WhatsApp Account Delete: ಈ ಪ್ರಪಂಚದಲ್ಲಿ ಮೊಬೈಲ್ ಬಳಸುವ ಪ್ರತಿಯೊಬ್ಬರೂ ಬಳಸುವ ಏಕೈಕ ಅಪ್ಲಿಕೇಶನ್ ಆದರೆ ಅದು ವಾಟ್ಸಪ್ (WhatsApp) ಎಂದು ಹೇಳಬಹುದು. ಮೆಸೇಜ್ ಕಳುಹಿಸಲು ಆಗಬಹುದು ಅಥವಾ ಇತರೆ ಯಾವುದೇ ಮಾಹಿತಿ ರವಾನೆ ಮಾಡಲು ಜನರು ಮೊದಲು ಬಳಸುವುದು ವಾಟ್ಸಪ್ ಎಂದು ಹೇಳಬಹುದು. ಸದ್ಯ ಜನರ ಸುರಕತೆಯ ಉದ್ದೇಶದಿಂದ ಡಿಜಿಟಲ್ ಕ್ಷೇತ್ರದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಅದೇ ರೀತಿಯಲ್ಲಿ ವಾಟ್ಸಪ್ ನಿಯಮದಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಬಹುದು. ಸದ್ಯ ವಾಟ್ಸಪ್ ಬಳಸುವವರಿಗೆ ಈಗ ಮೆಟಾ ಒಂದು ಶಾಕಿಂಗ್ ಸುದ್ದಿಯನ್ನು ನೀಡಿದೆ ಮತ್ತು ಭಾರತದ ಸುಮಾರು 9.7 ಮಿಲಿಯನ್ ಜನರ ವಾಟ್ಸಪ್ ಖಾತೆಗಳನ್ನು ಈಗ ಮೆಟಾ (Meta) ಬ್ಲಾಕ್ ಮತ್ತು ಕೇಂದ್ರ ಸರ್ಕಾರ ಬ್ಲಾಕ್ ಮಾಡಲು ಮುಂದಾಗಿದೆ.
ಬ್ಲಾಕ್ ಆಗಲಿದೆ 9.7 ಮಿಲಿಯನ್ ಜನರ ವಾಟ್ಸಪ್ ಖಾತೆ
ಭಾರತದ ಸುಮಾರು 9.7 ಮಿಲಿಯನ್ ಜನರ ವಾಟ್ಸಪ್ ಖಾತೆಗಳನ್ನು ಈಗ ಕೇಂದ್ರ ಸರ್ಕಾರ ಬ್ಲಾಕ್ ಮಾಡಲು ಮುಂದಾಗಿದೆ. 2025 ರ ಸುರಕ್ಷತಾ ವರದಿಯನ್ನು ಈಗ ಬಿಡುಗಡೆ ಮಾಡಲಾಗಿದೆ ಮತ್ತು ಬಿಡುಗಡೆ ಮಾಡಲಾದ ಮಾಹಿತಿಯ ಪ್ರಕಾರ ಪ್ರಮುಖ 9.7 ಮಿಲಿಯನ್ ಭಾರತೀಯರ ವಾಟ್ಸಪ್ ಖಾತೆಯನ್ನು ಈಗ ಡಿಲೀಟ್ ಮಾಡಲು ಕೇಂದ್ರ ಮತ್ತು ಮೆಟಾ ಮುಂದಾಗಿದೆ. ಏಪ್ರಿಲ್ 1 ನೇ ತಾರೀಕಿನಂದು ಮೆಟಾ ನೀಡಿರುವ ಮಾಹಿತಿಯ ಪ್ರಕಾರ, 2025 ರ ವರ್ಷದಲ್ಲಿ ಸುಮಾರು 9.7 ಭಾರತೀಯರ ವಾಟ್ಸಪ್ ಖಾತೆಯನ್ನು ಮೆಟಾ ಡಿಲೀಟ್ ಮಾಡುತ್ತಿದೆ ಎಂದು ತಿಳಿದುಬಂದಿದೆ.
ವಾಟ್ಸಪ್ ಖಾತೆ ಡಿಲೀಟ್ ಆಗಲು ಕಾರಣಗಳು ಏನು…?
ವಿಶ್ವದ ಅತೀ ದೊಡ್ಡ ಕಂಪನಿ ಅನಿಸಿಕೊಂಡಿರುವ ಮೆಟಾ ಸುಮಾರು 500 ಮಿಲಿಯನ್ ವಾಟ್ಸಪ್ ಗ್ರಾಹಕರನ್ನು ಹೊಂದಿದೆ ಮತ್ತು ಅದರಲ್ಲಿ ಹೆಚ್ಚು ವಾಟ್ಸಪ್ ಖಾತೆ ಬಳಸುವವರು ನಮ್ಮ ಭಾರತೀಯರು ಆಗಿದ್ದಾರೆ. ಸುರಕ್ಷತೆಯ ಉದ್ದೇಶದಿಂದ ಕಳೆದ ವರ್ಷ ಮೆಟಾ 1.4 ಮಿಲಿಯನ್ ಭಾರತೀಯರ ವಾಟ್ಸಪ್ ಖಾತೆಯನ್ನು ಡಿಲೀಟ್ ಮಾಡಿದ್ದು, ಅದೇ ರೀತಿಯಲ್ಲಿ 2025 ರ ವರ್ಷದಲ್ಲಿ ಸುರಕ್ಷತೆಯ ಉದ್ದೇಶದಿಂದ ಸುಮಾರು 9.7 ಮಿಲಿಯನ್ ಭಾರತೀಯರ ವಾಟ್ಸಪ್ ಖಾತೆಯನ್ನು ಡಿಲೀಟ್ ಮಾಡಲು ಮೆಟಾ ಮುಂದಾಗಿದೆ.
ಸಾಕಷ್ಟು ಜನರು ಅನುಮತಿ ಇಲ್ಲದೆ ವಾಟ್ಸಪ್ ಗ್ರೂಪ್ ಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಸಾಕಷ್ಟು ಜನರು ಸ್ಕ್ಯಾಮ್ ಸಂದೇಶಗಳನ್ನು ಕೂಡ ವಾಟ್ಸಪ್ ಮೂಲಕ ರವಾನೆ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ವಾಟ್ಸಪ್ ಖಾತೆಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಆಗಾಗ ದೂರು ಬರುತ್ತಲೇ ಇದೆ. ಈ ಕಾರಣಗಳಿಂದ ಕೇಂದ್ರ ಸರ್ಕಾರ ಮೆಟಾ ಕಂಪನಿಗೆ ವರದಿ ಸಲ್ಲಿಸಿದೆ ಮತ್ತು ಈ ಕಾರಣಗಳಿಂದ ಮೆಟಾ ಸುಮಾರು 9.7 ಮಿಲಿಯನ್ ವಾಟ್ಸಪ್ ಖಾತೆಗಳನ್ನು ಡಿಲೀಟ್ ಮಾಡಲು ಈಗ ಮುಂದಾಗಿದೆ. ಯಾವ ವಾಟ್ಸಪ್ ಖಾತೆಯನ್ನು ಅನುಮಾನಾಸ್ಪದ ಚಟುವರಿಕೆಗಳು ಕಂಡುಬಂದಿದೆಯೋ ಅಂತಹ ವಾಟ್ಸಪ್ ಖಾತೆಗಳು ಇನ್ನುಮುಂದೆ ಡಿಲೀಟ್ ಆಗಲಿದೆ.