ATM Money Withdrwal Limits: ದೇಶದ ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆ ಆಗಿರುವುದನ್ನು ನಾವು ಗಮನಿಸಿರಬಹುದು. ಹೌದು, ದೇಶದಲ್ಲಿ ಡಿಜಿಟಲ್ ಕ್ಷೇತ್ರ ಎಷ್ಟೇ ಮುಂದುವರೆದರೂ ಕೂಡ ATM ವಹಿವಾಟು ಕಡಿಮೆ ಆಗಿಲ್ಲ ಎಂದು ಹೇಳಬಹುದು. ಇದರ ನಡುವೆ RBI ATM ಮೂಲಕ ಹಣ ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಕೆಲವು ನಿಯಮ ಜಾರಿಗೆ ತಂದಿದ್ದು ಆ ನಿಯಮಗಳ ಅಡಿಯಲ್ಲಿ ಹಣವನ್ನು ಹಿಂಪಡೆಯಬೇಕು. ಇನ್ನು ಸಾಕಷ್ಟು ಜನರಿಗೆ ATM ಮೂಲಕ ಎಷ್ಟು ಹಣವನ್ನು ಉಚಿತವಾಗಿ ಹಿಂಪಡೆಯಬಹುದು ಅನ್ನುವುದರ ಬಗ್ಗೆ ಮಾಹಿತಿ ಇಲ್ಲ. ಹಾಗಾದರೆ ATM ಮೂಲಕ ಉಚಿತವಾಗಿ ಎಷ್ಟು ಬಾರಿ ಹಣವನ್ನು ಹಿಂಪಡೆಯಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
SBI ATM ಮೂಲಕ ಎಷ್ಟು ಬಾರಿ ಹಣ ಹಿಂಪಡೆಯಬಹುದು
ನೀವು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ ನೀವು ಮಿತಿಗಿಂತ ಅಧಿಕ ಸಮಯ ATM ಮೂಲಕ ಹಣವನ್ನು ಹಿಂಪಡೆದರೆ ಕಡ್ಡಾಯವಾಗಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ನೀವು ATM ಮೂಲಕ ಹಣ ಹಿಂಪಡೆಯುವುದು ಮಾತ್ರವಲ್ಲದೆ ಬ್ಯಾಲೆನ್ಸ್ ಚೆಕ್ ಮಾಡಿದರೂ ಕೂಡ ಅದು ನೀವು ATM ಬಳಸಿದಂತೆ ಆಗುತ್ತದೆ. ನೀವು SBI ನೀಡಿರುವ ಮಾಹಿತಿಯ ಪ್ರಕಾರ ನೀವು SBI ಬ್ಯಾಂಕಿನ ATM ಮೂಲಕ ತಿಂಗಳಿಗೆ 5 ಬಾರಿ ಉಚಿತವಾಗಿ ATM ಬಳಕೆ ಮಾಡಬಹುದು ಮತ್ತು ಇತರೆ ಬ್ಯಾಂಕಿನ ATM ಮೂಲಕ ತಿಂಗಳಿಗೆ 3 ಬಾರಿ ಉಚಿತ ವಹಿವಾಟು ಮಾಡಬಹುದು.
ಮಿತಿಗಿಂತ ಅಧಿಕ ಬಾರಿ ಬಳಸಿದರೆ ಇಷ್ಟು ಶುಲ್ಕ ಕಡ್ಡಾಯ
ನೀವು ಉಚಿತ ಮಿತಿಗಿಂತ ಅಧಿಕ ಬಾರಿ ATM ಬಳಸಿದರೆ ATM ಶೂಲವಾಗಿ 15 ರೂಪಾಯಿ ಮತ್ತು GST ಸೇರಿ ಒಟ್ಟಾಗಿ 23 ರೂಪಾಯಿ ಪಾವತಿ ಮಾಡಬೇಕು. ಇನ್ನು ನೀವು SBI ATM ನಲ್ಲಿ ಬ್ಯಾಲೆನ್ಸ್ ಚೆಕ್ ಅಥವಾ ಸ್ಟೇಟ್ಮೆಂಟ್ ಚೆಕ್ ಮಾಡಿದಂತೆ ಯಾವುದೇ ಶುಲ್ಕ ಕಟ್ಟುವ ಅಗತ್ಯ ಇಲ್ಲ, ಆದರೆ ಮಿತಿಗಿಂತ ಅಧಿಕ ಬಾರಿ ಬಳಕೆ ಮಾಡಿದರೆ ನೀವು ಪ್ರತಿ ವಹಿವಾಟಿಗೆ 10 ರೂಪಾಯಿ ಶುಲ್ಕ ಪಾವತಿ ಮಾಡಬೇಕು. RBI ನಿಯಮದ ಪ್ರಕಾರ SBI ಮಾತ್ರವಲ್ಲದೆ ಬೇರೆಬೇರೆ ಬ್ಯಾಂಕಿಗೂ ಕೂಡ ಇದೆ ನಿಮಯ ಅನ್ವಯ ಆಗಲಿದೆ. ತಿಂಗಳಿಗೆ 8 ವಹಿವಾಟುಗಳನ್ನು ಉಚಿತವಾಗಿ ಮಾಡಬಹುದು, ಆದರೆ ಅದಕ್ಕಿಂತ ಹೆಚ್ಚು ಬಾರಿ ಬಳಕೆ ಮಾಡಿದರೆ ಕಡ್ಡಾಯವಾಗಿ 23 ರೂಪಾಯಿ ಶುಲ್ಕ ಪಾವತಿ ಮಾಡಬೇಕು.
ಎರಡು ರೂಪಾಯಿ ಶುಲ್ಕ ಹೆಚ್ಚಳ
ಕಳೆದ ವರ್ಷ ATM ವಹಿವಾಟಿಗೆ 21 ರೂಪಾಯಿ ಶುಲ್ಕ ನಿಗದಿ ಮಾಡಲಾಗಿತ್ತು, ಆದರೆ ಪ್ರಸ್ತುತ ವರ್ಷದಲ್ಲಿ ATM ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. RBI ಆದೇಶದ ಪ್ರಕಾರ ATM ಶುಲ್ಕವನ್ನು ಮತ್ತೆ ಎರಡು ರೂಪಾಯಿ ಏರಿಕೆ ಮಾಡಲಾದ ಕಾರಣ ಇನ್ನುಮುಂದೆ ಅಗತ್ಯಕ್ಕಿಂತ ಹೆಚ್ಚು ಬಾರಿ ATM ಬಳಸಿದರೆ ಎರಡು ರೂಪಾಯಿ ಅಧಿಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ದೇಶದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಇನ್ನಷ್ಟು ಮುಂದುವರೆಯಬೇಕು ಮತ್ತು ಜನರು ಹೆಚ್ಚು ಹೆಚ್ಚು ಡಿಜಿಟಲ್ ಪೇಮೆಂಟ್ ಸಿಸ್ಟಮ್ (Digital Payment System) ಬಳಸಬೇಕು ಅನ್ನುವ ಉದ್ದೇಶದಿಂದ RBI ATM ಶುಲ್ಕವನ್ನು ಹೆಚ್ಚಳ ಮಾಡಿದೆ.