ಈ ನಡುವೆ ದೇಶದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳು ತೆರೆದುಕೊಳ್ಳುತ್ತಿದೆ. ಬಜೆಟ್ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹುಡುಕುವವರಿಗೆ ಈಗ ಇನ್ನೊಂದು ಸ್ಕೂಟರ್ ಲಾಂಚ್ ಆಗಿದೆ ಮತ್ತು ಈ ಸ್ಕೂಟರ್ ಬಡವರ ಬಂಧುವಾಗಿದೆ ಎಂದು ಹೇಳಬಹುದು. ಹಾಗಾದರೆ ಬಜೆಟ್ ಬೆಲೆಗೆ ಬಿಡುಗಡೆ ಆಗಿರುವ ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್ ಯಾವುದುಹಾಗು ಬೆಲೆ ಮತ್ತು ಮೈಲೇಜ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಾರುಕಟ್ಟೆಗೆ ಬಂತು Lectrix EV LXS ಎಲೆಕ್ಟ್ರಿಕ್ ಸ್ಕೂಟರ್
ಹೌದು, ಮಾರುಕಟ್ಟೆಗೆ Lectrix EV ಕಂಪನಿ ಹೊಸ Lectrix EV LXS ಲಾಂಚ್ ಮಾಡಿದೆ ಮತ್ತು ನಗರದ ಪ್ರದೇಶದಲ್ಲಿ ಮತ್ತು ಹಳ್ಳಿ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಮೈಲೇಜ್ ಇರುವ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುವವರಿಗೆ Lectrix EV LXS ಬೆಸ್ಟ್ ಎಂದು ಹೇಳಬಹುದು. ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು ಈ ಸ್ಕೂಟರ್ ಅಧಿಕ ಮೈಲೇಜ್ ಕೊಡುವ ಕೊಡುವ ಕಾರಣ ದೇಶದಲ್ಲಿ ದಾಖಲೆಯ ಬುಕಿಂಗ್ ಪಡೆದುಕೊಂಡಿದೆ. ಬಡವರಿಗಾಗಿ ಈ ಸ್ಕೂಟರ್ ಬಿಡುಗಡೆ ಮಾಡಲಾಗಿದೆ ಮತ್ತು ಈ ಸ್ಕೂಟರ್ ಮೇಲೆ ನಾವು ಸಬ್ಸಿಡಿ ಕೂಡ ಪಡೆದುಕೊಳ್ಳಬಹುದು.
Lectrix EV LXS ಬೆಲೆ ಮತ್ತು ಮೈಲೇಜ್ ಡೀಟೇಲ್ಸ್
ದೀರ್ಘಕಾಲಿಕ ಬ್ಯಾಟರಿ ಬಾಳಿಕೆ ಸ್ಕೂಟರ್ ಇದಾಗಿದ್ದು ಈ ಸ್ಕೂಟರ್ ಒಮ್ಮೆ ಚಾರ್ಜ್ ಮಾಡಲು 3 ಘಂಟೆ ಸಮಯ ತಗೆದುಯ್ಕೊಳ್ಳುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 90 Km ತನಕ ಯಾವುದೇ ಸಮಸ್ಯೆ ಇಲ್ಲದೆ ಈ ಸ್ಕೂಟರ್ ನಲ್ಲಿ ಪ್ರಯಾಣ ಮಾಡಬಹುದು. ಪ್ರತಿನಿತ್ಯ ಬಹಳ ದೂರ ಪ್ರಯಾಣ ಮಾಡುವವರು ಪೆಟ್ರೋಲ್ ಖರ್ಚು ಉಳಿಸಬೇಕು ಅಂದರೆ ನಿಮಗೆ ಈ ಸ್ಕೂಟರ್ ಬಹಳ ಸಹಕಾರಿ ಎಂದು ಹೇಳಬಹುದು. ಇನ್ನು ಬೆಲೆಯಲ್ಲಿ ಕೂಡ ಈ ಸ್ಕೂಟರ್ ಜನರ ಮೆಚ್ಚುಗೆಗೆ ಕಾರಣವಾಗಿದೆ.
Lectrix EV LXS ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 91 ಸಾವಿರ ರೂಪಾಯಿ ಆಗಿದೆ ಮತ್ತು ಈ ಸ್ಕೂಟರ್ ಮೇಲೆ ಕೊಂಚ ಸಬ್ಸಿಡಿ ಕೂಡ ಪಡೆದುಕೊಳ್ಳಬಹುದು. Lectrix EV LXS ಸ್ಕೂಟರ್ ನಲ್ಲಿ ನಾವು ಹಿಂದಿನ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಮತ್ತು ಮುಂದಿನ ಚಕ್ರದಲ್ಲಿ ಡ್ರಮ್ ಬ್ರೇಕ್ ಕಾಣಬಹುದು. ಡಿಜಿಟಲ್ ಡಿಸ್ಪ್ಲೇ, LED ಹೆಡ್ ಲೈಟ್ ಮತ್ತು ನೀವು ಹಲವು ಬಣ್ಣಗಳ ಆಯ್ಕೆಯಲ್ಲಿ ಸ್ಕೂಟರ್ ಅನ್ನು ಖರೀದಿ ಮಾಡಬಹುದು.