Post Office Income Scheme: ಪ್ರತಿ ತಿಂಗಳು ಅಧಿಕ ಬಡ್ಡಿ ಪಡೆಯುವ ಯೋಜನೆ ಬೇಕು ಅಂದರೆ ನಮಗೆ ಪೋಸ್ಟ್ ಆಫೀಸ್ (Post Office) ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಹೌದು, ಪೋಸ್ಟ್ ಆಫೀಸ್ ನಲ್ಲಿ ಅಧಿಕ ಬಡ್ಡಿ ಸಿಗುವ ಹಲವು ಯೋಜನೆಗಳು ಜಾರಿಯಲ್ಲಿ ಇದೆ ಎಂದು ಹೇಳಬಹುದು. ಇದರ ನಡುವೆ ಪೋಸ್ಟ್ ಆಫೀಸ್ ನ ಕೆಲವು ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ದೊಡ್ಡ ಮೊತ್ತದ ಆದಾಯ ಗಳಿಸಿಕೊಳ್ಳಬಹುದು. ಪೋಸ್ಟ್ ಆಫೀಸ್ ನ ಹಣಕಾಸು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಮಾಡಿದ ಹೂಡಿಕೆಗೆ ನಿರ್ಧಿಷ್ಟ ಆದಾಯ ಬರುತ್ತದೆ ಮತ್ತು ನಮ್ಮ ಹಣ ಸುರಕ್ಷಿತ ಆಗಿರುತ್ತದೆ. ಸದ್ಯ ನಾವು ಹೇಳುವ ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಬಹುದೊಡ್ಡ ಮೊತ್ತದ ಆದಾಯ ಗಳಿಸಿಕೊಳ್ಳಬಹುದು.
ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿ ಹಲವು ಯೋಜನೆ
ನಿಮಗೆ ಮಾಸಿಕ ಆದಾಯ ಬರುವ ಯೋಜನೆ ಬೇಕು ಅಂದರೆ ಪೋಸ್ಟ್ ಆಫೀಸ್ ನಲ್ಲಿ ಹಲವು ಆಯ್ಕೆಗಳು ಇದೆ ಎಂದು ಹೇಳಬಹುದು. ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ನಾವು ಹೂಡಿಕೆ ಮಾಡಿದರೆ ಹಣಕ್ಕೆ ಹೆಚ್ಚು ಬಡ್ಡಿ ಕೊಡುತ್ತದೆ ಮತ್ತು ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ಬಹಳ ಸುರಕ್ಷಿತ ಎಂದು ಹೇಳಬಹುದು. ಇನ್ನು ಬ್ಯಾಂಕುಗಳಿಗೆ ನಮಗೆ ಮಾಸಿಕ ಆದಾಯದ ಯೋಜನೆ (Monthly Income Scheme) ಸಿಗಲ್ಲ, ಆದರೆ ಪೋಸ್ಟ್ ಆಫೀಸ್ ನಲ್ಲಿ ನಾವು ಮಾಸಿಕ ಆದಾಯದ ಯೋಜನೆಯ ಲಾಭ ಪಡೆಯಬಹುದು.
ಈ ಯೋಜನೆಯಲ್ಲಿ ಸಿಗಲಿದೆ ಪ್ರತಿ ತಿಂಗಳು 5550 ರೂಪಾಯಿ
ಪೋಸ್ಟ್ ಆಫೀಸ್ ನ ಈ ಮಾಸಿಕ ಆದಾಯ ಯೋಜನೆಯ ಅಡಿಯಲ್ಲಿ ನಾವು ಪ್ರತಿ ತಿಂಗಳು 5550 ರೂಪಾಯಿಯನ್ನು ಬಡ್ಡಿಯಾಗಿ ಪಡೆದುಕೊಳ್ಳಬಹುದು. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಅಡಿಯಲ್ಲಿ ಖಾತೆ ತೆರೆದರೆ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಇನ್ನು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 1000 ರೂ ಕನಿಷ್ಠ ಮೊತ್ತ ಹೂಡಿಕೆ ಮಾಡುವುದರ ಮೂಲಕ ಯೋಜನೆಯನ್ನು ಆರಂಭಿಸಬಹುದು. ಇನ್ನು ಒಬ್ಬ ವ್ಯಕ್ತಿ ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯ ಅಡಿಯಲ್ಲಿ 9 ಲಕ್ಷ ರೂಪಾಯಿಯ ತನಕ ಹೂಡಿಕೆ ಮಾಡಬಹುದು ಮತ್ತು ಜಂಟಿಯಾಗಿ, ಅಂದರೆ ಗಂಡ ಮತ್ತು ಹೆಂಡತಿ ಒಟ್ಟಾಗಿ ಖಾತೆ ತೆರೆದರೆ 15 ಲಕ್ಷ ರೂಪಾಯಿಯ ತನಕ ಹೂಡಿಕೆ ಮಾಡಬಹುದು.
ಇನ್ನು ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಹೂಡಿಕೆ ಮಾಡಿದ ಹಣಕ್ಕೆ 7.4% ದರದಲ್ಲಿ ಬಡ್ಡಿ ಪಡೆದುಕೊಳ್ಳಬಹುದು. ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 9 ಲಕ್ಷ ರೂ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು 5550 ರೂ ಮಾಸಿಕ ಆದಾಯ ಗಳಿಸಿಕೊಳ್ಳಬಹುದು. ಇನ್ನು ಮಾಸಿಕ ಆದಾಯ ಯೋಜನೆ 5 ವರ್ಷಗಳ ಯೋಜನೆ ಆಗಿದೆ ಮತ್ತು ಯೋಜನೆ ಮುಕ್ತಾಯವಾದ ನಂತರ ನೀವು ಹೂಡಿಕೆ ಮಾಡಿದ ಸಂಪೂರ್ಣ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗಯುತ್ತದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 5 ವರ್ಷಗಳ ಕಾಲದ ಅವಧಿಗೆ ನೀವು 9 ಲಕ್ಷ ರೂ ಹೂಡಿಕೆ ಮಾಡಿದರೆ ನೀವು ಮಾಸಿಕವಾಗಿ 5550 ರೂ ಬಡ್ಡಿಯಲ್ಲಿ ಆದಾಯ ಗಳಿಸಿಕೊಳ್ಳಬಹುದು. ನೀವು ಐದು ವರ್ಷಗಳ ಅವಧಿಗೆ ನೀವು ಹೂಡಿಕೆ ಮಾಡಿದ ಹಣಕ್ಕೆ 7.4% ಬಡ್ಡಿದರದಲ್ಲಿ ಒಟ್ಟಾರೆಯಾಗಿ 3,33,000 ರೂ ಬಡ್ಡಿ ಪಡೆದುಕೊಳ್ಳುತ್ತೀರಿ. ಕೆಲವು ಅನಿವಾರ್ಯ ಕಾರಣಗಳಿಂದ ನೀವು ಖಾತೆಯನ್ನು ಬೇಗ ಮುಚ್ಚಲು ಕೂಡ ಅವಕಾಶ ಇದೆ, ಆದರೆ ಕೆಲವು ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಬೇಕು. ಪೋಸ್ಟ್ ಆಫೀಸ್ ನ ಈ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ನಿರ್ಧಿಷ್ಟ ಆದಾಯ ಬರುತ್ತದೆ. ಇನ್ನು ಬಡ್ಡಿ ಮೊತ್ತ ನೀವು ಹೂಡಿಕೆ ಮಾಡಿದ ಹಣದ ಮೇಲೆ ನಿರ್ಧಾರ ಆಗುತ್ತದೆ.