Bank Of Baroda Fixed deposit Rate Down: ದೇಶದ ಅತೀ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡ (Bank Of Baroda) ಈಗ ತನ್ನ ಎಲ್ಲಾ ಗ್ರಾಹಕರಿಗೆ ಬೇಸರದ ಸುದ್ದಿಯನ್ನು ನೀಡಿದೆ. ಹೌದು, ದೇಶದಲ್ಲಿ ದಿನದಿಂದ ದಿನಕ್ಕೆ ಹೂಡಿಕೆ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಹೇಳಬಹುದು. ಇನ್ನು ಬ್ಯಾಂಕ್ ಆಫ್ ಬರೋಡದಲ್ಲಿ ಜನರು FD ಯೋಜನೆಯನ್ನು ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ.
ಕೆಲವು ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಬ್ಯಾಂಕ್ ಆಫ್ ಬರೋಡದಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಅನ್ನುವ ಕಾರಣಕ್ಕೆ ಸಾಕಷ್ಟು ಜನರು ಬ್ಯಾಂಕ್ ಆಫ್ ಬರೋಡದಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಈಗ ಬ್ಯಾಂಕ್ ಆಫ್ ಬರೋಡದಲ್ಲಿ FD ಯೋಜನೆಯಲ್ಲಿ (Fixed Deposit) ಹೂಡಿಕೆ ಮಾಡಿದವರಿಗೆ ಬ್ಯಾಂಕ್ ಆಫ್ ಬರೋಡ ಡಬಲ್ ಬೇಸರದ ಸುದ್ದಿ ನೀಡಿದೆ. ಹಾಗಾದರೆ ಬ್ಯಾಂಕ್ ಆಫ್ ಬರೋಡದಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಬ್ಯಾಂಕ್ ಆಫ್ ಬರೋಡ ನೀಡಿದ ಬೇಸರದ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
FD ಮೇಲಿನ ಬಡ್ಡಿದರ ಇಳಿಕೆ ಮಾಡಿದ BOB
ಹೌದು, ಬ್ಯಾಂಕ್ ಆಫ್ ಬರೋಡ ಈಗ ತನ್ನ FD ಯೋಜನೆಯ ಬಡ್ಡಿದರ (Bank Of Baroda Fixed Deposit Rate) ಇಳಿಕೆ ಮಾಡುವುದರ ಮೂಲಕ FD ಯೋಜನೆಯಲ್ಲಿ ಹೂಡಿಕೆ ಮಾಡಿದ ಎಲ್ಲಾ ಹೂಡಿಕೆದಾರರಿಗೆ ಬೇಸರದ ಸುದ್ದಿಯನ್ನು ನೀಡಿದೆ. ಷೇರು ಮಾರುಕಟ್ಟೆಯ ದಿಡೀರ್ ಕುಸಿತದ ಕಾರಣ ಬ್ಯಾಂಕ್ ಬರೋಡ ಬಹುದೊಡ್ಡ ನಷ್ಟ ಅನುಭವಿಸಿದೆ ಎಂದು ಹೇಳಬಹುದು. 3900 ಸೆನ್ಸೆಕ್ಸ್ ಮತ್ತು 1400 ನಿಫ್ಟಿ ಪಾಯಿಂಟ್ ಕುಸಿತ ಕಂಡಿದೆ. ಇದೆ ಸಮಯದಲ್ಲಿ RBI ರೆಪೋ ದರ ಕೂಡ ಕಡಿಮೆ ಮಾಡುತ್ತಿರುವುದರ ಕಾರಣ ಬ್ಯಾಂಕುಗಳು ಈಗ FD ದರದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.
ಬ್ಯಾಂಕ್ ಆಫ್ ಬರೋಡ ಈಗಿನ FD ದರ ಎಷ್ಟು
ಷೇರು ಮಾರುಕಟ್ಟೆಯ ಕುಸಿತದ ಕಾರಣ ಬ್ಯಾಂಕ್ ಆಫ್ ಬರೋಡ ಈಗ FD ದರದಲ್ಲಿ ದೊಡ್ಡ ಮೊತ್ತದ ಇಳಿಕೆ ಮಾಡಿದೆ ಮತ್ತು FD ದರವನ್ನು 0.20% ಇಳಿಕೆ ಮಾಡುವುದರ ಮೂಲಕ FD ಹೂಡಿಕೆ ಮಾಡಿದ ಜನರಿಗೆ ಬೇಸರದ ಸುದ್ದಿ ನೀಡಿದೆ. ಇನ್ನು ಹೊಸ ಬಡ್ಡಿದರ ಏಪ್ರಿಲ್ ತಿಂಗಳಿಂದ ಆರಂಭ ಆಗಿದೆ ಮತ್ತು ಯಾರು ಮೂರೂ ಕೋಟಿಗಿಂತ ಕಡಿಮೆ ಹೂಡಿಕೆ ಮಾಡುತ್ತಾರೋ ಅವರಿಗೆ ಮಾತ್ರ ಇದು ಅನ್ವಯ ಆಗಲಿದೆ. ಇನ್ನು ಬ್ಯಾಂಕ್ ಆಫ್ ಬರೋಡ 7 ದಿನದಿಂದ 10 ವರ್ಷಗಳ ತನಕ FD ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತಿದೆ.
ಬ್ಯಾಂಕ್ ಆಫ್ ಬರೋಡ FD ಬಡ್ಡಿದರ ಈ ರೀತಿ ಇದೆ
* 7 ರಿಂದದಿಂದ 14 ಕಾಲ FD ಇಡುವವರಿಗೆ 4.5 ರಿಂದ 4.75 % ಬಡ್ಡಿ ನೀಡಲಾಗುತ್ತದೆ.
* 15 ದಿನದಿಂದ 45 ದಿನಗಳ ಕಾಲ FD ಯೋಜನೆಯಲ್ಲಿ ಹಣ ಇಡುವವರಿಗೆ 4.5 ರಿಂದ 5% ಬಡ್ಡಿ ನೀಡಲಾಗುತ್ತದೆ.
* 45 ದಿನದಿಂದ 90 ದಿನಗಳ ವರೆಗೆ ಹೂಡಿಕೆ ಮಾಡುವವರಿಗೆ 5.5 ರಿಂದ 6% ಬಡ್ಡಿದರ ನೀಡಲಾಗುತ್ತದೆ.
* 90 ದಿನದಿಂದ 180 ದಿನಗಳ ಕಾಲ ಹೂಡಿಕೆ ಮಾಡುವವರಿಗೆ 5.6 ರಿಂದ 6.10% ಬಡ್ಡಿದರ ನೀಡಲಾಗುತ್ತದೆ.
* 180 ದಿನದಿಂದ 210 ದಿನಗಳಿಗೆ ಹೂಡಿಕೆ ಮಾಡುವವರಿಗೆ 5.75 ರಿಂದ 6.25% ದರದಲ್ಲಿ ಬಡ್ಡಿ ನೀಡಲಾಗುತ್ತದೆ.
* 211 ದಿನದಿಂದ 270 ದಿನಗಳ ಕಾಲ ಹೂಡಿಕೆ ಮಾಡುವವರಿಗೆ 6.25 ರಿಂದ 6.75% ನಲ್ಲಿ ಬಡ್ಡಿ ನೀಡಲಾಗುತ್ತದೆ.
* 271 ದಿನದಿಂದ 1 ವರ್ಷಕ್ಕೆ ಹೂಡಿಕೆ ಮಾಡುವವರಿಗೆ 6.5 ರಿಂದ 7% ಬಡ್ಡಿದರ ನೀಡಲಾಗುತ್ತದೆ.
* 1 ವರ್ಷದಿಂದ 400 ದಿನಗಳ ತನಕ ಹೂಡಿಕೆ ಮಾಡುವವರಿಗೆ 7 ರಿಂದ 7.5% ಬಡ್ಡಿದರ ನೀಡಲಾಗುತ್ತದೆ.
* 400 ದಿನದಿಂದ 2 ವರ್ಷಗಳ ಕಾಲ ಹೂಡಿಕೆ ಮಾಡುವವರಿಗೆ 7 ರಿಂದ 7.5% ಬಡ್ಡಿದರ ನೀಡಲಾಗುತ್ತದೆ.
* 2 ವರ್ಷದಿಂದ 3 ವರ್ಷಗಳ ತನಕ ಹೂಡಿಕೆ ಮಾಡುವವರಿಗೆ 7.15 ರಿಂದ 7.65 % ಬಡ್ಡಿದರ ನೀಡಲಾಗುತ್ತದೆ.
* 3 ವರ್ಷದಿಂದ 5 ವರ್ಷಗಳ ಕಾಲ ಹೂಡಿಕೆ ಮಾಡುವವರಿಗೆ 6.8 ರಿಂದ 7.4% ಬಡ್ಡಿದರ ನೀಡಲಾಗುತ್ತದೆ.
* 5 ವರ್ಷದಿಂದ 10 ವರ್ಷಕ್ಕೆ ಹೂಡಿಕೆ ಮಾಡುವವರಿಗೆ 6.5 ರಿಂದ 7.5% ಬಡ್ಡಿದರ ನೀಡಲಾಗುತ್ತದೆ.