UPI Loan: UPI ಮೂಲಕ ಸಾಲ ಪಡೆದುಕೊಳ್ಳುವುದು ಹೇಗೆ…? UPI ಬಳಸುವವರಿಗೆ 10 ನಿಮಿಷದಲ್ಲಿ ಸಿಗಲಿದೆ ಸಾಲ

How To Take Loan On UPI: ದೇಶದಲ್ಲಿ ಡಿಜಿಟಲ್ ಪಾವತಿ (Digital Payments)  ಹೆಚ್ಚಾಗಿದೆ ಎಂದು ಹೇಳಬಹುದು. ಹೌದು, ನಗದು ಹಣದ ವಹಿವಾಟು ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ ಮತ್ತು ಜನರು ಹೆಚ್ಚು ಹೆಚ್ಚು UPI ಬಳಸುತ್ತಿದ್ದಾರೆ. ದೇಶದ ಮೂಲೆ ಮೂಲೆಗೂ ಕೂಡ UPI ಬಂದಿದ್ದು ಜನರು UPI ಮೂಲಕವೇ ಹೆಚ್ಚಿನ ಹಣಕಾಸು ವಹಿವಾಟು ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಈ ನಡುವೆ ದೇಶದಲ್ಲಿ UPI ಬಳಸುವವರಿಗಾಗಿ ಅನೇಕ ಹೊಸ ಫೀಚರ್ ಗಳನ್ನು ಜಾರಿಗೆ ತರಲಾಗಿದೆ. UPI ಮೂಲಕ ಹಣಕಾಸು ವಹಿವಾಟು ಮಾಡುವವರು ಈಗ UPI ಮೂಲಕವೇ ಸಾಲ ಕೂಡ ಪಡೆದುಕೊಳ್ಳಬಹುದು. ಹಾಗಾದರೆ UPI ಬಳಸುವವರು UPI ಮೂಲಕ ಸಾಲ ಪಡೆದುಕೊಳ್ಳುವುದು ಹೇಗೆ ಮತ್ತು ಅನುಸರಿಸಬೇಕಾದ ವಿಧಾನಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

UPI ಮೂಲಕ ಪಡೆಯಬಹುದು ಸಾಲ ಪಡೆದುಕೊಳ್ಳುವುದು ಹೇಗೆ…?
ದೇಶದಲ್ಲಿ UPI ಬಳಕೆ ಮಾಡುವವರ ಸಂಖ್ಯೆ ಹೆಚ್ಚಾದ ಕಾರಣ ದೇಶದ ಆರ್ಥಿಕ ಸ್ಥಿತಿ ಇನ್ನಷ್ಟು ಉತ್ತಮವಾಗುತ್ತಿದೆ ಎಂದು ಹೇಳಬಹುದು. NPCI ಈಗ UPI ಕ್ಷೇತ್ರವನ್ನು ಇನ್ನಷ್ಟು ವಿಸ್ತರಣೆ ಮಾಡಲು ಮುಂದಾಗಿದೆ ಮತ್ತು UPI ಮೂಲಕ ಸಾಲ ನೀಡಲು NPCI ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಬಹುದು. 2016 ನೇ ಇಸವಿಯಲ್ಲಿ ದೇಶದಲ್ಲಿ UPI ಆರಂಭ ಆಗಿದ್ದು ಸದ್ಯದ ದಿನಗಳಲ್ಲಿ ಸರಿಸುಮಾರು 45 ಕೋಟಿ ಜನರು UPI ವಹಿವಾಟು ಮಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ 65 ಬಳಕೆದಾರರನ್ನು ತಲುಪುವ ಗುರಿಯನ್ನು NPCI ಹೊಂದಿದೆ ಮತ್ತು ಜನರು ಸಣ್ಣಪುಟ್ಟ ವಹಿವಾಟುಗಳಿಗೂ ಕೂಡ UPI ಬಳಕೆ ಮಾಡುತ್ತಿದ್ದಾರೆ. ಚಿಕ್ಕ ಚಹಾ ಅಂಗಡಿಯಿಂದ ಹಿಡಿದು ಎಲ್ಲಾ ಅಂಗಡಿಗಳಲ್ಲಿ UPI ಇರುವುದು ಗಮನಾರ್ಹ ಆಗಿದೆ ಎಂದು ಹೇಳಬಹುದು. ಸದ್ಯ ಈಗ NPCI UPI ಕ್ರೆಡಿಟ್ ಲೈನ್ ಮೂಲಕ ಸಾಲ ಸೌಲಭ್ಯ ನೀಡಲು ಮುಂದಾಗಿದೆ. UPI ಬಳಸುವವರು ಅತೀ ಕಡಿಮೆ ಬಡ್ಡಿದರದಲ್ಲಿ ಈ ಸಾಲ ಪಡೆದುಕೊಳ್ಳಬಹುದು. ಸದ್ಯ RBI ನೊಂದಿಗೆ NPCI ಮಾತುಕತೆ ಕೂಡ ಮಾಡಿದ್ದು ಜನರು ಇನ್ನುಮುಂದೆ ಮರುಕಳಿಸುವ ಪಾವತಿಗಳಿಗೆ UPI ಮೂಲಕವೇ ಅತೀ ಕಡಿಮೆ ಬಡ್ಡಿಗೆ ಸಾಲ ಪಡೆದುಕೊಳ್ಳಬಹುದು.

ಭಾರತದ ಮುಂದಿನ ಡಿಜಿಟಲ್ ಭವಿಷ್ಯದ ಉದ್ದೇಶದಿಂದ ಈಗ NPCI ಬಹುದೊಡ್ಡ ಹೆಜ್ಜೆ ಇಟ್ಟಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಣಕಾಸು ವಂಚನೆ ಮತ್ತು ಚೆಕ್ ಬೌನ್ಸ್ ನಂತರ ವಂಚನೆಯನ್ನು ತಡೆಗಟ್ಟಲು UPI ಬಹಳ ಸಹಕಾರಿ ಕೂಡ ಆಗಿದೆ. ಇನ್ನು ಸರ್ಕಾರೀ ಮತ್ತು ಖಾಸಗಿ ವೇದಿಕೆ ನಡುವಿನ ಸ್ಪಷ್ಟತೆಯನ್ನು ಸರಿದೂಗಿಸಲು BHIM ಅಪ್ಲಿಕೇಶನ್ (BHIM Application) ಅನ್ನು ಬೇರ್ಪಡಿಸಲಾಗಿದೆ. ಇನ್ನು ಮೂಲಗಳ ಪ್ರಕಾರ 2024 ರಲ್ಲಿ ದಾಖಲೆಯ 20 ಕಂಪನಿಗಳು UPI ಅನುಮೋಧನೆಯನ್ನು ಪಡೆದುಕೊಂಡಿದೆ. ಇನ್ನು ಭಾರತ ಮಾತ್ರವಲ್ಲದೆ NPCI ಈಗ UPI ಅನ್ನು ಇತರೆ 7 ದೇಶಗಳಿಗೆ ಹಸ್ತಾಂತರ ಮಾಡಿದೆ. UPI ಮೂಲಕ ಸಾಲ ಪಡೆದುಕೊಳ್ಳುವ ಪ್ರಕ್ರಿಯೆ ಹೇಗೆ ಅನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ NPCI ಮಾಹಿತಿ ಬಿಡುಗಡೆ ಮಾಡಲಿದೆ.

Leave a Comment