New Currency: 10 ಮತ್ತು 500 ರೂ ನೋಟುಗಳ ಮೇಲೆ ಹೊಸ ಘೋಷಣೆ ಮಾಡಿದ RBI, ವಿಶೇಷತೆ ಏನೇನು ನೋಡಿ

New 10 And 500 Rupees Notes: ನೋಟುಗಳ ವಿಷಯವಾಗಿ RBI ಆಗಾಗ ಕೆಲವು ಘೋಷಣೆ ಮಾಡುತ್ತಲೇ ಇರುತ್ತದೆ. ಇದರ ನಡುವೆ ದೇಶದಲ್ಲಿ ನಕಲಿ ನೋಟುಗಳ ಹಾವಳಿ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು, ಜನರಿಗೆ ಅಸಲಿ ನೋಟುಗಳು ಯಾವುದು ಮತ್ತು ನಕಲಿ ನೋಟುಗಳು ಯಾವುದು ಎಂದು ತಿಳಿದುಕೊಳ್ಳುವುದು ಕೂಡ ಕಷ್ಟವಾಗುತ್ತಿದೆ. ಇದರ ನಡುವೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) 10 ಮತ್ತು 500 ರೂ ನೋಟುಗಳಿಗೆ ಸಂಬಂಧಪಟ್ಟಂತೆ ಹೊಸ ಆದೇಶವನ್ನು ಹೊರಡಿಸಿದೆ. 10 ಮತ್ತು 500 ರೂಪಾಯಿಯ ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಈಗ RBI ಮುಂದಾಗಿದೆ.

WhatsApp Group Join Now
Telegram Group Join Now

ಹೊಸ 10 ಮತ್ತು 500 ರೂ ನೋಟುಗಳು ಬಿಡುಗಡೆ
ಹೌದು, RBI ಈಗ ಹೊಸದಾಗಿ 10 ಮತ್ತು 500 ರೂಪಾಯಿ ನೋಟುಗಳನ್ನು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ ಮತ್ತು ಆ ನೋಟುಗಳಲ್ಲಿ ಇರುವ ವಿಶೇಷತೆ ಏನು ಅನ್ನುವುದರ ಬಗ್ಗೆ ಕೂಡ ಮಾಹಿತಿ ಕೂಡ ಹಂಚಿಕೊಂಡಿದೆ. ಹಾಗಾದರೆ ಹೊಸದಾಗಿ ಬಿಡುಗಡೆ ಆಗುತ್ತಿರುವ 10 ಮತ್ತು 500 ರೂಪಾಯಿಯ ಹೊಸ ನೋಟುಗಳಿಗೆ ಹೇಗಿರಲಿದೆ ಮತ್ತು ಈ ನೋಟುಗಳ ವಿಶೇಷತೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹೊಸ ನೋಟುಗಳಲ್ಲಿ ಏನೇನು ವಿಶೇಷತೆ ಇರಲಿದೆ
ಹೋದ ನೋಟುಗಳು ನೋಟದಲ್ಲಿ ಹಳೆಯ ನೋಟುಗಳ ಹಾಗೆ ಇರಲಿದೆ ಮತ್ತು ನೋಟುಗಳಲ್ಲಿ ಗಡುಸುತನ ಹೆಚ್ಚಾಗಿರಲಿದೆ ಹೊರತು ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು RBI 10 ಮತ್ತು 500 ರೂಪಾಯಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇನ್ನು ಭದ್ರತಾ ಮತ್ತು ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇನ್ನು ಸಹಿ ಹೊರತುಪಡಿಸಿ ಬೇರೆ ಏನು ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ RBI ಹೊಸ ಗವರ್ನರ್ ಆಗಿರುವ ಸಂಜಯ್ ಮಲ್ಹೋತ್ರ ಅವರು ಹೇಳಿದ್ದಾರೆ.

ಹೊಸ ನೋಟುಗಳಲ್ಲಿ ಹೊಸ ಗವರ್ನರ್ ಸಹಿ
ಸದ್ಯ RBI ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರ (Sanjay Malhotra) ಅವರು ನೇಮಕ ಆಗಿದ್ದಾರೆ. ಇನ್ನುಮುಂದೆ RBI ಪ್ರಿಂಟ್ ಮಾಡುವ ಎಲ್ಲಾ ನೋಟುಗಳಲ್ಲಿ ನೂತನ ಗವರ್ನರ್ ಆಗಿರುವ ಸಂಜಯ್ ಮಲ್ಹೋತ್ರ ಅವರ ಸಹಿ ಇರಲಿದೆ. ಜನರು ಹಳೆಯ ನೋಟುಗಳಲ್ಲಿ ಶಕ್ತಿಕಾಂತ ದಾಸ್ ಅವರ ಸಹಿ ಇರುವ ಕಾರಣ ಯಾರು ಕೂಡ ಗೊಂದಲಕ್ಕೆ ಒಳಗಾಗುವ ಅಗತ್ಯ ಇರುವುದಿಲ್ಲ. ಈ ಹಿಂದೆ 100 ಮತ್ತು 200 ರೂ ನೋಟುಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಆ ನೋಟುಗಳಲ್ಲಿ ಸಂಜಯ್ ಮಲ್ಹೋತ್ರ ಅವರ ಸಹಿ ಇರುವುದನ್ನು ನಾವು ನೋಡಬಹುದು. ಡಿಸೆಂಬರ್ 2024 ರಿಂದ ಸಂಜಯ್ ಮಲ್ಹೋತ್ರ ಅವರು RBI ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅಂದಿನಿಂದ ಪ್ರಿಂಟ್ ಆದ ಎಲ್ಲಾ ನೋಟುಗಳಲ್ಲಿ ನಾವು ಸಂಜಯ್ ಮಲ್ಹೋತ್ರ ಅವರ ಸಹಿ ಕಾಣಬಹುದು.

Leave a Comment