Saving Accounts: ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಖಾತೆಯ ನಡುವಿನ ವ್ಯತ್ಯಾಸ ಏನು…? ಖಾತೆ ತೆರೆಯುವ ಮುನ್ನ ತಿಳಿಯಿರಿ

Post Office Bank Saving Accounts Difference: ಭಾರತದಲ್ಲಿ ಹಣಕಾಸು ಕ್ಷೇತ್ರ ಬಹಳ ಮುಂದುವರೆದಿದೆ ಎಂದು ಹೇಳಬಹುದು. ಹೌದು, ದೇಶದ ಪ್ರತಿಯೊಬ್ಬ ಮಾನವ ಕೂಡ ಬ್ಯಾಂಕುಗಳಲ್ಲಿ ಖಾತೆ ಹೊಂದಿರುತ್ತಾನೆ ಎಂದು ಹೇಳಬಹುದು. ಇದರ ನಡುವೆ ಸಾಕಷ್ಟು ಜನರು ಪೋಸ್ಟ್ ಆಫೀಸ್ ನಲ್ಲಿ ಕೂಡ ಖಾತೆ ತೆರೆದಿರುವುದನ್ನು ನಾವು ನೀವೆಲ್ಲ ನೋಡಿರಬಹುದು. ಸಾಕಷ್ಟು ಜನರಿಗೆ ಬ್ಯಾಂಕಿನಲ್ಲಿ ಖಾತೆ ತೆರೆಯುವುದು ಒಳ್ಳೆಯದ ಅಥವಾ ಪೋಸ್ಟ್ ಆಫೀಸ್ (Post Office) ನಲ್ಲಿ ಖಾತೆ ತೆರೆಯುವುದು ಒಳ್ಳೆಯದ ಅನ್ನುವ ಪ್ರಶ್ನೆ ಕೂಡ ಮೂಡಿದೆ. ಪೋಸ್ಟ್ ಆಫೀಸ್ ಖಾತೆಗೂ ಮತ್ತು ಬ್ಯಾಂಕ್ ಖಾತೆಗೂ (Babk Accounts) ಹಲವು ವ್ಯತ್ಯಾಸಗಳು ಇರುವುದನ್ನು ನಾವು ನೀವೆಲ್ಲ ಗಮನಿಸಬಹುದು. ಹಾಗಾದರೆ ಪೋಸ್ಟ್ ಆಫೀಸ್ ಖಾತೆ ಮತ್ತು ಬ್ಯಾಂಕ್ ಖಾತೆ ನಡುವಿನ ವ್ಯತ್ಯಾಸ ಏನು ಮತ್ತು ಎಲ್ಲಿ ಬ್ಯಾಂಕ್ ಖಾತೆ ತೆರೆಯುವುದು ಉತ್ತಮ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ ನಲ್ಲಿದೆ ಉಳಿತಾಯ ಖಾತೆ
ಹೌದು, ಬ್ಯಾಂಕುಗಳ ಹಾಗೆ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ಇದೆ ಮತ್ತು ಕೋಟ್ಯಾಂತರ ಜನರು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ ಎಂದು ಹೇಳಬಹುದು. ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ಹೊಂದಿರುವವರ ಸಂಖ್ಯೆ ಕಡಿಮೆ ಎಂದು ಹೇಳಬಹುದು. ಆದರೆ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ಖಾತೆ ಉತ್ತಮ ಎಂದು ಹೇಳಬಹುದು. ಹೌದು, ಬ್ಯಾಂಕುಗಳಿಗಿಂತ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಗೆ ತೆರೆದರೆ ನಾವು ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಖಾತೆ ನಡುವಿನ ವ್ಯತ್ಯಾಸ ಏನು…?
* ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ನೀವು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ತೆರೆವುದು ಉತ್ತಮ ಎಂದು ಹೇಳಬಹುದು. ಹೌದು, ಬ್ಯಾಂಕುಗಳಿಂದ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಗೆ ಉತ್ತಮ ಬಡ್ಡಿ ನೀಡಲಾಗುತ್ತದೆ. ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಇದ್ದವರಿಗೆ 2.7% ರಿಂದ 3% ಬಡ್ಡಿ ನೀಡಲಾಗುತ್ತದೆ, ಆದರೆ ಪೋಸ್ಟ್ ಆಫೀಸ್ ನಲ್ಲಿ 4% ನೀಡಲಾಗುತ್ತದೆ.

* ಬ್ಯಾಂಕುಗಳಲ್ಲಿ ಉಳಿತಾಯ ಇದ್ದವರು ಕನಿಷ್ಠ ಬ್ಯಾಲೆನ್ಸ್ ಇಡದೆ ಇದ್ದರೆ ಅವರಿಗೆ ದಂಡ ಹಾಕಲಾಗುತ್ತದೆ, ಆದರೆ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ನಲ್ಲಿ ದಂಡ ಬಹಳ ಕಡಿಮೆ ಎಂದು ಹೇಳಬಹುದು.

* ಬ್ಯಾಂಕುಗಳಲ್ಲಿ ಖಾತೆ ಇದ್ದವರು ತಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 1000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣ ಇಡಬೇಕು, ಆದರೆ ಪೋಸ್ಟ್ ಆಫೀಸ್ ನಲ್ಲಿ ಕೇವಲ 500 ರೂಪಾಯಿ ಕನಿಷ್ಠ ಬಳಕೆ ಇಟ್ಟರೆ ಸಾಕು.

* ಪೋಸ್ಟ್ ಆಫೀಸ್ ನಲ್ಲಿ ಕನಿಷ್ಠ 50 ರೂಪಾಯಿ ಹಿಂಪಡೆಯಬಹುದು, ಆದರೆ ಬ್ಯಾಂಕುಗಳಲ್ಲಿ ಕನಿಷ್ಠ ಹಿಂಪಡೆಯುವಿಕೆಯ ಮೊತ್ತ ಜಾಸ್ತಿ ಆಗಿದೆ.

* ಬ್ಯಾಂಕುಗಳ ಹಾಗೆ ಅಂಕೆ ಕಚೇರಿಯಲ್ಲಿ ಖಾತೆ ಇದ್ದವರಿಗೂ ಕೂಡ ATM ಕಾರ್ಡ್ ನೀಡಲಾಗುತ್ತದೆ ಮತ್ತು ಅದರ ಶುಲ್ಕ ಕೂಡ ಕಡಿಮೆ ಆಗಿದೆ.

* ಕೆಲವು ಅಗತ್ಯ ಕೆಲಸಗಳಿಗೆ ಅಂಚೆ ಕಚೇರಿಯಲ್ಲಿ ಖಾತೆ ಇದ್ದವರೂ ಕೂಡ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಪಡೆದುಕೊಳ್ಳಬಹುದು.

* ಪೋಸ್ಟ್ ಆಫೀಸ್ ಉಳಿತಾಯ ಖಾತೆ ಇದ್ದವರು, ತಮ್ಮ ಖಾತೆಯ ಅಡಿಯಲ್ಲಿ ಸುಕನ್ಯಾ ಸಮೃದ್ಧಿ, ಬಿಮಾ ಸುರಕ್ಷಾ ಯೋಜನೆ, ಬಿಮಾ ಜ್ಯೋತಿ ಯೋಜನೆ ಸೇರಿದಂತೆ ಹಲವು ಯೋಜನೆಯ ಲಾಭ ಪಡೆದುಕೊಳ್ಳಬಹುದು.

Leave a Comment