Petrol Bunk Business Plan: ಬಿಸಿನೆಸ್ ಮಾಡಲು ಸಾಕಷ್ಟು ಆಯ್ಕೆಗಳು ಇದೆ ಎಂದು ಹೇಳಬಹುದು. ಹೌದು, ಬಿಸಿನೆಸ್ ಮಾಡಲು ಇರುವ ಆಯ್ಕೆಯಲ್ಲಿ ಪೆಟ್ರೋಲ್ ಬಂಕ್ ಬಿಸಿನೆಸ್ ಕೂಡ ಒಂದು ಎಂದು ಹೇಳಬಹುದು. ಈ ನಡುವೆ ಹೆಚ್ಚಿನ ಜನರು ಪೆಟ್ರೋಲ್ ಬಂಕ್ ವ್ಯವಹಾರ ಆರಂಭ ಮಾಡಲು ಬಯಸುತ್ತಿದ್ದಾರೆ. ಹಾಗಾದರೆ ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭ ಮಾಡಿದರೆ ಎಷ್ಟು ಲಾಭ ಗಳಿಸಬಹುದು ಮತ್ತು ಪೆಟ್ರೋಲ್ ಬಂಕ್ ಬಿಸಿನೆಸ್ (Petrol Bunk Business) ಆರಂಭ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಕೂಡ ಸಾಕಷ್ಟು ಜನರಿಗೆ ಮಾಹಿತಿ ತಿಳಿದಿಲ್ಲ. ಹಾಗಾದರೆ ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭಿಸುವುದು ಹೇಗೆ ಮತ್ತು ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭಿಸಲು ಎಷ್ಟು ಹಣ ಹೂಡಿಕೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭಿಸುವುದು ಹೇಗೆ ನೋಡಿ
ಅತೀ ಲಾಭ ಕೊಡುವ ವ್ಯವಹಾರ ಆರಂಭ ಮಾಡಬೇಕು ಅಂದರೆ ನಿಮಗೆ ಪೆಟ್ರೋಲ್ ಬಂಕ್ ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ನೀವು ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭ ಮಾಡಬೇಕು ಅಂದರೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಬೇಕು, ಆದರೆ ನೀವು ಹೂಡಿಕೆ ಮಾಡಿದ ಹಣವನ್ನು ಕೆಲವೇ ವರ್ಷದಲ್ಲಿ ವಾಪಾಸ್ ಪಡೆದುಕೊಳ್ಳಬಹುದು. ಹೌದು, ಪೆಟ್ರೋಲ್ ಬಂಕ್ ನಲ್ಲಿ ಹಣ ಕೂಡ ಹೂಡಿಕೆ ಮಾಡಿದರೆ ನೀವು ನಿರೀಕ್ಷೆ ಮಾಡಿದ ಹಣಕ್ಕಿಂತ ಹೆಚ್ಚು ಲಾಭ ಗಳಿಸಿಕೊಳ್ಳಬಹುದು.
ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭ ಮಾಡಿದರೆ ನೀವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಕಮಿಷನ್ ಪಡೆದುಕೊಳ್ಳಬಹುದು. ಪೆಟ್ರೋಲ್ ಬಂಕ್ ಬಿಸಿನೆಸ್ ನಲ್ಲಿ ಒಂದು ಮೀಟರ್ ಪೆಟ್ರೋಲ್ ಮೇಲೆ ಸುಮಾರು 3.7 ರೂಪಾಯಿ ಕಮಿಷನ್ ಪಡೆದುಕೊಳ್ಳಬಹುದು. ನಿಮ್ಮ ಲಾಭ ನೀವು ಎಷ್ಟು ಪೆಟ್ರೋಲ್ ಮಾರಾಟ ಮಾಡಿದ್ದೀರಿ ಅನ್ನುವುದರ ಮೇಲೆ ನಿರ್ಧಾರ ಆಗುತ್ತದೆ. ನೀವು ಒಂದು ದಿನಕ್ಕೆ 4000 ಲೀಟರ್ ಪೆಟ್ರೋಲ್ ಮಾರಾಟ ಮಾಡಿದರೆ ನೀವು ದಿನಕ್ಕೆ ಸುಮಾರು 14,000 ರೂ ತನಕ ಲಾಭ ಗಳಿಸಿಕೊಳ್ಳಬಹುದು. ಈ ರೀತಿಯಲ್ಲಿ ನೀವು ಪೆಟ್ರೋಲ್ ಮಾರಾಟ ಮಾಡಿದರೆ ಮಾಸಿಕವಾಗಿ 4.5 ಲಕ್ಷ ರೂ ಲಾಭ ಗಳಿಸಿಕೊಳ್ಳಬಹುದು. ಅದೇ ರೀತಿಯಲ್ಲಿ ಹೆಚ್ಚಿನ ಪೆಟ್ರೋಲ್ ಮಾರಾಟ ಮಾಡುವುದರ ಮೂಲಕ 6 ಲಕ್ಷ ರೂಪಾಯಿಯ ತನಕ ಲಾಭ ಗಳಿಸಿಕೊಳ್ಳಬಹುದು.
ನೀವು ಒಂದು ಪೆಟ್ರೋಲ್ ಬಂಕ್ ಆರಂಭ ಮಾಡಬೇಕು ಕನಿಷ್ಠ 50 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ನೀವು ನೀವು ಆರಂಭಿಸುವ ಪೆಟ್ರೋಲ್ ಬಂಕ್ ನಲ್ಲಿ ಸುರಕ್ಷತೆ ಮತ್ತು ಎಲ್ಲಾ ಮೂಲಭೂತ ಸೌಕರ್ಯ ಕೂಡ ಒದಗಿಸಬೇಕು. ತೈಲ ಕಂಪನಿಗಳು ಪೆಟ್ರೋಲ್ ಬಂಕ್ ಆರಂಭಿಸಲು ಅರ್ಜಿ ಕರೆದ ಸಮಯದಲ್ಲಿ ನೀವು ಅರ್ಜಿ ಸಲ್ಲಿಸುವುದರ ಮೂಲಕ ಫ್ರಾಂಚೈಸಿ ಪಡೆದುಕೊಳ್ಳಬಹುದು.
ಪೆಟ್ರೋಲ್ ಬಂಕ್ ನಲ್ಲಿ ಪ್ರತಿನಿತ್ಯ 5000 ಲೀಟರ್ ಪೆಟ್ರೋಲ್ ಮಾರಾಟ ಮಾಡುವುದರ ಮೂಲಕ ನೀವು ಹೂಡಿಕೆ ಮಾಡಿದ ಹಣವನ್ನು ಒಂದೇ ವರ್ಷದಲ್ಲಿ ಪಡೆದುಕೊಳ್ಳಬಹುದು. ಪೆಟ್ರೋಲ್ ಬಂಕ್ ಆರಂಭ ಮಾಡಬೇಕು ಅಂದರೆ ನೀವು ಸರಿಯಾದ ಜಾಗವನ್ನು ಮೊದಲು ಆಯ್ಕೆ ಮಾಡಬೇಕು. ಹೆಚ್ಚು ಹೆಚ್ಚು ವಾಹನಗಳು ಮತ್ತು ಜನರು ಇರುವ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ತೆರೆದರೆ ನೀವು ಹೆಚ್ಚಿನ ಲಾಭ ಗಳಿಸಿಕೊಳ್ಳಬಹುದು.