Vehicle Loan: ಇಲ್ಲಿದೆ ನೋಡಿ ಅತೀ ಕಡಿಮೆ ಬಡ್ಡಿಗೆ ಕಾರ್ ಖರೀದಿಸಲು ಸಾಲ ಕೊಡುವ ಬ್ಯಾಂಕುಗಳ ಪಟ್ಟಿ, ಕಡಿಮೆ EMI

Best Banks For Vehicle Loans: ಕಾರ್ ಖರೀದಿ (Car Purchase) ಮಾಡುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಇದ್ದೆ ಇರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ತಮಗೆ ಇಷ್ಟವಾದ ಕಾರ್ ಖರೀದಿ ಮಾಡಬೇಕು ಎಂದು ಎಲ್ಲರೂ ಕೂಡ ಬಯಸುತ್ತಾರೆ. ಇತ್ತೀಚಿನ ಕಾಲದಲ್ಲಿ ಕಾರ್ ಖರೀದಿ ಮಾಡುವುದು ಬಹಳ ಸುಲಭ ಎಂದು ಕೂಡ ಹೇಳಬಹುದು, ಬ್ಯಾಂಕುಗಳು ಕಾರ್ ಖರೀದಿ ಮಾಡುವವರಿಗೆ ದೊಡ್ಡ ಮೊತ್ತದ ಸಾಲವನ್ನು ಕೊಡುತ್ತಿದೆ, ನಿಮ್ಮ ಆದಾಯ ಮತ್ತು ಕಾರಿನ ಮೌಲ್ಯವನ್ನು ಆಧರಿಸಿ ಬ್ಯಾಂಕುಗಳು ಕಾರ್ ಖರೀದಿ ಮಾಡುವವರಿಗೆ ಸಾಲಗಳನ್ನು ನೀಡುತ್ತದೆ.

WhatsApp Group Join Now
Telegram Group Join Now

ಬ್ಯಾಂಕುಗಳು ಯಾವುದೇ ಲೋನ್ (Bank Loan) ನೀಡುವ ಸಮಯದಲ್ಲಿ ಕೆಲವು ಶುಲ್ಕವನ್ನು ತಗೆದುಕೊಳ್ಳುತ್ತದೆ ಮತ್ತು ಆ ಶುಲ್ಕವನ್ನು ನಾವು ಕಟ್ಟುವುದು ಕಡ್ಡಾಯವಾಗಿದೆ. ಆದರೆ ಕೆಲವು ಬ್ಯಾಂಕುಗಳು ವಾಹನಗಳ ಮೇಲೆ ನೀಡುವ ಸಮಯದ ಮೇಲೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಮತ್ತು ಬಡ್ಡಿ ಮೊತ್ತ ಕೂಡ ಕಡಿಮೆ ಆಗಿರುತ್ತದೆ. ಹಾಗಾದರೆ ಕಾರ್ ಅಥವಾ ಬೈಕ್ ಲೋನ್ ಮಾಡಲು ಯಾವ ಬ್ಯಾಂಕ್ ಬೆಸ್ಟ್ ಮತ್ತು ಯಾವ ಬ್ಯಾಂಕುಗಳು ಕಡಿಮೆ ಬಡ್ಡಿಗೆ ವಾಹನಗಳ ಮೇಲೆ ಸಾಲ ಸಿಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕಾರ್ ಮತ್ತು ಬೈಕ್ ಲೋನ್ ಮಾಡಲು ಈ ಬ್ಯಾಂಕುಗಳು ಬೆಸ್ಟ್

1. ಕಡಿಮೆ EMI ಬೇಕಾದರೆ ನಿಮಗೆ ಇಂಡಿಯನ್ ಓವರ್ಸೀಸ್ ಬ್ಯಾಕ್ ಉತ್ತಮ
ನೀವು 2500 ರೂಪಾಯಿಯ ಒಳಗೆ EMI ಪಡೆಯಲು ಬಯಸಿದರೆ ನಿಮಗೆ ಇಂಡಿಯನ್ ಓವರ್ಸೀಸ್ ಬ್ಯಾಕ್ ಉತ್ತಮ ಆಯ್ಕೆ ಎಂದು ಹೇಳಬಹುದು. ಇನ್ನು ಇಂಡಿಯನ್ ಓವರ್ಸೀಸ್ ಬ್ಯಾಕ್ ಬ್ಯಾಂಕಿನಲ್ಲಿ ನಿಮಗೆ 8.4% ಬಡ್ಡಿ ದರದಲ್ಲಿ ವಾಹನಗಳ ಮೇಲೆ ಸಾಲ ಸಿಗುತ್ತದೆ. ಇಂಡಿಯನ್ ಓವರ್ಸೀಸ್ ಬ್ಯಾಕ್ ಭಾರತದಲ್ಲಿ ಅತೀ ಕಡಿಮೆ ಬಡ್ಡಿ ದರದಲ್ಲಿ ವಾಹನಗಳ ಮೇಲೆ ಸಾಲ ನೀಡುವ ಬ್ಯಾಂಕ್ ಅನಿಸಿಕೊಂಡಿದೆ.

2. ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಕೆನರಾ ಬ್ಯಾಂಕ್
ವಾಹನಗಳ ಮೇಲೆ ಸಾಲ ಮಾಡಲು ನಿಮಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಕೆನರಾ ಬ್ಯಾಂಕ್ ಕೂಡ ಬೆಸ್ಟ್ ಎಂದು ಹೇಳಬಹುದು. ಈ ಬ್ಯಾಂಕುಗಳಲ್ಲಿ ಸಾಲಗಳ ಮೇಲೆ ಪಾರದರ್ಶಕತೆ ಇರುವುದನ್ನು ನಾವು ನೋಡಬಹುದು. ಇನ್ನು ಈ ಎರಡು ಬ್ಯಾಂಕಿನಲ್ಲಿ ವಾಹನಗಳ ಮೇಲೆ ಸಾಲದ ಮೇಲೆ ಬಡ್ಡಿದರ 8.45% ರಿಂದ ಆರಂಭ ಆಗುತ್ತದೆ. 2500 ರೂಪಾಯಿಗಿಂತ ಕಡಿಮೆ EMI ಬೇಕಾದರೆ ನಿಮಗೆ ಈ ಎರಡು ಬ್ಯಾಂಕುಗಳು ಕೂಡ ಉತ್ತಮ ಎಂದು ಹೇಳಬಹುದು.

ಇಲ್ಲಿದೆ ನೋಡಿ ಬ್ಯಾಂಕುಗಳ ವಾಹನ ಸಾಲದ ಬಡ್ಡಿದರ
* ಇಂಡಿಯನ್ ಓವರ್ಸೀಸ್ ಬ್ಯಾಂಕ್ – 8.4%
* ಕೆನರಾ ಬ್ಯಾಂಕ್ 8.45 ರಿಂದ 10.02%
* ಬ್ಯಾಂಕ್ ಆಫ್ ಮಹಾರಾಷ್ಟ್ರ 8.45 ರಿಂದ 12.75%
* ಯೂಕೊ ಬ್ಯಾಂಕ್ – 8.45 ರಿಂದ 10.75%
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – 8.45 ರಿಂದ 10.20%
* ಇಂಡಿಯನ್ ಬ್ಯಾಂಕ್ – 8.50 ರಿಂದ 9.75%
* ಪಂಜಾಬ್ ನ್ಯಾಷನಲ್ ಬ್ಯಾಂಕ್ – 8.50 ರಿಂದ 9.95%
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ – 8.60 ರಿಂದ 10.05%
* ಕರ್ನಾಟಕ ಬ್ಯಾಂಕ್ 8.88 ರಿಂದ 12.11%
* IDBI ಬ್ಯಾಂಕ್ – 8.80 ರಿಂದ 10.50%

Leave a Comment