NHAI Rules On Toll Tax: ದೇಶದಲ್ಲಿ ಸಾರಿಗೆ ನಿಯಮದಲ್ಲಿ ಹಲವು ಬದಲಾವಣೆ ಜಾರಿಗೆ ತರಲಾಗಿದೆ ಎಂದು ಹೇಳಬಹುದು. ಹೌದು, ಸಾರಿಗೆ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತರುವುದರ ಮೂಲಕ ವಾಹನ ಸವಾರರ ಮತ್ತು ವಾಹನಗಳ ಮಾಲೀಕರ ಸಂತಸಕ್ಕೆ ಕೂಡ ಕಾರಣವಾಗಿದೆ. ಇದರ ನಡುವೆ NHAI ಟೋಲ್ ಗೇಟ್ ನಿಯಮದಲ್ಲಿ ಕೂಡ ಕೆಲವು ಬದಲಾವಣೆ ಜಾರಿಗೆ ತಂದಿದೆ ಎಂದು ಹೇಳಬಹುದು. ಹೌದು, ಟೋಲ್ ಪ್ಲಾಜಾಗಳಲ್ಲಿ ಪ್ರತಿನಿತ್ಯ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ ಮತ್ತು ದೇಶದ ಹಲವು ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಾಲುಗಟ್ಟುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಹೊಸ ಹೊಸ ತಂತ್ರಜ್ಞಾನವನ್ನು ಕೂಡ ಅಳವಡಿಸಿಕೊಳ್ಳಲಾಗಿದೆ.
ಇದರ ನಡುವೆ NHAI ಟೋಲ್ ಪ್ಲಾಜಾಗಳಿಗೆ ಸಂಬಂಧಪಟ್ಟಂತೆ ಜಾರಿಗೆ ತಂದಿರುವ ಈ ನಿಯಮದ ಬಗ್ಗೆ ಸಾಕಷ್ಟು ಜನರಿಗೆ ಇನ್ನೂ ಕೂಡ ತಿಳಿದಿಲ್ಲ ಎಂದು ಹೇಳಬಹುದು. ಹೌದು, ಮಿತಿಗಿಂತ ಅಧಿಕ ಸಮಯ ಟೋಲ್ ಪ್ಲಾಜಾಗಳಲ್ಲಿ ನಿಂತುಕೊಂಡರೆ ವಾಹನಗಳ ಮಾಲೀಕರು ಯಾವುದೇ ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ ಎಂದು NHAI ಸ್ಪಷ್ಟಣೆ ನೀಡಿದೆ. ಹಾಗಾದರೆ NHAI ನಿಯಮದ ಪ್ರಕಾರ ಎಷ್ಟು ಸಮಯ ಟೋಲ್ ಪ್ಲಾಜಾಗಳಲ್ಲಿ ನಿಂತುಕೊಂಡರೆ ಟೋಲ್ ಶುಲ್ಕ ಕಟ್ಟುವ ಅಗತ್ಯ ಇಲ್ಲ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.
ಇದಕ್ಕಿಂತ ಹೆಚ್ಚು ಸಮಯ ನಿಂತರೆ ಟೋಲ್ ಇಲ್ಲ
ಹೌದು, ದೇಶಾದ್ಯಂತ ಸುಮಾರು 1063 ಟೋಲ್ ಪ್ಲಾಜಾಗಳು ಕೆಲಸ ಮಾಡುತ್ತಿದೆ ಮತ್ತು ಕಳೆದ 5 ವರ್ಷದಲ್ಲಿ ಸುಮಾರು 400 ಹೊಸ ಟೋಲ್ ಗೇಟ್ ಗಳನ್ನೂ ನಿರ್ಮಾಣ ಮಾಡಲಾಗಿದೆ. ಎಷ್ಟೇ ಟೋಲ್ ಹೊಸ ತಂತ್ರಜ್ಞಾನ ಜಾರಿಗೆ ತಂದರೂ ಕೂಡ ಟೋಲ್ ಗೇಟ್ ಗಳಲ್ಲಿ ವಾಹನಗಳ ಸಾಲುಗಳು ಕಡಿಮೆ ಆಗಿಲ್ಲ ಎಂದು ಹೇಳಬಹುದು. ಇನ್ನು ಕೆಲವು ಸರ್ಕಾರೀ ವಾಹನಗಳು ಮತ್ತು ಕೆಲವು ಅಧಿಕಾರಿಗಳ ವಾಹನಗಳು ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಕಾಡ್ಡಾಯವಾಗಿ ಪಾವತಿ ಮಾಡಬೇಕು.
ಇನ್ನು NHAI ನಿಯಮಗಳ ಪ್ರಕಾರ ಇದಕ್ಕಿಂತ ಹೆಚು ಸಮಯ ಟೋಲ್ ಪ್ಲಾಜಾಗಳಲ್ಲಿ ನಿಂತರೆ ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ, ಆದರೆ ಈ ನಿಯಮ ಸಾಕಷ್ಟು ವಾಹನಗಳ ಮಾಲೀಕರಿಗೆ ಇನ್ನೂ ಕೂಡ ತಿಳಿದಿಲ್ಲ. ಹೌದು, NHAI ನಿಯಮದ ಪ್ರಕಾರ ಯಾವುದೇ ಟೋಲ್ ಪ್ಲಾಜಾದಲ್ಲಿ 10 ಅಥವಾ 20 ಸೆಕೆಂಡ್ ಗಳಿಗಿಂತ ಅಧಿಕ ಸಮಯದ ಕಾದರೆ ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ ಎಂದು NHAI 2021 ರಲ್ಲೇ ನಿಯಮವನ್ನು ಜಾರಿಗೆ ತಂದಿತ್ತು. ಹೌದು, NHAI ನಿಯಮದ ಪ್ರಕಾರ ಗರಿಷ್ಟ 20 ಸೆಕೆಂಡ್ ಗಳಿಗಿಂತ ಅಧಿಕ ಸಮಯ ಟೋಲ್ ಗೇಟ್ ನಲ್ಲಿ ಕಾದರೆ ಯಾವುದೇ ವಾಹನ ಸವಾರ ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ ಎಂದು 2021 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮವನ್ನು ಜಾರಿಗೆ ತಂದಿತ್ತು.
ಇನ್ನು NHAI ನಿಯಮದ ಪ್ರಕಾರ ಟೋಲ್ ಪ್ಲಾಜಾದಿಂದ 4 ಕಿಲೋಮೀಟರ್ ಹತ್ತಿರದಲ್ಲಿ ಇರುವ ಮನೆ ಕಟ್ಟಿಕೊಂಡಿರುವ ವಾಹನಗಳ ಮಾಲೀಕರು ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ. ಟೋಲ್ ಗೇಟ್ ಹತ್ತಿರದ ಬಳಿ ಇರುವವರು ಆಗಾಗ ಟೋಲ್ ದಾಟಿಕೊಂಡು ಹೋಗಬೇಕಾಗುತ್ತದೆ, ಈ ಕಾರಣಗಳಿಂದ NHAI ಅವರಿಗೆ ಉಚಿತವಾಗಿ ಹೋಗಲು ಅನುಮತಿ ನೀಡಿದೆ. ಇನ್ನು ಟೋಲ್ ಗೇಟ್ ನಲ್ಲಿ ಉಚಿತ ಪ್ರಯಾಣ ಮಾಡುವವರು ತಮ್ಮ ವಿಳಾಸದ ಪುರಾವೆ ಅಥವಾ ಅಥವಾ ಇತರೆ ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕು.