Bank Rules: ಬ್ಯಾಂಕ್ ಖಾತೆ ಇದ್ದವರು ಏಪ್ರಿಲ್ 10 ರೊಳಗೆ ಈ ಕೆಲಸ ಮುಗಿಸಿಕೊಳ್ಳಿ, ಇಲ್ಲವಾದರೆ ಖಾತೆ ಸ್ಥಗಿತ

Bank Accounts KYC Update: ಹೊಸ ಹಣಕಾಸು ವರ್ಷ ಆರಂಭವಾದ ಬೆನ್ನಲ್ಲೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಲಾಗಿದೆ ಎಂದು ಹೇಳಬಹುದು. ಹೌದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು ಬ್ಯಾಂಕ್ ಖಾತೆ ಇದ್ದವರು ಈ ಬದಲಾವಣೆಯ ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕ ಎಂದು ಹೇಳಿದರೆ ತಪ್ಪಾಗಲ್ಲ. ಇದರ ನಡುವೆ, ಈಗ RBI ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಎಲ್ಲಾ ಖಾತೆದಾರರಿಗೆ ಕೊನೆಯ ಗಡುವು ನೀಡಿದೆ. ಏಪ್ರಿಲ್ 10 ನೇ ತಾರೀಕಿನ ಒಳಗಾಗಿ ಬ್ಯಾಂಕ್ ಖಾತೆ ಇದ್ದವರು ಈ ಕೆಲಸವನ್ನು ಕಡ್ಡಾಯವಾಗಿ ಮುಗಿಸಿಕೊಳ್ಳಬೇಕು ಎಂದು ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಸೂಚನೆ ನೀಡಿದೆ.

WhatsApp Group Join Now
Telegram Group Join Now

ಏಪ್ರಿಲ್ 10 ನೇ ತಾರೀಕಿನೊಳಗೆ ಕೆಲಸ ಮುಗಿಯದಿದ್ದರೆ ಖಾತೆ ಸ್ಥಗಿತ
ಹೊಸ ಹಣಕಾಸು ವರ್ಷದಲ್ಲಿ ಅನೇಕ ಬದಲಾವಣೆ ಮಾಡಲಾಗಿದ್ದು ಜನರು ಆದಷ್ಟು ಬೇಗ ಈ ಕೆಲಸ ಮುಗಿಸಿಕೊಳ್ಳದೆ ಇದ್ದರೆ ಅವರ ಬ್ಯಾಂಕ್ ಖಾತೆಯನ್ನು ಸ್ಥಗಿತ ಮಾಡಲಾಗುತ್ತದೆ ಎಂದು RBI ಎಚ್ಚರಿಕೆ ನೀಡಿದೆ. ಹಾಗಾದರೆ ಬ್ಯಾಂಕ್ ಖಾತೆ ಇದ್ದವರು ಏಪ್ರಿಲ್ 10 ತಾರೀಕಿನ ಒಳಗಾಗಿ ಮಾಡಬೇಕಾದ ಕೆಲಸ ಏನು ಮತ್ತು ಇದು ಯಾವ ಯಾವ ಬ್ಯಾಂಕುಗಳಿಗೆ ಅನ್ವಯ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

RBI ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರಿಗೆ ಸೂಚನೆ ನೀಡಿದೆ ಎಂದು ಹೇಳಬಹುದು. ಸಾಕಷ್ಟು ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗೆ ಇನ್ನೂ ಕೂಡ KYC ಅಪ್ಡೇಟ್ ಮಾಡದೆ ಇರುವುದು RBI ಗಮನಕ್ಕೆ ಬಂದಿದೆ ಮತ್ತು ಬ್ಯಾಂಕುಗಳಿಗೆ ನಿಮ್ಮ ಖಾತೆದಾರರ ಬಳಿ ಆದಷ್ಟು ಬೇಗ KYC ಅಪ್ಡೇಟ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಇನ್ನು ಏಪ್ರಿಲ್ 10 ನೇ ತಾರೀಕಿನ ಒಳಗಾಗಿ KYC ಅಪ್ಡೇಟ್ ಮಾಡದೆ ಇದ್ದರೆ ಅಂತಹ ಗ್ರಾಹಕರ ಬ್ಯಾಂಕ್ ಖಾತೆಯನ್ನು ಸ್ಥಗಿತ ಮಾಡಲು ಕೂಡ ಆದೇಶ ಹೊರಡಿಸಲಾಗಿದೆ.

ಇನ್ನು ಬ್ಯಾಂಕ್ ಗ್ರಾಹಕರು ತಮ್ಮ ಶಾಖೆಗೆ ಭೇಟಿನೀಡಿ ಖಾತೆಗೆ KYC ನವೀಕರಣ ಮಾಡಬೇಕು. ಬ್ಯಾಂಕಿನಲ್ಲಿ ಅಗತ್ಯ ದಾಖೆಲೆಗಳನ್ನು ಭರ್ತಿಮಾಡಿ ನಿಮ್ಮ ಇತ್ತೀಚಿನ ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡಿ ಖಾತೆಗೆ KYC ಅಪ್ಡೇಟ್ ಮಾಡಿಸಿಕೊಳ್ಳಬಹುದು. ಇನ್ನು ಬ್ಯಾಂಕಿಗೆ ಹೋಗಲು ಸಾಧ್ಯವಾಗದಿದ್ದರೆ ಆಯಾ ಬ್ಯಾಂಕಿನ ವೆಬ್ಸೈಟ್ ಗೆ ಭೇಟಿನೀಡಿ ಕೂಡ ಅಪ್ಡೇಟ್ ಮಾಡಿಸಿಕೊಳ್ಳಬಹುದು. KYC ಅಪ್ಡೇಟ್ ಮಾಡದೆ ಇದ್ದರೆ ಅವರು ಏಪ್ರಿಲ್ 10 ರ ನಂತರ ಖಾತೆಗೆ ಹಣ ಠೇವಣಿ ಮಾಡುವುದು ಅಥಾವ ಬೇರೆಯವರಿಗೆ ಹಣ ವರ್ಗಾವಣೆ ಸೇರಿದಂತೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಗ್ರಾಹಕರ ಗುರುತು ಮತ್ತು ಅವರ ಆರ್ಥಿಕ ಪರಿಸ್ಥಿತಿ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವ ಉದ್ದೇಶದಿಂದ RBI ಎಲ್ಲ ಬ್ಯಾಂಕ್ ಗ್ರಾಹಕರಿಗೆ KYC ಅಪ್ಡೇಟ್ ಕಡ್ಡಾಯ ಮಾಡಿದೆ. ಆದರೆ ಸಾಕಷ್ಟು ಜನರು ಇನ್ನೂ ಕೂಡ ತಮ್ಮ ಖಾತೆಗಳಿಗೆ KYC ಅಪ್ಡೇಟ್ ಮಾಡದೆ ಹಣಕಾಸು ವಹಿವಾಟು ಮಾಡುತ್ತಿದ್ದಾರೆ, ಈ ಕಾರಣಗಳಿಂದ RBI ಈಗ KYC ಅಪ್ಡೇಟ್ ಮಾಡಲು ಕೊನೆಯ ಗಡುವು ನೀಡಿದೆ.

Leave a Comment