Property Registry Rules In India: ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಈಗಾಗಲೇ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಎಂದು ಹೇಳಬಹುದು. ಹೌದು, ದೇಶದಲ್ಲಿ ಅಸ್ತಿ ಮಾರಾಟ ಮತ್ತು ಖರೀದಿ ಮಾಡುವ ನಿಯಮಗಳಲ್ಲಿ ಕೆಲವು ಬದಲಾವಣೆ ಜಾರಿಗೆ ತರಲಾಗಿದೆ ಮತ್ತು ಜನರು ಆ ನಿಯಮಗಳನ್ನ ಪಾಲನೆ ಮಾಡಿದರೆ ಮಾತ್ರ ಆಸ್ತಿ ಖರೀದಿ ಅಥವಾ ಮಾರಾಟ ಮಾಡಬಹುದು. ಅದೇ ರೀತಿಯಲ್ಲಿ ಆಸ್ತಿ ಖರೀದಿ ಮಾಡುವ ಸಮಯದಲ್ಲಿ ಸಾಕ್ಷಿಗಳು ಕೂಡ ಸಹಿ ಮಾಡಬೇಕು, ಆದರೆ ಈಗ ಸಾಕ್ಷಿ ಸಹಿಗೆ ಸಂಬಂಧಪಟ್ಟಂತೆ ಹೊಸ ನಿಯಮವನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ಹಾಗಾದರೆ ಆಸ್ತಿಯ ಖರೀದಿ ಮತ್ತು ಮಾರಾಟದ ಸಮಯದಲ್ಲಿ ಸಾಕ್ಷಿ ಸಹಿಗೆ ಸಂಬಂಧಿಸಿದಂತೆ ಜಾರಿಗೆ ಬಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಸಾಕ್ಷಿ ಇಲ್ಲದೆ ಆಸ್ತಿ ವ್ಯವಹಾರ ಮಾಡಲು ಸಾಧ್ಯವಿಲ್ಲ
ಹೌದು, ಭಾರತದ ನಿಯಮಗಳ ಪ್ರಕಾರ ಸಾಕ್ಷಿ ಇಲ್ಲದೆ ಯಾವುದೇ ಆಸ್ತಿ ಮಾರಾಟ ಮಾಡಲು ಸಾಧ್ಯವಿಲ್ಲ ಮತ್ತು ಆಸ್ತಿ ಮಾರಾಟ ಮತ್ತು ಖರೀದಿ ಸಮಯದಲ್ಲಿ ಕಡ್ಡಾಯವಾಗಿ ಇಬ್ಬರು ಸಾಕ್ಷಿಗಳು ಸಹಿ ಮಾಡ್ಬಕು ಮತ್ತು ಸಾಕ್ಷಿ ಸಹಿ ಮಾಡದೆ ಇದ್ದರೆ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣವಾಗುವುದಿಲ್ಲ. ಸದ್ಯ ಆಸ್ತಿ ನೋಂದಣಿ ಸಮಯದಲ್ಲಿ ಸಹಿ ಹಾಕುವ ಸಾಕ್ಷಿಗಳಿಗೆ ಸಂಬಂಧಿಸಿದಂತೆ ಈಗ ಹೊಸ ರೂಲ್ಸ್ ಜಾರಿಗೆ ತರಲಾಗಿದೆ ಮತ್ತು ಇನ್ನುಮುಂದೆ ಇಂತಹ ಜನರು ಸಾಕ್ಷಿಯಾಗಿ ಸಹಿ ಹಾಕಬಾರದು ಅನ್ನುವ ನಿಯಮವನ್ನು ಕೂಡ ಜಾರಿಗೆ ತರಲಾಗಿದೆ.
ಇನ್ಮುಂದೆ ಇಂತವರು ಸಾಕ್ಷಿಯಾಗಿ ಸಹಿ ಹಾಕುವಂತಿಲ್ಲ
ಭಾರತ ಸರ್ಕಾರ ಸರ್ಕಾರ ಈಗ ಆಸ್ತಿ ಸಹಿಗಳಿಗೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿಗೆ ತಂದಿದೆ. ಹೌದು, ನೋಂದಣಿ ಅಥವಾ ಮಾರಾಟದ ಸಮಯದಲ್ಲಿ ಇಬ್ಬರು ಸಾಕ್ಷಿಗಳು ಸಹಿ ಹಾಕುವುದು ಕಡ್ಡಾಯ, ಆದರೆ ಇನ್ನುಮುಂದೆ ಇಂತಹ ಜನರು ಸಾಕ್ಷಿಗಳಾಗಿ ಸಹಿ ಹಾಕುವಂತೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಾಗಾದರೆ ಯಾರು ಯಾರು ಆಸ್ತಿ ಖರೀದಿ ಸಮಯದಲ್ಲಿ ಸಾಕ್ಷಿಗಳಾಗಿ ಸಹಿ ಹಾಕಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
* 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇನ್ನುಮುಂದೆ ಆಸ್ತಿ ಖರೀದಿ ಸಮಯದಲ್ಲಿ ಸಾಕ್ಷಿಗಳಾಗಿ ಸಹಿ ಹಾಕುವಂತಿಲ್ಲ.
* ಇನ್ನು ಯಾವ ವ್ಯಕ್ತಿ ಆಸ್ತಿ ಮಾರಾಟ ಮಾಡುತ್ತಾನೋ ಅದೇ ವ್ಯಕ್ತಿ ಆಸ್ತಿ ಖರೀದಿ ಮಾಡುವವನ ಪರವಾಗಿ ಸಾಕ್ಷಿಯಾಗಿ ಸಹಿ ಹಾಕುವಂತಿಲ್ಲ.
* ಇನ್ನು ಮಾನಸಿಕ ಸ್ಥಿತಿ ಚೆನ್ನಾಗಿಲ್ಲದ ವ್ಯಕ್ತಿಯನ್ನು ಆಸ್ತಿ ಖರೀದಿ ಮಾಡುವ ಸಮಯದಲ್ಲಿ ಸಾಕ್ಷಿಯಾಗಿ ಸಹಿ ಹಾಕಿಸುವಂತಿಲ್ಲ ಮತ್ತು ಅದೂ ಅಪರಾಧ ಕೂಡ ಆಗಿದೆ. ಕಾನೂನಿನ ಬಗ್ಗೆ ಸರಿಯಾಗಿ ಅರಿವಿರುವವರು ಮಾತ್ರ ಆಸ್ತಿ ಒಪ್ಪಂದಕ್ಕೆ ಸಾಕ್ಷಿಯಾಗಿ ಸಹಿ ಹಾಕಬಹುದು.
ಇನ್ನು ಯಾವುದೇ ಆಸ್ತಿ ಖರೀದಿ ಮತ್ತು ಮಾರಾಟ ಭಾರತದ ಕಾನೂನು ಕಾಯ್ದೆ 1908 ರ ಅಡಿಯಲ್ಲಿ ಬರುತ್ತದೆ ಮತ್ತು ಈ ಕಾಯ್ದೆಯ ಅಡಿಯಲ್ಲಿ ಆಸ್ತಿ ಮಾರಾಟ ಮಾಡಬೇಕಾಗುತ್ತದೆ. ಇನ್ನು ಅನ್ಯ ವ್ಯಕ್ತಿಯನ್ನು ಕರೆತಂದು ಆಸ್ತಿ ಮಾರಾಟ ಅಥವಾ ಖರೀದಿ ಸಮಯದಲ್ಲಿ ಸಾಕ್ಷಿಯಾಗಿ ಸಹಿ ಹಾಕಿಸಿದರೆ ಅದು ಕಾನೂನಿನ ಪ್ರಕಾರ ದೊಡ್ಡ ಅಪರಾಧ ಆಗಿದೆ.