ್ ತಿಂಗಳ 11 ರ ಒಳಗಾಗಿ ದ್ವಿತೀಯ PUC ರಿಸಲ್ಟ್ ಬಿಡುಗಡೆ ಮಾಡಲು ಈಗ ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಮಾರ್ಚ್ 1 ರಿಂದ 20 ನೇ ತಾರೀಕಿನ ತನಕ ದ್ವಿತೀಯ PUC ಪರೀಕ್ಷೆ ನಡೆದಿದ್ದು ಸದ್ಯ ಮೌಲ್ಯಮಾಪನ ಕೂಡ ಪೂರ್ಣವಾಗಿದೆ. ಇನ್ನು ಕಳೆದ ವರ್ಷ ಏಪ್ರಿಲ್ 10 ನೇ ತಾರೀಕಿನಂದು ದ್ವಿತೀಯ PUC ರಿಸಲ್ಟ್ ಬಿಡುಗಡೆ ಮಾಡಲಾಗಿತ್ತು, ಅದೇ ರೀತಿಯಲ್ಲಿ ಈ ವರ್ಷ ಕೂಡ ಅದೇ ಸಮಯದಲ್ಲಿ ದ್ವಿತೀಯ PUC ರಿಸಲ್ಟ್ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.
ವಿದ್ಯಾರ್ಥಿಗಳು ಆನ್ಲೈನ್ ಮೂಲಕ ರಿಸಲ್ಟ್ ಚೆಕ್ ಮಾಡಿ
ದ್ವಿತೀಯ PUC ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದು. karresult.nic.in ಅಥವಾ kseab.karnaataka.govt.in ಇನ್ ವೆಬ್ಸೈಟ್ ನಲ್ಲಿ ಮಕ್ಕಳು ಫಲಿತಾಂಶ ಚೆಕ್ ಮಾಡಿಕೊಳ್ಳಬಹುದು. ಇನ್ನು ಈ ವೆಬ್ಸೈಟ್ ನಲ್ಲಿ ದ್ವಿತೀಯ PUC ಪರೀಕ್ಷೆ ರಿಸಲ್ಟ್ ನೇರ ಲಿಂಕ್ ನಿಮಗೆ ಸಿಗಲಿದೆ ನಿಮ್ಮ ಹುಟ್ಟಿದ ದಿನಾಂಕ ಮತ್ತು ಹಾಲ್ ಟಿಕೆಟ್ ನಂಬರ್ ಹಾಕುವುದರ ಮೂಲಕ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದು.