The Maruti Suzuki Grand Vitara: ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಕಾರು ಮಾರುಕಟ್ಟೆ ಅತ್ಯಂತ ದೊಡ್ಡದು ಹಾಗು ಮಾಧ್ಯಮವರ್ಗದ ಜನಗಳಿಗೆ ಅತ್ಯಂತ ಹೆಚ್ಚು ಕಾರುಗಳು ಭಾರತದಲ್ಲೇ ಸೇಲ್ ಆಗುತ್ತವೆ. ಇನ್ನೂ ಭಾರತದ ವಿಚಾರಕ್ಕೆ ಬಂದರೆ ಇಲ್ಲಿ ಮಿಡಲ್ ಕ್ಲಾಸ್ ಕುಟುಂಬಗಳು ಹೆಚ್ಚು ಹೀಗಾಗಿ ಮಾರುತಿ ಸುಜುಕಿಯಂತಹ ಕಂಪನಿಗಳು ಈ ವರ್ಗದ ಜನರಿಗೆ ಅನುಕೂಲವಾಗಲು ಈಗಾಗಲೇ ಅನೇಕ ಕಾರುಗಳನ್ನು ರಸ್ತೆಗಿಳಿಸಿವೆ. ಮಾರುತಿಯ ಸ್ವಿಫ್ಟ್, ವ್ಯಾಗನ್ ರ್ , ಸೇರಿದಂತೆ ಅನೇಕ ಜನಪ್ರಿಯ ಕಾರುಗಳು ಬಡವರ ಕೈಗೆಟುಕುವ ಬೆಲೆಗೆ ಸಿಗುತ್ತಿವೆ.
ಸದ್ಯ ಮಾರುತಿ ಸುಜುಕಿ ಹೆಚ್ಚು ಭದ್ರ ಮತ್ತು ಬಲಿಷ್ಠವಾದ ವಾಹನಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ಬ್ರೆಝ್ಜಾ ಮತ್ತು ಸೆಲೆರಿಯೋ ಕಾರುಗಳಲ್ಲಿ 6 ಎರ್ಬ್ಯಾಗ್ಗಳನ್ನು ಪರಿಚಯಿಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೊಸ ಡಿಝೈರ್ ಹಿಂದಿನ ತಲೆಮಾರಿಗಿಂತ ಹೆಚ್ಚು ಸುರಕ್ಷಿತವಾಗಿದ್ದು, Global NCAPನಲ್ಲಿ 5 ಸ್ಟಾರ್ ಗಳಿಸಿದೆ.
ಇದೀಗ ಬಡವರ SUV ಎಂದೇ ಕರೆಯಲಾಗುವ ಗ್ರ್ಯಾಂಡ್ ವಿಟಾರ ಕಾರಿನ ಮೇಲೆ ಸುಜುಕಿ ಭರ್ಜರಿ ಆಫರ್ ಘೋಷಣೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ. ಹೌದು ಸದ್ಯ ಹೊಸ ಗ್ರ್ಯಾಂಡ್ ವಿಟಾರಾ ಎರಡು ರೀತಿಯ ಡ್ರೈವ್ಟ್ರೈನ್ ಆಯ್ಕೆಗಳಲ್ಲಿ ಲಭ್ಯವಿದೆ ಮೊದಲನೆಯದು ಪೆಟ್ರೋಲ್ ಮತ್ತು ಹೈಬ್ರಿಡ್.
• ಇದರ ಪೆಟ್ರೋಲ್ ವೆರಿಯಂಟ್ಲ್ಲಿ 1.5 ಲೀಟರ್ 4 ಸಿಲಿಂಡರ್ ಎಂಜಿನ್ ಇದೆ, ಇದು 102 bhp ಶಕ್ತಿ ಮತ್ತು 137 Nm ಟಾರ್ಕ್ ಉತ್ಪಾದಿಸುತ್ತದೆ.
• ಎರಡನೇ ಎಂಜಿನ್ 2WD ಆಯ್ಕೆಗಳಲ್ಲಿ ಲಭ್ಯವಿದ್ದು, 5-ಸ್ಪೀಡ್ ಮ್ಯಾನುಯಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಹೊಂದಿದೆ.
• ಇತ್ತೀಚಿನ ಅಪ್ಡೇಟ್ ನಂತರ, 6-ಸ್ಪೀಡ್ ಟಾರ್ಕ್ ಕನ್ವರ್ಟರ್ (TC) ಗಿಯರ್ ಬಾಕ್ಸ್ ಅನ್ನು ಕೇವಲ AWD ಮಾದರಿಗಾಗಿ ನೀಡಲಾಗುತ್ತಿದೆ.
• ಹೈಬ್ರಿಡ್ ವೆರಿಯಂಟ್ ಕೂಡ 1.5 ಲೀಟರ್ ಪೆಟ್ರೋಲ್ ಎಂಜಿನ್ಅನ್ನು ಹೊಂದಿದ್ದು, ಇದು 116 bhp ಶಕ್ತಿ ಮತ್ತು 122 Nm ಟಾರ್ಕ್ ನೀಡುತ್ತದೆ.
• ಇದು ಇ-ಸಿವಿಟಿ (e-CVT) ಟ್ರಾನ್ಸ್ಮಿಷನ್ ಹೊಂದಿದ್ದು, ಫ್ರಂಟ್-ವೀಲ್ ಡ್ರೈವ್ (FWD) ಹೊಂದಿದೆ
• ಇದಲ್ಲದೆ, ಗ್ರ್ಯಾಂಡ್ ವಿಟಾರಾದಲ್ಲಿ CNG ಮಾದರಿಯೂ ಇದೆ, ಅದರಲ್ಲಿ ಕೂಡ ಇದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆಯಾಗಿದೆ.
• ಇದು 87 bhp ಶಕ್ತಿ ಮತ್ತು 121.5 Nm ಟಾರ್ಕ್ ಉತ್ಪತ್ತಿ ಮಾಡುತ್ತದೆ ಹಾಗೂ ಕೇವಲ 5-ಸ್ಪೀಡ್ ಮ್ಯಾನುಯಲ್ ಗಿಯರ್ ಬಾಕ್ಸ್ಗೂ ಮಾತ್ರ ಲಭ್ಯವಿದೆ.
ಒಟ್ಟಿನಲ್ಲಿ, ಗ್ರ್ಯಾಂಡ್ ವಿಟಾರಾ ಎಲ್ಲ ರೀತಿಯ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಹಲವು ಡ್ರೈವ್ಟ್ರೈನ್ ಆಯ್ಕೆಗಳನ್ನು ಒದಗಿಸುತ್ತದೆ.
ಹೊಸ ಬೆಲೆ ಏನು? 1.81 ಲಕ್ಷ ಕಡಿಮೆ ಹೇಗೆ ?
ಹೊಸ ಅಪ್ಡೇಟ್ ಬಳಿಕ ಮಾರುತಿ ಗ್ರ್ಯಾಂಡ್ ವಿಟಾರಾದ ಬೆಲೆ (ಮುಂಬೈನಲ್ಲಿ ಆನ್-ರೋಡ್) ರೂ. 13.42 ಲಕ್ಷದಿಂದ ಆರಂಭವಾಗಿ ರೂ. 23.80 ಲಕ್ಷವರೆಗೆ ಇದೆ. ಇದರ ಹೊಸ ಡೆಲ್ಟಾ+ ವೇರಿಯಂಟ್, ಇದು ಅತ್ಯಂತ ಕಡಿಮೆ ಬೆಲೆಯ ಸ್ಟ್ರಾಂಗ್-ಹೈಬ್ರಿಡ್ ಮಾದರಿಯಾಗಿದ್ದು, ಇದರ ಬೆಲೆ ರೂ. 19.97 ಲಕ್ಷ (ಆನ್-ರೋಡ್, ಮುಂಬೈ). ಇದರ ಅರ್ಥ, ಹೈಬ್ರಿಡ್ ವೇರಿಯಂಟ್ ಈಗ ರೂ. 1.81 ಲಕ್ಷ ಕಡಿಮೆ ದರದಲ್ಲಿ ಲಭ್ಯವಾಗಿದೆ.