ಗ್ರಾಹಕರಿಗೆ ಇನ್ನೊಂದು ಪ್ಲ್ಯಾನ್ ಬಿಡುಗಡೆ
ಹೌದು, ಸರ್ಕಾರೀ ಸ್ವಾಮ್ಯದ ಟೆಲಿಕಾಂ ಕಂಪನಯ್ ಆಗಿರುವ BSNL ಈಗ 160 ದಿನಗಳ ಹೊಸ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಇನ್ನು ಈ ರಿಚಾರ್ಜ್ ಪ್ಲೇನ್ ಅಡಿಯಲ್ಲಿ ಗ್ರಾಹಕರು ಪ್ರತಿನಿತ್ಯ 2GB ಡೇಟಾ ಜೊತೆಗೆ ಉಚಿತ ಕರೆ ಮತ್ತು 100 SMS ಗಳನ್ನೂ ಕೂಡ ಉಚಿತವಾಗಿ ಪಡೆದುಕೊಳ್ಳಲಿದ್ದಾರೆ. ಇನ್ನು BSNL ಬಿಟ್ಟು ಇತರೆ ಯಾವುದೇ ಟೆಲಿಕಾಂ ಕಂಪನಿಗಳು ಇಷ್ಟು ಅಗ್ಗದ ರಿಚಾರ್ಜ್ ಪ್ಲ್ಯಾನ್ ಹೊಂದಿಲ್ಲ ಎಂದು ಹೇಳಬಹುದು. ಬಡವರಿಗೆ ಮತ್ತು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸೇವೆ ಸಿಗಬೇಕು ಅನ್ನುವ ಉದ್ದೇಶದಿಂದ BSNL ಈಗ 160 ದಿನಗಳ ರಿಚಾರ್ಜ್ ಬಿಡುಗಡೆ ಮಾಡಿದೆ.
ಇನ್ನು ದಿನಕ್ಕೆ 6 ರೂಪಾಯಿ ಹಣವನ್ನು, ಅಂದರೆ 160 ದಿನಗಳಿಗೆ 997 ರೂಪಾಯಿ ರಿಚಾರ್ಜ್ ಮಾಡಿದರೆ ಈ ಸೇವೆಯನ್ನು ಪಡೆದುಕೊಳ್ಳಬಹುದು. ಹೌದು, ಗ್ರಾಹಕರಿಗೆ BSNL 997 ರೂಪಾಯಿಗೆ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ ಮತ್ತು ರಿಚಾರ್ಜ್ ಪ್ಲ್ಯಾನ್ ಅಡಿಯಲ್ಲಿ BSNL ಗ್ರಾಹಕರು 160 ದಿನಗಳ ಕಾಲ ಪ್ರತಿನಿತ್ಯ 2GB ಡೇಟಾ, ಉಚಿತ ಕರೆ ಮತ್ತು 100 SMS ಗಳನ್ನೂ ಉಚಿತವಾಗಿ ಪಡೆದುಕೊಳ್ಳಬಹುದು. ಈ ರಿಚಾರ್ಜ್ ಅಡಿಯಲ್ಲಿ BSNL ಗ್ರಾಹಕರು 160 ದಿನಗಳಿಗೆ ಒಟ್ಟಾರೆಯಾಗಿ 320GB ಡೇಟಾ ಪಡೆದುಕೊಳ್ಳಲಿದ್ದಾರೆ.
ಜೂನ್ ನಲ್ಲಿ ಆರಂಭ ಆಗಲಿದೆ BSNL 5G ಸೇವೆ
ಈಗಾಗಲೇ 4G ಸೇವೆ ಆರಂಭ ಮಾಡಿರುವ BSNL ಇನ್ನೇನು ಕೆಲವೇ ದಿನಗಳಲ್ಲಿ 5G ಸೇವೆ ಆರಂಭ ಮಾಡಲಿದೆ ಎಂದು ತಿಳಿದುಬಂದಿದೆ. ಜೂನ್ ತಿಂಗಳ ಅಂತ್ಯದಲ್ಲಿ ದೇಶದ ಹಲವು ರಾಜ್ಯಗಳಲ್ಲಿ BSNL 5G ಆರಂಭ ಆಗಲಿದೆ ಎಂದು ಸರ್ಕಾರ ತಿಳಿಸಿದೆ. ಸದ್ಯ ದೇಶದ ಜನರು 4G ಸೇವೆ ಬಳಸುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ 5G ಸೇವೆ ಪಡೆದುಕೊಳ್ಳಲಿದ್ದಾರೆ. ಅದೇ ರೀತಿಯಲ್ಲಿ ದೇಶಾದ್ಯಂತ ಜೂನ್ ವೇಳೆ ಸುಮಾರು ಒಂದು ಲಕ್ಷ BSNL ಟವರ್ ಗಳನ್ನೂ ಸ್ಥಾಪಿಸಲು ಕೂಡ BSNL ಮುಂದಾಗಿದೆ.