Note Sale In OLX: ನೋಟುಗಳು ಹಳೆಯದಾದರೂ ಅದರ ಬೆಲೆ ಕಡಿಮೆ ಆಗುವುದಿಲ್ಲ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಹೇಳಬಹುದು. ಹೌದು, ಕೇವಲ 10 ರೂಪಾಯಿ ನೋಟಿಯಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ಸಂಪಾದನೆ ಮಾಡಬಹುದು ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಈಗಾಗಲೇ ಸಾಕಷ್ಟು ಜನರು ಕೇವಲ 10 ರೂಪಾಯಿಯ ಹಳೆಯ ನೋಟಿನಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ಸಂಪಾಧನೆ ಮಾಡುತ್ತಿದ್ದಾರೆ. ಹಳೆಯ ನೋಟುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ ಮತ್ತು ಹಳೆಯ ನೋಟುಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವುದರ ಮೂಲಕ ಸಾಕಷ್ಟು ಜನರು ಈಗ ಹಣ ಗಳಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ 10 ರೂಪಾಯಿ ನೋಟಿನ ಮೂಲಕ ಲಕ್ಷ ಲಕ್ಷ ರೂಪಾಯಿ ಹಣ ಗಳಿಸುವುದು ಹೇಗೆ ಮತ್ತು ಅದನ್ನು ಮಾರಾಟ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆನ್ಲೈನ್ ಮಾರಾಟ ಮಾಡಲಾಗುತ್ತಿದೆ ಹಳೆಯ ನೋಟ್
ಹಳೆಯ ನೋಟುಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವುದರ ಮೂಲಕ ಸಾಕಷ್ಟು ಜನರು ಹಣ ಗಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ 5 ರೂಪಾಯಿಯ ಹಳೆಯ ನೋಟುಗಳಿಗೆ ಆನ್ಲೈನ್ ನಲ್ಲಿ ದಾಖಲೆಯ ಬೇಡಿಕೆ ಬಂದಿತ್ತು, ಆದೇ ರೀತಿಯಲ್ಲಿ ಈಗ 10 ರೂಪಾಯಿಯ ಹಳೆಯ ನೋಟುಗಳಿಗೆ ಬೇಡಿಕೆ ಹೆಚ್ಚಾಗಿದೆ ಮತ್ತು ಹಳೆಯ ನೋಟುಗಳ ಮೂಲಕ ಸುಮಾರು 6 ಲಕ್ಷ ರೂಪಾಯಿಯ ತನಕ ಹಣ ಗಳಿಸಬಹುದು.
10 ರೂಪಾಯಿಯ ಈ ನೋಟ್ ಇದ್ದರೆ ಸಿಗಲಿದೆ 6 ಲಕ್ಷ ರೂ
ಹೌದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತು ನೋಟಿಗೆ ಸಾಕಷ್ಟು ಬೇಡಿಕೆ ಬಂದಿದೆ ಮತ್ತು 10 ರೂಪಾಯಿಯ ನೋಟಿನ ಮೇಲೆ ಈ ಕೆಲವು ವಿಶೇಷತೆ ಇದ್ದರೆ ಸುಮಾರು 6 ಲಕ್ಷ ರೂಪಾಯಿಯ ತನಕ ಲಾಭ ಗಳಿಸಬಹುದು. ಮುಸ್ಲಿಂ ಸಮುದಾಯದಲ್ಲಿ 786 ನಂಬರ್ ಗೆ ಬಹಳ ಪ್ರಾಮುಖ್ಯತೆ ಇದೆ ಮತ್ತು ಅದೇ ರೀತಿಯಲ್ಲಿ ಈ ಸಂಖ್ಯೆಯನ್ನು ಮುಸ್ಲಿಂ ಸಮುದಾಯದಲ್ಲಿ ಅದೃಷ್ಟದ ಸಂಖ್ಯೆ ಎಂದು ಕೂಡ ಕರೆಯುತ್ತಾರೆ. ಯಾರ ಬಳಿ ಹತ್ತು ರೂಪಾಯಿಯ 786 ನಂಬರ್ ಇರುವ ಇರುವ ನೋಟ್ ಇದೆಯೋ ಅವರು ಆ ನೋಟುಗಳನ್ನು ಮಾರಾಟ ಮಾಡುವುದರ ಮೂಲಕ ಹಣ ಗಳಿಸಬಹುದು.
ಇನ್ನು 10 ರೂಪಾಯಿಯ 786 ನಂಬರ್ ಇರುವ ನೋಟ್ ನಿಮ್ಮ ಬಳಿ ಇದ್ದರೂ ಕೂಡ ನೀವು ಅದನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಹೀಗೆ ಹತ್ತು ರೂಪಾಯಿಯ ಮೂರೂ ನೋಟುಗಳು ನಿಮ್ಮ ಬಳಿ ಇದ್ದರೆ ನೀವು 18 ಲಕ್ಷ ರೂಪಾಯಿಯ ತನಕ ಹಣ ಗಳಿಸಬಹುದು. ಇನ್ನು ಹಳೆಯ ನೋಟುಗಳನ್ನು ಮಾರಾಟ ಮಾಡುವುದು ಹೇಗೆ ಮತ್ತು ಯಾವ ವೆಬ್ಸೈಟ್ ನಲ್ಲಿ ಹಳೆಯ ನೋಟುಗಳನ್ನು ಸೇಲ್ ಮಾಡಬಹುದು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಹಳೆಯ ನೋಟುಗಳನ್ನು ಮಾರಾಟ ಮಾಡಲು ನೀವು ಮೊದಲು OLX ವೆಬ್ಸೈಟ್ ಗೆ ಲಾಗಿನ್ ಮಾಡಬೇಕಾಗುತ್ತದೆ. ನೀವು OLX Website ಗೆ ಲಾಗಿನ್ ಆದನಂತರ ಅಲ್ಲಿ ನಿಮ್ಮ ಬಳಿ ಇರುವ 10 ರೂಪಾಯಿ ನೋಟುಗಳನ್ನು ಮಾರಾಟ ಮಾಡಲು ನೋಟಿನ ಫೋಟೋ ಅಪ್ಲೋಡ್ ಮಾಡಬೇಕು. ನೀವು ನೋಟುಗಳ ಫೋಟೋ ಅಪ್ಲೋಡ್ ಮಾಡಿದ ನಂತರ ಗ್ರಾಹಕರು ನಿಮ್ಮನ್ನು ಸಂಪರ್ಕ ಮಾಡುತ್ತಾರೆ.
ಇದು ಕಾನೂನು ಬಾಹಿರ ಪ್ರಕ್ರಿಯೆ ಆಗಿದೆ
ಆನ್ಲೈನ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ನೋಟುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ ಆಗಿದೆ. ಕೇಂದ್ರ ಸರ್ಕಾರ ಈ ರೀತಿ ನೋಟುಗಳನ್ನು ಮಾರಾಟ ಮಾಡಬಾರದು ಎಂದು ಈಗಾಗಲೇ ಆದೇಶವನ್ನು ಕೂಡ ಹೊರಡಿಸಿದೆ. ಕೇಂದ್ರ ಸರ್ಕಾರ ಎಷ್ಟೇ ಆದೇಶ ಹೊರಡಿಸಿದರು ಕೂಡ ಆನ್ಲೈನ್ ನಲ್ಲಿ ನೋಟುಗಳನ್ನು ಮಾರಾಟ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಈ ರೀತಿಯಲ್ಲಿ ಆನ್ಲೈನ್ ನಲ್ಲಿ ನೋಟುಗಳನ್ನು ಮಾರಾಟ ಮಾಡುವ ಸಮಯದಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.