UPS: ದೇಶಾದ್ಯಂತ ಏಕೀಕೃತ ಪಿಂಚಣಿ ಯೋಜನೆ ಜಾರಿ, ಇನ್ಮುಂದೆ ಸರ್ಕಾರೀ ನೌಕರರಿಗೆ ಸಿಗಲಿದೆ ಇಷ್ಟು ಪೆನ್ಷನ್

Unified Pension Scheme: ಹೊಸ ಹಣಕಾಸು ವರ್ಷ (New Financial Year) ಜಾರಿಗೆ ಬಂದ ಬೆನ್ನಲ್ಲೇ ಹಣಕಾಸು ಕ್ಷೇತ್ರದಲ್ಲಿ ಕೆಲವು ಬದಲಾವಣೆ ಆಗಿರುವುದನ್ನು ನಾವು ಗಮನಿಸಿರಬಹುದು. ಇದರ ಬೆನ್ನಲ್ಲೇ ಆಗ ಸರ್ಕಾರೀ ನೌಕರರ ಪಿಂಚಣಿ ವಿಷಯವಾಗಿ ದೇಶದಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ. ಹೌದು, ಏಪ್ರಿಲ್ 1 ನೇ ತಾರೀಕಿನಿಂದ ದೇಶದಲ್ಲಿ ಹೊಸ ರೀತಿಯ ಪಿಂಚಣಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಬಹುದು. ದೇಶದಲ್ಲಿ ಏಕೀಕೃತ ಪಿಂಚಣಿ ಏಪ್ರಿಲ್ 1 ನೇ ತಾರೀಕಿನಿಂದ ಈ ಸರ್ಕಾರೀ ನೌಕರರು ಮುಂದಿನ ದಿನಗಳಲ್ಲಿ ಏಕೀಕೃತ ಪಿಂಚಣಿ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಹೇಳಬಹುದು. ಹಾಗಾದರೆ ಏನಿದು ಏಕೀಕೃತ ಪಿಂಚಣಿ ಯೋಜನೆ ಮತ್ತು ಈ ಯೋಜನೆಯ ಲಾಭ ಯಾರು ಯಾರು ಪಡೆದುಕೊಳ್ಳಲಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ದೇಶದಲ್ಲಿ ಏಕೀಕೃತ ಪಿಂಚಣಿ ಯೋಜನೆ ಜಾರಿ
ಪಿಂಚಣಿ ನಿಧಿ ಮತ್ತು ಅಭಿವೃದ್ಧಿ ಪ್ರಾಧಿಕಾರ ದೇಶದಲ್ಲಿ ಏಕೀಕೃತ ಪಿಂಚಣಿ ಯೋಜನೆಯ ಜಾರಿಗೆ ತರುವುದರ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ. ಎಲ್ಲಾ ಕೇಂದ್ರ ಸರ್ಕಾರೀ ನೌಕರರಿಗೆ ಏಪ್ರಿಲ್ 1 ನೇ ತಾರೀಕಿನಿಂದ Unified Pension Scheme ನಲ್ಲಿ ಆಯ್ಕೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಯಾವ ಯಾವ ಕೇಂದ್ರ ಸರ್ಕಾರೀ ನೌಕರರು ಈ Unified Pension scheme ಆಯ್ಕೆ ಮಾಡಿಕೊಳ್ಳುತ್ತಾರೋ ಅವರು ಏಕೀಕೃತ ಪಿಂಚಣಿ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ.

ಇನ್ನು ಏಪ್ರಿಲ್ 1 ನೇ ತಾರೀಕಿನಿಂದ ಏಕೀಕೃತ ಪಿಂಚಣಿ ಯೋಜನೆ ತೆರೆದಿರಲಿದ್ದು ರಾಜ್ಯ ಸರ್ಕಾರೀ ನೌಕರರು ಕೂಡ ಈ ಯೋಜನೆಯಲ್ಲಿ ಸೇರಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಲಸವನ್ನು ಮಾಡುವ ನೌಕರರಿಗೆ ಒಂದು ನಿರ್ಧಿಷ್ಟವಾದ ಭದ್ರತೆಯನ್ನು ನೀಡುವ ಉದ್ದೇಶದಿಂದ ಸರ್ಕಾರ ಈ ಏಕೀಕೃತ ಪಿಂಚಣಿ ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದಿದೆ. ಕೆಲವು ಷರತ್ತುಗಳ ಅಡಿಯಲ್ಲಿ ಕೇಂದ್ರ ಸರ್ಕಾರೀ ನೌಕರರು ಈ ಏಕೀಕೃತ ಪಿಂಚಣಿ ಯೋಜನೆಯ ಲಾಭ ಪಡೆಯಬಹುದು. ಇನ್ನು 25 ವರ್ಷದಿಂದ ಸರ್ಕಾರೀ ನೌಕರಿಯಲ್ಲಿ ಕೆಲಸ ಮಾಡುತ್ತಿರುವವರು ಈ ಯೋಜನೆಯ ಲಾಭ ಸಂಪೂರ್ಣವಾಗಿ ಪಡೆದುಕೊಳ್ಳಬಹುದು.

ಯಾವ ಕೇಂದ್ರ ಸರ್ಕಾರೀ ನೌಕರ ಏಕೀಕೃತ ಪಿಂಚಣಿ ಯೋಜನೆಗೆ ಸೇರಿಕೊಳ್ಳುತ್ತಾನೋ ಆತ ತನ್ನ ವರ್ಷದ ಮೂಲ ವೇತನದ ಶೇಕಡಾ 50 ಕ್ಕೆ ಸಮನಾಗಿ ಪಿಂಚಣಿ ಪಡೆದುಕೊಳ್ಳಲಿದ್ದಾನೆ. ಉದಾಹರಣೆಯಲ್ಲಿ ಹೇಳಬೇಕು ಅಂದರೆ, ಯಾರಾದರೂ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರೀ ನೌಕರಿಯಲ್ಲಿ ಇದ್ದು ಅವರು ಈ ಏಕೀಕೃತ ಪಿಂಚಣಿ ಯೋಜನೆಯನ್ನು ಪಡೆದರೆ ತಿಂಗಳಿಗೆ 10,000 ರೂ ತನಕ ಪಿಂಚಣಿ ಹಣ ಪಡೆದುಕೊಳ್ಳಲಿದ್ದಾರೆ. ಇನ್ನು 25 ವರ್ಷಗಳಿಂದ ಪೂರ್ಣ ಸೇವೆ ಸಲ್ಲಿಸಿದವರು ಈ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳಲಿದ್ದಾರೆ.

ಇನ್ನು 25 ವರ್ಷಕ್ಕಿಂತ ಅಧಿಕ ಸರ್ಕಾರೀ ಸೇವೆಯನ್ನು ಮಾಡಿದ್ದು ಅವರ ವರ್ಷದ ಸರಾಸರಿ ಮೂಲ ವೇತನ 1 ಲಕ್ಷ ರೂಪಾಯಿ ಆಗಿದ್ದರೆ ಅವರು ತಿಂಗಳು ಸುಮಾರು 50 ಸಾವಿರ ರೂಪಾಯಿಯ ತನಕ ಪಿಂಚಣಿ ಲಾಭ ಪಡೆದುಕೊಳ್ಳಲಿದ್ದಾರೆ. ಇನ್ನು ಏಕೀಕೃತ ಪಿಂಚಣಿ ಯೋಜನೆಯ ಲಾಭ ನೌಕರ ಎಷ್ಟು ವರ್ಷಗಳಿಂದ ಸರ್ಕಾರೀ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಅನ್ನುವುದರ ಮೇಲೆ ನಿರ್ಧಾರ ಆಗಿರುತ್ತದೆ. ಸದ್ಯ ದೇಶದಲ್ಲಿ ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಬಂದಿದ್ದು ಆಸಕ್ತ ಸರ್ಕಾರೀ ನೌಕರರು ಅರ್ಜಿ ಸಲ್ಲಿಸುವುದರ ಮೂಲಕ ಈ ಏಕೀಕೃತ ಪಿಂಚಣಿ ಯೋಜನೆಯ ಲಾಭ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Leave a Comment