Niveditha Gowda: ವೇದಿಕೆಯ ಮೇಲೆ ಜೀವನದಲ್ಲಿ ಏನೇನು ಆಯಿತು ಎಂದು ಹೇಳಿ ಕಣ್ಣೀರಿಟ್ಟ ನಿವೇದಿತಾ ಗೌಡ

Niveditha Gowda in Boys vs Girls Show; ನಿವೇದಿತಾ ಗೌಡ (Niveditha Gowda)ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ ಮಾತು ಮತ್ತು ರೀಲ್ಸ್ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಹೇಳಬಹುದು. ಬಿಗ್ ಬಾಸ್ ಮೂಲಕ ಪರಿಚಿತರಾದ ನಿವೇದಿತಾ ಗೌಡ ಅವರು ನಂತರ ಕನ್ನಡದ ಖ್ಯಾತ ಗಾಯಕ ಚಂದನ್ ಶೆಟ್ಟಿ ಅವರನ್ನು ಪ್ರೀತಿಮಾಡಿ ಮದುವೆ ಮಾಡಿಕೊಂಡರು. ಚಂದನ್ ಶೆಟ್ಟಿ (Chandan Shetty) ಅವರ ಜೊತೆ ಸುಮಾರು ನಾಲ್ಕು ವರ್ಷಗಳ ಕಾಲ ಸಂಸಾರ ಮಾಡಿದ ನಿವೇದಿತಾ ಗೌಡ ಅವರು ಕಳೆದ ವರ್ಷ ವಿಚ್ಛೇಧನ ಕೂಡ ಪಡೆದುಕೊಂಡಿದ್ದರು. ಸದ್ಯ ನಿವೇದಿತಾ ಗೌಡ ಅವರು Boys vs Girls Show ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಈ ಶೋ ನಲ್ಲಿ ವೇಡಿಕೆಯ ಮೇಲೆ ತನ್ನ ಜೀವನದಲ್ಲಿ ಏನೇನು ಆಯಿತು ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ. 

WhatsApp Group Join Now
Telegram Group Join Now

ವಯಕ್ತಿಕ ಕಾರಣಕ್ಕೆ ವಿಚ್ಛೇಧನ ಪಡೆದುಕೊಂಡ ನಿವೇದಿತಾ ಗೌಡ
ಹೌದು, ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರ ತಮ್ಮ ವಯಕ್ತಿಕ ಕಾರಣಗಳಿಂದ ವಿಚ್ಛೇಧನ ಪಡೆದಿದ್ದರು ಮತ್ತು ಇಬ್ಬರ ಒಪ್ಪಿಗೆಯಿಂದ ವಿಚ್ಛೇಧನ ಪಡೆದುಕೊಳ್ಳುತ್ತಿದ್ದೇವೆ ಎಂದು ಮಾಧ್ಯಮದ ಮುಂದೆ ಕೂಡ ಸ್ಪಷ್ಟನೆ ನೀಡಿದ್ದರು. ಇನ್ನು ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಡೈವೋರ್ಸ್ (Chandan Shetty And Niveditha Gowda Divorce) ಪಡೆದುಕೊಂಡ ನಂತರ ಚಂದನ್ ಶೆಟ್ಟಿ ಅವರು ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಅದೇ ರೀತಿಯಲ್ಲಿ ನಿವೇದಿತಾ ಗೌಡ ಅವರು ವಿಚ್ಛೇಧನ ಪಡೆದುಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಮತ್ತು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದು.

ವೇದಿಕೆಯ ಮೇಲೆ ಜೀವನದಲ್ಲಿ ಏನೇನು ಆಯಿತು ಎಂದು ಹೇಳಿದ ನಿವೇದಿತಾ
ಹೌದು, ವವರು ವೇದಿಕೆಯ ಮೇಲೆ ತನ್ನ ಜೀವನದಲ್ಲಿ ಏನೇನು ಆಯಿತು ಮತ್ತು ನನ್ನ ತಂದೆ ಪಟ್ಟ ಕಷ್ಟದ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಇನ್ನು ನಿವೇದಿತಾ ಗೌಡ ಅವರ ಜೀವನದ ಕಥೆ ಕೇಳಿ ರಜತ್ ಕೂಡ ಕಣ್ಣೀರು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿವೇದಿತಾ ಗೌಡ ಅವರು ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಾರೆ, ಆದರೆ ನಿವೇದಿತಾ ಗೌಡ ಅವರ ಫೋಟೋಗಳಿಗೆ ಒಳ್ಳೆಯ ಕಮೆಂಟ್ ಗಿಂತ ಕೆಟ್ಟ ಕಮೆಂಟ್ ಜಾಸ್ತಿ ಬರುತ್ತದೆ ಎಂದು ಹೇಳಬಹುದು.

ಇನ್ನು ವೇದಿಕೆಯ ಮುಂದೆ ಮಾತನಾಡಿದ ನಿವೇದಿತಾ ಗೌಡ ಅವರು ‘ ನನ್ನ ಜೀವನದಲ್ಲಿ ಏನೇನೋ ಆದಮೇಲೆ ನಾನು ಇಷ್ಟು ಗಟ್ಟಿಯಾಗಿರಲು ನನ್ನ ತಂದೆ ಮಾತ್ರ ಕಾರಣ” ಎಂದು ಹೇಳಿದ್ದಾರೆ. “ನಾನು ನಿನ್ನೆಜೊತೆ ಇದ್ದೀನಿ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ” ಎಂದು ನನಗೆ ಹೇಳುತ್ತಾರೆ ಮತ್ತು ಆ ಮಾತು ಕೇಳಿ ನನಗೆ ತುಂಬಾ ಕಷ್ಟ ಆಗುತ್ತದೆ ಎಂದು ನಿವೇದಿತಾ ಗೌಡ ಅವರು ವೇದಿಕೆಯ ಮೇಲೆ ಹೇಳಿಕೊಂಡಿದ್ದಾರೆ.

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಲವ್ ಮ್ಯಾರೇಜ್ ಮಾಡಿಕೊಂಡಿದ್ದರು ಮತ್ತು ಇಬ್ಬರು ನಾಲ್ಕು ವರ್ಷಗಳ ಕಾಲ ಸಂಸಾರ ಮಾಡಿದ್ದರು. ಖುಷಿ ಖುಷಿಯಾಗಿದ್ದನಿವೇದಿತಾ ಗೌಡ ಅವರು ಏಕೆ ವಿಚ್ಛೇಧನ ಪಡೆದುಕೊಂಡರು ಮತ್ತು ಅವರಿಬ್ಬರ ನಡುವೆ ಏನಾಯಿತು ಅನ್ನುವ ಪ್ರಶ್ನೆ ಇನ್ನೂ ಕೂಡ ಪ್ರತಿಯೊಬ್ಬರಲ್ಲೂ ಕಾಡುತ್ತಿದೆ. ಸದ್ಯ ನಿವೇದಿತಾ ಗೌಡ ಅವರು ಕೃತೆರೆಯ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಜನರನ್ನು ಮನರಂಜಿಸುತ್ತಿದ್ದಾರೆ ಎಂದು ಹೇಳಬಹುದು.

Leave a Comment