WhatsApp Updates: ವಾಟ್ಸಪ್ ವಿಡಿಯೋ ಕಾಲ್ ಮಾಡುವವರಿಗೆ ಹೊಸ ಫೀಚರ್, ಇನ್ಮುಂದೆ ಕ್ಯಾಮೆರಾ ಆನ್ ಮಾಡಬೇಕಾಗಿಲ್ಲ

WhatsApp Video Call Feature Update: ವಿಶ್ವದಲ್ಲಿ ಅತೀ ಜನರು ಸಂದೇಶ ಮತ್ತು ಕರೆ ಮಾಡಲು ಬಳಸುವ ಅಪ್ಲಿಕೇಶನ್ ಗಳಲ್ಲಿ ವಾಟ್ಸಪ್ (WhatsApp) ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಬಹುದು. ಇಡೀ ವಿಶ್ವದಲ್ಲಿ ಸುಮಾರು 500 ಮಿಲಿಯನ್ ಜನರು ವಾಟ್ಸಪ್ ಬಳಸುತ್ತಿದ್ದಾರೆ ಎಂದು ಹೇಳಬಹುದು. ತಂತ್ರಜ್ಞಾನ ಮುಂದುವರೆದಂತೆ ವಾಟ್ಸಪ್ ನಲ್ಲಿ ಹಲವು ಬದಲಾವಣೆ ಮತ್ತು ಹಲವು ವಿಶೇಷತೆ ಜಾರಿಗೆ ತರಲಾಗಿದೆ ಎಂದು ಹೇಳಬಹುದು. ಇನ್ನು ವಾಟ್ಸಪ್ ನಲ್ಲಿ ಜನರು ಕೆಲವ ಕರೆ ಮತ್ತು ಸಂದೇಶ ಕಳುಹಿಸುವುದು ಮಾತ್ರವಲ್ಲದೆ UPI ಮೂಲಕ ಹಣ ಕೂಡ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇದರ ನಡುವೆ, ಈಗ ವಾಟ್ಸಪ್ ತನ್ನ ಕರೆ ಮಾಡುವ ಫೀಚರ್ ನಲ್ಲಿ ಹೊಸ ಬದಲಾವಣೆ ಜಾರಿಗೆ ತರುವುದರ ಮೂಲಕ ವಾಟ್ಸಪ್ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದೆ.

WhatsApp Group Join Now
Telegram Group Join Now

ವಾಟ್ಸಪ್ ಕರೆ ಮಾಡುವವರಿಗೆ ಹೊಸ ಫೀಚರ್
ಸದ್ಯ ವಾಟ್ಸಪ್ ಈಗ ಕರೆ ಮಾಡುವ ಫೀಚರ್ ನಲ್ಲಿ ದೊಡ್ಡ ಬದಲಾವಣೆ ಜಾರಿಗೆ ತರುವುದರ ಮೂಲಕ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದೆ ಎಂದು ಹೇಳಬಹುದು. ಹೌದು, ವಿಡಿಯೋ ಕರೆಯಲ್ಲಿ ಈಗ ಹೊಸ ನವೀಕರಣ ಮಾಡಲು ವಾಟ್ಸಪ್ ಮುಂದಾಗಿದೆ ಎಂದು ಹೇಳಬಹುದು, ವಿಡಿಯೋ ಕರೆ ನವೀಕರಣ ಮಾಡುವುದರ ಮೂಲಕ ವಾಟ್ಸಪ್ ಈಗೆ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದೆ. ಇನ್ನು ಜನರು ಹಳೆಯ ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ ತಕ್ಷಣ ಗೂಗಲ್ ಪ್ಲೇ ಸ್ಟೋರ್ ಗೆ (Google Playstore0 ಹೋಗಿ ವಾಟ್ಸಪ್ ಅಪ್ಡೇಟ್ ಮಾಡಿಕೊಂಡರೆ ಈಗ ಹೊಸ ಫೀಚರ್ ಪಡೆದುಕೊಳ್ಳಬಹುದು.

ವಿಡಿಯೋ ಕರೆಯಲ್ಲಿ ಹೊಸ ನವೀಕರಣ ಮಾಡಿದ ವಾಟ್ಸಪ್ (Whatsapp Video Call Update) 
ವಾಟ್ಸಪ್ ಈಗ ವಿಡಿಯೋ ಕರೆಯಲ್ಲಿ ಹೊಸ ನವೀಕರಣ ಮಾಡುವುದರ ಮುಳಕ ಬದಲಾವಣೆ ಜಾರಿಗೆ ತಂದಿದೆ. ಜನರು ಇನ್ನುಮುಂದೆ ವಾಟ್ಸಪ್ ಮೂಲಕ ವಿಡಿಯೋ ಕರೆ ಮಾಡುವಾಗ ಕರೆಯನ್ನು ಮ್ಯೂಟ್ ಮಾಡುವ ಆಯ್ಕೆ ಪಡೆದುಕೊಳ್ಳಲಿದ್ದಾರೆ. ವಿಡಿಯೋ ಕರೆ ಸ್ವೀಕರಿಸುವುದು ಮತ್ತು ತಿರಸ್ಕಾರ ಮಾಡುವ ಬಟನ್ ನಡುವೆ ನೀವು ಮ್ಯೂಟ್ ಮಾಡುವ ಬಟನ್ (WhatsApp Mute Button) ಕೂಡ ನೋಡಬಹುದು. ಹೊಸ ಫೀಚರ್ ಪ್ರಕಾರ, ಇನ್ನುಮುಂದೆ ವಾಟ್ಸಪ್ ಬಳಸುವವರಿಗೆ ಕರೆ ಸ್ವೀಕಾರ ಮಾಡಿದ ನಂತರ ಅದನ್ನು ತುರ್ತು ಸಮಯದಲ್ಲಿ ಮ್ಯೂಟ್ ಮಾಡಬಹುದು. ವಿಡಿಯೋ ಕರೆ ಮಾಡಿದ ಸಮಯದಲ್ಲಿ ನಿಮಗೆ ಈ ಫೀಚರ್ ಬಹಳ ಸಹಾಯಕ್ಕೆ ಬರಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ವಿಡಿಯೋ ಕರೆಗಳಿಗೆ ಬಂತು ಎಮೋಜಿ ಪ್ರಕ್ರಿಯೆ (WhatsApp Emoji)
ಇನ್ನುಮುಂದೆ ವಾಟ್ಸಪ್ ನಲ್ಲಿ ವಿಡಿಯೋ ಕರೆ ಮಾಡಿದ ಸಮಯದಲ್ಲಿ ಎಮೋಜಿಗಳನ್ನು ಕೂಡ ಬಳಕೆದಾರರು ಬಳಸಬಹುದು. ವಿಡಿಯೋ ಕರೆ ಸಮಯದಲ್ಲಿ ನೀವು ಎಮೋಜಿಗಳನ್ನು ಬಳಸುವ ಹೊಸ ನವೀಕರಣ ಕೂಡ ಹೊಸ ವಾಟ್ಸಪ್ ಅಪ್ಡೇಟ್ ನಲ್ಲಿ ಕಾಣಬಹುದು. ಗುಂಪು ವಿಡಿಯೋ ಕರೆ ಮಾಡಿದ ಸಮಯದಲ್ಲಿ ಈ ಎಮೋಜಿ ಆಯ್ಕೆ ಬಹಳೆದಾರರಿಗೆ ಹೊಸ ಅನುಭವ ನೀಡಲಿದೆ ಎಂದು ಹೇಳಬಹುದು.

ಇನ್ನುಮುಂದೆ ಕ್ಯಾಮೆರಾ ಆನ್ ಮಾಡದೆ ವಿಡಿಯೋ ಕರೆ ಸ್ವೀಕರಿಸಬಹುದು
ಇನ್ನು ವಾಟ್ಸಪ್ ಹೊಸ ಅಪ್ಡೇಟ್ ನಲ್ಲಿ ನಾವು ಕ್ಯಾಮೆರಾ ಆನ್ ಮಾಡದೆ ವಿಡಿಯೋ ಕರೆ ಸ್ವೀಕಾರ ಮಾಡುವ ಹೊಸ ಆಯ್ಕೆ ಕೂಡ ನೋಡಬಹುದು. ಹೌದು, ಸಾಕಷ್ಟು ಜನರು ಅನ್ಯ ನಂಬರ್ ನಿಂದ ವಿಡಿಯೋ ಕಾಲ್ ಬರುವ ಸಮಯದಲ್ಲಿ ಕಿರಿಕಿರಿ ಅನುಭವಿಸುತ್ತಾರೆ ಮತ್ತು ವಿಡಿಯೋ ಕರೆ ಮೂಲಕ ಸ್ಕ್ಯಾಮ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣಗಳಿಂದ ಮೆಟಾ (Meta) ಈಗ ವಾಟ್ಸಪ್ ನಲ್ಲಿ ಹೊಸ ನವೀಕರಣ ಮಾಡಿದ್ದು ಇನ್ನುಮುಂದೆ ಕ್ಯಾಮೆರಾ ಆನ್ ಮಾಡದೆ ಜನರು ವಿಡಿಯೋ ಕರೆಗಳನ್ನು ಸ್ವೀಕಾರ ಮಾಡಬಹುದು.

Leave a Comment