Kodi Mutt Prediction: ರಾಜ್ಯದ ಮುಂದಿನ ಮುಖ್ಯಮಂತ್ರಿ ಇವರೇ..! CM ಬದಲಾವಣೆ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೊಡಿ ಸ್ವಾಮಿಗಳು

Kodi Mutt Shivayogi Shivananda Swamiji Predictions: ಕೊಡಿ ಮಠದ (Kodi Mutt) ಶ್ರೀಗಳು ಭವಿಷ್ಯ ನುಡಿಯುವುದರಲ್ಲಿ ಬಹಳ ಹೆಸರುವಾಸಿ ಎಂದು ಹೇಳಬಹುದು. ಹೌದು, ಹಿಂದೆ ಕರೋನ ಮಹಾಮಾರಿ ವಿಷಯವಾಗಿ ಮತ್ತು ಜಲಕಂಟಕದ ವಿಷಯವಾಗಿ ಕೊಡಿ ಮಠದ ಶ್ರೀಗಳು ಭವಿಷ್ಯ ನುಡಿಯುವುದರ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಇದರ ನಡುವೆ ಕೊಡಿ ಮಠದ ಶ್ರೀಗಳು ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಕೂಡ ಭವಿಷ್ಯ ನುಡಿಯುವುದರ ಮೂಲಕ ಸಾಕಷ್ಟು ಜನರ ಮೆಚ್ಚುಗೆಗೆ ಕಾರಣರಾಗಿದ್ದರು. ಸದ್ಯ ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗ ಬಗ್ಗೆ ಭವಿಷ್ಯ ನುಡಿದಿದ್ದಾರೆ.

WhatsApp Group Join Now
Telegram Group Join Now

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭವಿಷ್ಯ ನುಡಿದ ಸ್ವಾಮಿಗಳು
ಹೌದು, ಕೊಡಿ ಮಠದ ಶ್ರೀಗಳು ಈಗ ಸಂದರ್ಶನದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭವಿಷ್ಯ ನುಡಿಯುವುದರ ಮೂಲಕ ಇನ್ನಷ್ಟು ಚರ್ಚೆಗೆ ಕಾರಣವಾಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆ ಆಗುತ್ತಿರುವುದನ್ನು ನಾವು ನೀವೆಲ್ಲ ಸಾಕಷ್ಟು ಸಮಯಗಳಿಂದ ನೋಡಿಕೊಂಡು ಬಂದಿದ್ದೇವೆ. ಅದೇ ರೀತಿಯಲ್ಲಿ ಸಾಕಷ್ಟು ಸಮಯಗಳಿಂದ ಡಿಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವದಂತಿಗಳು ಕೂಡ ಹರಿದಾಡುತ್ತಿದೆ.

ಈ ನಡುವೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು (Kodi Mutt Shivananda Shivayogi Rajendra Swamiji) ಭವಿಷ್ಯ ನುಡಿದಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಿ ಮಠದ ಸ್ವಾಮಿಗಳು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದರ ಬಗ್ಗೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. “ಹಾಲು ಕೆಟ್ಟರೂ ಹಾಲಮತ ಸಮಾಜ ಸಮಾಜ ಕೆಡುವುದಿಲ್ಲ” ಅನ್ನುವ ಮಾತಿಗೆ, ಅದೇ ರೀತಿಯಲ್ಲಿ ಹಾಲಮತ ಸಮಾಜದವರ ಕಯ್ಯಲ್ಲೇ ಅಧಿಕಾರ ಇರಲಿದೆ ಎಂದು ಸ್ವಾಮಿಗಳು ಹೇಳಿದ್ದಾರೆ.

ಅವರಿಂದ ಅಧಿಕಾರ ಕಸಿದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಮತ್ತು ಅವರೇ ಸ್ವಇಚ್ಛೆಯಿಂದ ಅಧಿಕ ಬಿಟ್ಟರೆ ಮಾತ್ರ ಬೇರೆಯವರಿಗೆ ಅಧಿಕಾರ ಸಿಗಲಿದೆ ಎಂದು ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ಇನ್ನು ಈ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಯ್ಯಲ್ಲೇ ಅಧಿಕಾರ ಇರಲಿದೆ ಎಂದು ಹೇಳಿದ್ದಾರೆ ಸ್ವಾಮಿಗಳು. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವುದು ಅಷ್ಟು ಸುಲಭದ ಮಾತಲ್ಲ ಮತ್ತು ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುವ ಬಗ್ಗೆ ಕೊಡಿ ಮಠದ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ತಮ್ಮ ಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ ಬೇರೆಯವರು ಅಧಿಕಾರ ಪಡೆದುಕೊಳ್ಳಬಹುದು ಎಂದು ಸ್ವಾಮಿಗಳು ಪರೋಕ್ಷವಾಗಿ ಭವಿಷ್ಯ ನುಡಿದಿಡಿದ್ದಾರೆ.

Leave a Comment