Kumbh Mela Monalisa Latest News: 144 ವರ್ಷಗಳ ಬಳಿಕ ಪ್ರಯಾಗ್ರಾಜ್ ನಲ್ಲಿ ನಡೆದ ಮಹಾ ಕುಂಭ ಮೇಳಕ್ಕೆ (Maha Kumbh Mela) ಕೋಟ್ಯಾಂತರ ಸಂಖ್ಯೆಯ ಜನರು ಭಾಗವಹಿಸಿದ್ದರು ಎಂದು ಹೇಳಬಹುದು. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಈ ಮಹಾ ಕುಂಭಮೇಳಕ್ಕೆ ಬರಿ ಭಾರತದ ಜನರು ಮಾತ್ರವಲ್ಲದೆ ದೇಶ ವಿದೇಶದಿಂದ ಜನರು ಬಂದಿದ್ದರು ಎಂದು ಹೇಳಬಹುದು. ಇನ್ನು ಈ ಕುಂಭಮೇಳದಲ್ಲಿ ಅತೀ ಜನಮೆಚ್ಚುಗೆ ಪಡೆದುಕೊಂಡಿದ್ದು ಅಂದರೆ ಮೊನಾಲಿಸಾ ಎಂದು ಹೇಳಬಹುದು. ಹೌದು, ಸುಮಾರು 17 ವರ್ಷ ವಯಸ್ಸಿನ ಮೊನಾಲಿಸಾ (Monalisa) ಅನ್ನುವ ಯುವತಿ ಮಹಾ ಕುಂಭ ಮೇಳದಲ್ಲಿ ಸಾಕಷ್ಟು ವೈರಲ್ ಆಗಿದ್ದಳು. ತನ್ನ ಕಣ್ಣು ಮತ್ತು ನಗುವಿನ ಮೂಲಕ ಸಾಕಷ್ಟು ಜನರ ನಿದ್ದೆ ಕೆಡಿಸಿದ್ದ ಮೊನಾಲಿಸಾ ನಂತರ ಹಲವು Youtuber ಗಳ ವಿಡಿಯೋ ಮೂಲಕ ಇನ್ನಷ್ಟು ವೈರಲ್ ಕೂಡ ಆಡಲು.
ಬಾಲಿವುಡ್ ನಲ್ಲಿ ಚಾನ್ಸ್ ಪಡೆದುಕೊಂಡ ಮೊನಾಲಿಯ
ಮಹಾ ಕುಂಭಮೇಳದ ಮೂಲಕ ಸಾಕಷ್ಟು ವೈರಲ್ ಆದ ಮೊನಾಲಿಸಾ ನಂತರ ಬಾಲಿವುಡ್ ನ ಚಿತ್ರದಲ್ಲಿ ನಟನೆ ಮಾಡಲು ಅವಕಾಶ ಪಡೆದುಕೊಂಡು ಮಾಡೆಲಿಂಗ್ ಕ್ಷೇತ್ರಕ್ಕೂ ಕೂಡ ಕಾಲಿಟ್ಟಿದ್ದಳು. ಈ ನಡುವೆ ಬಹಳ ಮಾಡ್ರನ್ ಆಗಿದ್ದ ಮೊನಾಲಿಸಾಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದ್ದವು ಎಂದು ಹೇಳಬಹುದು. ಕುಂಭ ಮೇಳದ ಮೂಲಕ ವೈರಲ್ ಆಗಿದ್ದ ಮೊನಾಲಿಸಾ ಈಗ ತನ್ನ youtube ಚಾನೆಲ್ ಮೂಲಕವೇ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಳೆ. ಬಾಲಿವುಡ್ ನ ಮಣಿಪುರ ಡೈರಿ ಚಿತ್ರದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದ ಮೊನಾಲಿಸಾಳ ಅದೃಷ್ಟ ಈಗ ಸರಿ ಇಲ್ಲ ಎಂದು ಹೇಳಬಹುದು.
ಗಳಗಳನೆ ಕಣ್ಣೀರು ಹಾಕಿದ ಮೊನಾಲಿಸಾ
ನಿರ್ದೇಶಕ ಸನೋಜ್ ಮಿಶ್ರ ಅವರು ಮೊನಾಲಿಸಾಳನ್ನು ಮಣಿಪುರ ಡೈರಿ (Diary Of Manipura) ಚಿತ್ರದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳ್ಕೊಂಡಿದ್ದರು ಮತ್ತು ಅದಕ್ಕೆ ಫೋಟೋಶೂಟ್ ಕೂಡ ಮಾಡಿಸಿದ್ದರು. ಈ ನಡುವೆ ಸನೋಜ್ ಮಿಶ್ರ ಅವರ ಮೇಲೆ ಅ*ತ್ಯಾಚಾರದ ಆರೋಪ ಕೇಳಿಬಂದಿದೆ ಮತ್ತು ಅವರ ದೂರು ಕೂಡ ದಾಖಲಾಗಿದೆ. ಇನ್ನು ಅ*ತ್ಯಾಚಾರ ಆರೋಪ ಕೇಳಿಬಂದ ಕಾರಣ ಸನೋಜ್ ಮಿಶ್ರ ಅವರನ್ನು ಬಂಧಿಸಿದ್ದಾರೆ. ಚಿತ್ರಗಳಲ್ಲಿ ನಟನೆ ಮಾಡಲು ಅವಕಾಶ ನೀಡುವುದಾಗಿ ಸನೋಜ್ ಮಿಶ್ರ (Sanoj Mishra) ಅವರು ನನಗೆ ಸುಳ್ಳು ಹೇಳಿ ನಂತರ ನನ್ನಮೇಲೆ ಸಾಕಷ್ಟು ಬಾರಿ ಅ*ತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ.
ನನ್ನಮೇಲೆ ಸಾಕಷ್ಟು ಬಾರಿ ದೌರ್ಜನ್ಯ ಮಾಡಿದ್ದ ಸನೋಜ್ ಮಿಶ್ರ ಅವರು ಅದನ್ನು ವಿಡಿಯೋ ಮಾಡಿಟ್ಟುಕೊಂಡು ನನ್ನಮೇಲೆ ಸಾಕಷ್ಟು ಬಾರಿ ಅ*ತ್ಯಾಚಾರ ಮಾಡಿದ್ದಾರೆ ಯುವತಿ ದೂರು ನೀಡಿದ್ದಾಳೆ. ಇನ್ನು ಯುವತಿ ಕೊಟ್ಟ ದೂರಿನ ಮೇಲೆ ಸನೋಜ್ ಮಿಶ್ರ ಅವರನ್ನು ಬಂಧಿಸಿದ್ದಾರೆ. ಈ ನಡುವೆ ಕುಂಭ ಮೇಳದ ಚಲುವೆ ಮೊನಾಲಿಸಾ ಅವರಿಗೂ ಕೂಡ ಸನೋಜ್ ಮಿಶ್ರ ಅವರು ಅವಕಾಶ ನೀಡುವುದಾಗಿ ಹೇಳಿ ಎಲ್ಲೆಂದರಲ್ಲಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ ಮತ್ತು ಮೊನಾಲಿಸಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಕೇರಳದ ಚಿನ್ನದ ಅಂಗಡಿ ಉದ್ಘಾಟನೆಗೂ ಕೂಡ ಬಂದಿದ್ದಳು. ಸದ್ಯ ಸನೋಜ್ ಮಿಶ್ರ ಅರೆಸ್ಟ್ ಆದಂತೆ ಮೊನಾಲಿಸಾಳ ಎಲ್ಲಾ ಕನಸು ಭಗ್ನವಾಗಿದೆ.
ಮುಂದಿನ ದಿಕ್ಕು ತೋಚದೆ ಮೊನಾಲಿಸಾ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದು ಸದ್ಯ ಆ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇತ್ತಕಡೆ ಇಷ್ಟೆಲ್ಲ ಪ್ರಸಿದ್ದಿ ಗಳಿಸಿಕೊಂಡ ನಂತರ ಮತ್ತೆ ರುದ್ರಾಕ್ಷಿ ಮಾರಾಟಕ್ಕೂ ಹೋಗದಂತೆ ಆಗಿದೆ ಮೊನಾಲಿಸಾಳ ಪರಿಸ್ಥಿತಿ. ಇನ್ನು ಸಿನೆಮಾಗೆ ಅವಕಾಶ ಕೊಡುವುದಾಗಿ ಹೇಳಿದ ಎಲ್ಲರೂ ಕೂಡ ಈಗ ಉಲ್ಟಾ ಹೊಡೆದಿದ್ದಾರೆ, ಸದ್ಯ ಮೊನಾಲಿಸಾಳ ಪರಿಸ್ಥಿತಿ ಈಗ ದಿಕ್ಕು ತೋಚದಂತೆ ಆಗಿದೆ ಎಂದು ಹೇಳಬಹುದು.