8th Pay Commission Scale: ಸದ್ಯ ಕೇಂದ್ರ ಸರ್ಕಾರೀ ನೌಕರರಿಗೆ 8ನೇ ವೇತನ ಆಯೋಗದ (8th Pay Commission) ಅಡಿಯಲ್ಲಿ ವೇತನ ಪಡೆದುಕೊಳ್ಳಲು ಕಾಯುತ್ತಿದ್ದಾರೆ ಎಂದು ಹೇಳಬಹುದು. ಕೇಂದ್ರ ಸರ್ಕಾರ ಸರ್ಕಾರೀ ನೌಕರರ 8 ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಈ ವರ್ಷದಲ್ಲಿ ಬಿಗ್ ಅಪ್ಡೇಟ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ 8 ನೇ ವೇತನ ಆಯೋಗ ಜಾರಿಗೆ ಬಂದರೆ ನಮಗೆ ಎಷ್ಟು ವೇತನ ಸಿಗಲಿದೆ ಮತ್ತು ಅದರ ಜೊತೆ ಯಾವ ಯಾವ ಸೌಕರ್ಯ ಸಿಗಲಿದೆ ಅನ್ನುವ ಪ್ರಶ್ನೆ ಸಾಕಷ್ಟು ಸರ್ಕಾರೀ ನೌಕರರ ತಲೆಯಲ್ಲಿ ಇದೆ ಎಂದು ಹೇಳಬಹುದು. ಹಾಗಾದರೆ ದೇಶದಲ್ಲಿ 8 ನೇ ವೇತನ ಆಯೋಗ ಜಾರಿಯಾದರೆ ಸರ್ಕಾರೀ ನೌಕರರಿಗೆ ಎಷ್ಟು ವೇತನ ಸಿಗಲಿದೆ ಮತ್ತು ವೇತನದ ಜೊತೆ ಯಾವ ಯಾವ ಸೌಕರ್ಯ ಸಿಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ 8 ನೇ ವೇತನ ಆಯೋಗ
ಕೆಲವು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಇನ್ನೇನು ಕೆಲವು ದಿನಗಳಲ್ಲಿ 8 ನೇ ವೇತನ ಆಯೋಗ ಜಾರಿಯಾಗಲಿದೆ ಎಂದು ಹೇಳಬಹುದು. ಇನ್ನು ವರದಿಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಏಪ್ರಿಲ್ ತಿಂಗಳಲ್ಲಿ 8 ನೇ ವೇತನ ಆಯೋಗವನ್ನು ರಚನೆ ಮಾಡಬಹುದು ಮತ್ತು ಮುಂದಿನ ವರ್ಷ, ಅಂದರೆ 2026 ಜೂನ್ ಸಮಯದಲ್ಲಿ ಸರ್ಕಾರೀ ನೌಕರರಿಗೆ 8 ನೇ ವೇತನ ಆಯೋಗ ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಹಾಗಾದರೆ 8 ನೇ ವೇತನ ಆಯೋಗ ಜಾರಿಯಾದರೆ ಸಂಬಳ ಮತ್ತು ಪಿಂಚಣಿ ಎಷ್ಟಾಗಲಿದೆ ಎಂದು ನಾವೀಗ ತಿಳಿಯೋಣ.
ವರದಿಯ ಪ್ರಕಾರ ಮುಂದಿನ ವರ್ಷ ದೇಶದಲ್ಲಿ 8 ನೇ ವೇತನ ಆಯೋಗ ಜಾರಿದರೆ ನೌಕರರ ಪಿಂಚಣಿ ಮೊತ್ತವು 14 ಸಾವಿರ ರೂಪಾಯಿಯಿಂದ 19 ಸಾವಿರ ರೂಪಾಯಿಗೆ ಏರಿಕೆ ಆಗಲಿದೆ. ಇನ್ನು ಹೊಸ ವೇತನ ಆಯೋಗ ಜಾರಿಯಾದರೆ ಸರ್ಕಾರೀ ನೌಕರ ವೇತನ ಶೇಕಡಾ 14 ರಿಂದ 19 ರಷ್ಟು ಏರಿಕೆ ಆಗಬಹುದು ಎಂದು ಹೇಳಲಾಗುತ್ತಿದೆ. 8 ನೇ ವೇತನ ಆಯೋಗ ಜಾರಿಗೆ ಬಂದರೆ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಬಜೆಟ್ ನಲ್ಲಿ ಸುಮಾರು 1.74 ಲಕ್ಷ ಕೋಟಿ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಮಂಡನೆ ಮಾಡಬೇಕು.
ದೇಶದಲ್ಲಿ 8 ನೇ ವೇತನ ಆಯೋಗ ಜಾರಿಯಾದರೆ ಸುಮಾರು 60 ಲಕ್ಷ ನೌಕರರು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಹೇಳಬಹುದು. ದೇಶದಲ್ಲಿ 8 ನೇ ವೇತನ ಆಯೋಗ ಜಾರಿಯಾದರೆ ನೌಕರರ ಕನಿಷ್ಠ ವೇತನ 46 ಸಾವಿರ ಆಗಲಿದೆ ಮತ್ತು ಅವರ ತಿಂಗಳ ಪಿಂಚಣಿ ಮೊತ್ತ ಸುಮಾರು 23 ಸಾವಿರ ರೂಪಾಯಿ ಆಗಲಿದೆ. ಮುಂದಿನ ವರ್ಷದ ದೇಶದಲ್ಲಿ 8 ನೇ ವೇತನ ಆಯೋಗ ಜಾರಿಯಾಗುವ ಸಾಧ್ಯತೆ ಇದ್ದು ಸುಮಾರು 60 ಲಕ್ಷ ನೌಕರರು 8 ನೇ ವೇತನ ಆಯೋಗದ ಲಾಭ ಪಡೆದುಕೊಳ್ಳಲಿದ್ದಾರೆ.