KTM Electric Cycle Price And Mileage: ಇತ್ತೀಚಿನ ಕಾಲದಲ್ಲಿ ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಮತ್ತು ಸೈಕಲ್ ಮಾರಾಟ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು, ಜನರು ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೇಗೆ ಎಲೆಕ್ಟ್ರಿಕ್ ಕಾರುಗಳನ್ನು ಮತ್ತು ಸ್ಕೂಟರ್ ಗಳನ್ನೂ ಜನರು ಖರೀದಿ ಮಾಡುತ್ತಿದ್ದಾರೋ ಅದೇ ರೀತಿಯಲ್ಲಿ ಎಲೆಕ್ಟ್ರಿಕ್ ಸೈಕಲ್ ಖರೀದಿ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ಸೈಕಲ್ ಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಹೇಳಬಹುದು. ಸದ್ಯ KTM ಬೈಕ್ ಕಂಪನಿ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಗೆ ಲಾಂಚ್ ಮಾಡುವುದರ ಮೂಲಕ ಯುವಕರನ್ನು ಮತ್ತಷ್ಟು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು.
ಮಾರುಕಟ್ಟೆಗೆ ಬಂತು KTM ಎಲೆಕ್ಟ್ರಿಕ್ ಸೈಕಲ್
KTM ಕಂಪನಿ ಈಗ KTM Electric Cycle ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ನೋಡಲು ಬಹಳ ಆಕರ್ಷಣೀಯವಾಗಿ ಕಾಣುವ KTM Electric Cycle ಖರೀದಿಗೆ ಯುವಕರು ಫಿದಾ ಆಗಿದ್ದಾರೆ ಎಂದು ಹೇಳಬಹುದು. ಕಡಿಮೆ ಬೆಲೆ ಮತ್ತು ಅತ್ಯಧಿಕ ಮೈಲೇಜ್ ಕೊಡುವ ಸೈಕಲ್ ಇದಾಗಿದ್ದು ಈ ಸೈಕಲ್ ಹೆಚ್ಚು ಹೆಚ್ಚು ಯುವಕರಿಗೆ ಇಷ್ಟವಾಗಲಿದೆ ಎಂದು ಕಂಪನಿ ಹೇಳಿದೆ. ಹಾಗಾದರೆ KTM Electric Cycle ಬೆಲೆ ಮತ್ತು ಮೈಲೇಜ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
KTM Electric Cycle ಬೆಲೆ ಮತ್ತು ಮೈಲೇಜ್
KTM Electric Cycle ದೇಶದಲ್ಲಿ ದಾಖಲೆಯ ಮಾರಾಟ ಕಾಣುವ ಸೈಕಲ್ ಆಗಿರಲಿದೆ ಎಂದು ಹೇಳಿಕೊಂಡ ಕಂಪನಿ KTM Electric Cycle ಸುಮಾರು 140 ಕಿಲೋಮೀಟರ್ ಮೈಲೇಜ್ ಕೊಡಲಿದೆ ಎಂದು ಹೇಳಿದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 140 ಕಿಲೋಮೀಟರ್ ತನಕ ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣ ಮಾಡಬಹುದು. ಎರಡು ಘಂಟೆಯಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದಾದ KTM Electric Cycle ದೂರದ ಪ್ರಯಾಣಕ್ಕೆ ಬಹಳ ಸಹಕಾರಿ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಇದೊಂದು ಹೈಸ್ಪೀಡ್ ಸೈಕಲ್ ಆಗಿರಲಿದೆ ಮತ್ತು ಈ ಸೈಕಲ್ 45KM ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. LED ಡಿಸ್ಪ್ಲೇ ಕೂಡ KTM Electric Cycle ನಲ್ಲಿ ಲಭ್ಯವಿದೆ ಮತ್ತು ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಕೂಡ ಅಳವಡಿಸಲಾಗಿದೆ. ಬ್ಯಾಟರಿ ದೀರ್ಘಕಾಲಿಕ ಬರುವ ಕಾರಣ ಈ ಸೈಕಲ್ ದೂರ ಪ್ರಯಾಣಕ್ಕೆ ಅಚ್ಚುಮೆಚ್ಚಿನ ಸೈಕಲ್ ಅನಿಸಿಕೊಂಡಿದೆ. ಇನ್ನು ಬೆಲೆ ಬಗ್ಗೆ ಮಾತನಾಡುವುದಾದರೆ, ಭಾರತದಲ್ಲಿ KTM Electric Cycle ಬೆಲೆ ಸುಮಾರು 35 ಸಾವಿರ ರೂಪಾಯಿ ಆಗಿರಬಹುವುದು ಎಂದು ಅಂದಾಜು ಮಾಡಲಾಗಿದೆ. ದೇಹಕ್ಕೆ ವ್ಯಾಯಾಮ ಮತ್ತು ದೂರ ಪ್ರದೇಶಕ್ಕೆ ಪ್ರಯಾಣ ಮಾಡಬೇಕು ಅಂದುಕೊಳ್ಳುವವರಿಗೆ ಈ KTM Electric Cycle ಬೆಸ್ಟ್ ಎಂದು ಕಂಪನಿ ಹೇಳಿಕೊಂಡಿದೆ. KTM Electric Cycle 2025 ರ ಜೂನ್ ತಿಂಗಳಲ್ಲಿ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. KTM Electric Cycle ನೇರವಾಗಿ ಟಾಟಾ ಮತ್ತು ಹೀರೋ ಕಂಪನಿಗಳಿಗೆ ಪೈಪೋಟಿ ಕೊಡಲಿದೆ.