Sanjiv Goenka And Rishabh Pant; ನಿನ್ನೆ ನಡೆದ ಐಪಿಎಲ್ (IPL) ಪಂದ್ಯದಲ್ಲಿ ಲಕ್ನೋ (lucknow super giants) ತಂಡ ಮತ್ತೆ ಪಂಜಾಬ್ ವಿರುದ್ಧ ಹೀನಾಯ ಸೋಲು ಅನುಭವಿಸಿದೆ ಎಂದು ಹೇಳಬಹುದು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ಆರಂಭಿಕ ಆಘಾತವನ್ನು ಅನುಭವಿಸಿದ ನಂತರ ಹೀನಾಯ ಸೋಲು ಕಂಡಿದೆ. ಸದ್ಯ ಲಕ್ನೋ ತಂಡ ಸಾಲುಸಾಲು ಪಂದ್ಯಗಳನ್ನು ಸೋಲುತ್ತಿದ್ದು ಇದು ತಂಡದ ಮಾಲೀಕನ ಬೇಸರಕ್ಕೆ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಲಕ್ನೋ ತಂಡದಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ಗರಿಷ್ಟ ಮೊತ್ತಕ್ಕೆ ಸೇಲ್ ಆದ ರಿಷಬ್ ಪಂತ್ ಕೂಡ ಲಕ್ನೋ ತಂಡದಲ್ಲಿ ಇದ್ದಾರೆ, ಆದರೆ ರಿಷಬ್ ಪಂತ್ ಒಂದೇ ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಎಂದು ಹೇಳಬಹುದು. ಎಲ್ಲಾ ಪಂದ್ಯಗಳನ್ನು ಕಳಪೆ ಪ್ರದರ್ಶನ ನೀಡಿದ ನೀಡಿದ ರಿಷಬ್ ಪಂತ್ (Rishabh Pant) ಕೀಪಿಂಗ್ ನಲ್ಲಿ ಕೂಡ ಎಡವುತ್ತಿದ್ದಾರೆ.
ಸಾಲುಸಾಲು ಪಂದ್ಯ ಸೋಲುತ್ತಿರುವ ಲಕ್ನೋ
ರಿಷಬ್ ಪಂತ್ ನಾಯಕತ್ವದ ಲಕ್ನೋ ತಂಡ ಸಾಲುಸಾಲು ಪಂದ್ಯಗಳನ್ನು ಸೋಲುವುದರ ಮೂಲಕ ಅವಮಾನ ಇದುರಿಸುತ್ತಿದೆ ಎಂದು ಹೇಳಬಹುದು. ನಿನ್ನೆ ಕೂಡ ಪಂಜಾಬ್ ವಿರುದ್ಧ ಹೀನಾಯವಾಗಿ ಸೋತ ಲಕ್ನೋ ತಂಡ ಈಗ ಅಂಕಪಟ್ಟಿಯಲ್ಲಿ ಕೂಡ ಕೆಳಗೆ ಇಳಿಯುತ್ತಿದೆ. ಇದರ ನಡುವೆ ಲಕ್ನೋ ತಂಡದ ಮಾಲೀಕರಾದ ಸಂಜೀವ್ ಗೋಯಂಕಾ (Sanjiv Goenka) ಅವರು ತನ್ನ ತಂಡದ ನಾಯಕರಾದ ರಿಷಬ್ ಪಂತ್ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಪಂದ್ಯ ಸೋಲಲಿ ಅಥವಾ ಗೆಲ್ಲಲ್ಲಿ ಮೈದಾನಕ್ಕೆ ಬರುವ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯಂಕಾ ಅವರು ಈಗ ತಂಡದ ನಾಯಕರಾದ ರಿಷಬ್ ಪಂತ್ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ರಿಷಬ್ ಪಂತ್ ಗೆ ಖಡಕ್ ಸೂಚನೆ ನೀಡಿದ ಸಂಜೀವ್ ಗೋಯಂಕಾ
2024 ರಲ್ಲಿ ಲಕ್ನೋ ತಂಡ ಸೋಲು ಅನುಭಾವಿಸಿದ ಸಮಯದಲ್ಲಿ ಸಂಜೀವ್ ಗೋಯಂಕಾ ಅವರು ರಾಹುಲ್ ಅವರಿಗೆ ಮೈದಾನದಲ್ಲೇ ತರಾಟೆಗೆ ತಗೆದುಕೊಂಡಿದ್ದರು, ಅದೇ ರೀತಿಯಲ್ಲಿ ಈಗ ರಿಷಬ್ ಪಂತ್ ಅವರನ್ನು ಕೂಡ ತರಾಟೆಗೆ ತಗೆದುಕೊಂಡಿದ್ದಾರೆ. ಮೈದಾನದಲ್ಲಿ ಅವಮಾನ ಮಾಡಿದ ಕಾರಣ ರಾಹುಲ್ ಅವರು ಲಕ್ನೋ ತಂಡದಿಂದ ಹೊರಬಂದಿದ್ದರು, ಆದರೆ ಇಂದಿನ ರಾಹುಲ್ ಅವರ ಸ್ಥಾನದಲ್ಲಿ ರಿಷಬ್ ಪಂತ್ ಅವರು ನಿಂತಿದ್ದಾರೆ ಎಂದು ಹೇಳಬಹುದು.
ಕಳೆದ ಪಂದ್ಯದಲ್ಲಿ ಲಕ್ನೋ ಹೀನಾಯವಾಗಿ ಸೋತ ಬಳಿಕ ಸಂಜೀವ್ ಗೋಯಂಕಾ ಅವರು ಮೈದಾನಕ್ಕೆ ತೆರಳು ರಿಷಬ್ ಪಂತ್ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ ಮತ್ತು ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಕೂಡ ಆಗಿದೆ. ರಿಷಬ್ ಪಂತ್ ಅವರಿಗೆ ಸಂಜೀವ್ ಗೋಯಂಕಾ ಅವರು ಬೆರಳು ತೋರಿಸುವುದರ ಮೂಲಕ ಖಡಕ್ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ IPL ನಲ್ಲಿ ಎರಡು ಪಂದ್ಯ ಸೋತಿರುವ ಲಕ್ನೋ ಮುಂದಿನ ಪಂದ್ಯ ವಿನ್ ಆಗಲೇಬೇಕಾದ ಪರಿಸ್ಥಿತಿ ಬಂದಿದೆ ಮತ್ತು ವಿನ್ ಆಗಲೇಬೇಕು ಎಂದು ಸಂಜೀವ್ ಗೋಯಂಕಾ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ರಾಹುಲ್ ಅವರಿಗೆ ಕೂಡ ಸಂಜೀವ್ ಗೋಯಂಕಾ ಅವರು ಮೈದಾನದಲ್ಲಿ ಎಚ್ಚರಿಕೆ ನೀಡಿ ಅವಮಾನ ಮಾಡಿದ್ದರು, ಕಳೆದ ವರ್ಷ ರಾಹುಲ್ ಬಂದ ಸ್ಥಿತಿಯೇ ಈಗ ರಿಷಬ್ ಪಂತ್ ಅವರಿಗೆ ಬರುತ್ತಿದೆ. ಸದ್ಯ ಮೈದಾನಕ್ಕೆ ಬಂದಿರುವ ಸಂಜೀವ್ ಗೋಯಂಕಾ ಅವರು ರಿಷಬ್ ಪಂತ್ ಅವರ ಬಳಿ ಗಂಭೀರವಾಗಿ ಚರ್ಚೆ ಮಾಡುತ್ತಿರುವುದನ್ನು ನಾವು ನೀವೆಲ್ಲ ನೋಡಬಹುದು.