Tirupati Timmappa Darshana: ನಿಮಗೆಲ್ಲ ತಿಳಿದಿರುವ ಹಾಗೆ ಪ್ರತಿನಿತ್ಯ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಲಕ್ಷಾಂತರ ಭಕ್ತರು ಬರುತ್ತಾರೆ ಎಂದು ಹೇಳಬಹುದು. ದೇಶದ ಶ್ರೀಮಂತ ದೇವಾಲಯ ಆಗಿರುವ ತಿರುಪತಿ ತಿಮ್ಮಪ್ಪನ ಸನ್ನಿಧಾನ ಸದ್ಯ ದೇಶದಲ್ಲಿ ಅತೀ ಹೆಚ್ಚು ಆದಾಯವನ್ನು ಗಳಿಸುವ ದೇವಸ್ಥಾನ ಅನಿಸಿಕೊಂಡಿದೆ. ತಿರುಪತಿ ತಿಮ್ಮಪ್ಪನ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಸದ್ಯ ದರ್ಶನ ಮಾಡಲು ಒಂದು ದಿನ ಸಂಪೂರ್ಣ ಕಾಯಬೇಕಾಗಿದೆ. ಜನರು ಆನ್ಲೈನ್ ಮೂಲಕ ಬುಕಿಂಗ್ ಮಾಡಿಕೊಂಡು ತಿಮ್ಮಪ್ಪನ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಇದರ ಮಾಡುವೆ ತಿರುಪತಿ ದೇವಸ್ಥಾನ ಮಂಡಳಿ ತಿಮ್ಮಪ್ಪನ ದರ್ಶನ ಮಾಡುವ ಭಕ್ತರಿಗೆ ಗುಡ್ ನ್ಯೂಸ್ ನೀಡಿದೆ. ದರ್ಶನದಲ್ಲಿ ಬಹುದೊಡ್ಡ ಬದಲಾವಣೆ ಮಾಡಲಾಗಿದೆ ಮತ್ತು ಭಕ್ತರು ಇನ್ನೊಂದು 24 ಘಂಟೆ ಕಾಯುವ ಅಗತ್ಯ ಇಲ್ಲ ಎಂದು ಹೇಳಬಹುದು.
ತಿರುಪತಿಯಲ್ಲಿ ಬಂತು AI ತಂತ್ರಜ್ಞಾನ
ಹೌದು, ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಈಗ AI ತಂತ್ರಜ್ಞಾನ ಬಂದಿದೆ. ಕೋಟ್ಯಾಂತರ ಭಕ್ತರನ್ನು ಹೊಂದಿರುವ ತಿರುಪತಿ ತಿಮ್ಮಪ್ಪನ ಸನ್ನಿದಾನ ಈಗ AI ತಂತ್ರಜ್ಞಾವನ್ನು ಅಳವಡಿಸಿಕೊಂಡಿದೆ ಎಂದು ಹೇಳಬಹುದು. ಇನ್ನು AI ತಂತ್ರಜ್ಞಾನ ಈಗ ತಿರುಪತಿ ತಿಮ್ಮಪ್ಪನ ಸನ್ನಿಧಿಯನ್ನು ದಿನವಿಡೀ ಕಾಯುವ ಅಗತ್ಯ ಕಡಿಮೆ ಮಾಡುತ್ತದೆ ಎಂದು ಹೇಳಬಹುದು. ಕಡಿಮೆ ಸಮಯದಲ್ಲಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಅನ್ನುವ ಉದ್ದೇಶದನ್ನು ದೇವಸ್ಥಾನದಲ್ಲಿ ಹೊಸ ತಂತ್ರಜ್ಞಾನ ಜಾರಿಗೆ ತಂದಿದೆ.
ತಿರುಪತಿ ತಿಮ್ಮಪ್ಪನ ಈಗ ಗೂಗಲ್ ಇಂಕ್ ಜೊತೆ ಮಹತ್ವದ ಒಪ್ಪಂದ ಮಾಡಿಳ್ಳುವುದರ ಮೂಲಕ AI ತಂತ್ರಜ್ಞಾನವನ್ನು ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲಿ ಅಳವಡಿಸಿದೆ. ವಿಶ್ವದಲ್ಲಿ ಇದೆ ಮೊದಲ ಬಾರಿಗೆ ಒಂದು ದೇವಸ್ಥಾನ ಈ ಸೇವೆ ಒಳವಡಿಸಿಕೊಳ್ಳುತ್ತಿದೆ ಎಂದು ತಿರುಪತಿ ತಿಮ್ಮಪ್ಪನ ದೇವಸ್ಥಾನದ ಆಡಳಿತದವರು ಹೇಳಿದ್ದಾರೆ. AI ಮೂಲಕ ತಿರುಪತಿ ತಿಮ್ಮಪ್ಪನ ಪ್ರವಾಸ ಮಾಡಲು ಬರುವ ಭಕ್ತರಿಗೆ ಕೆಲವು ಸೇವೆಯನ್ನು ತ್ವರಿತವಾಗಿ ನೀಡಲಾಗುತ್ತದೆ. ಇನ್ನು AI ತಂತ್ರಜ್ಞಾನದ ಮೂಲಕ ಭಕ್ತರಿಗೆ ಮೂಲಸೌಕರ್ಯ ಕೂಡ ಒದಗಿಸುವ ಕೆಲಸ ಮಾಡಲಾಗುತ್ತಿದೆ.