Income Tax Rules On Bank Saving Accounts: ಭಾರತೀಯ ತೆರಿಗೆ ಇಲಾಖೆ (Income Tax Department India) ಈಗಾಗಲೇ ತೆರಿಗೆ ನಿಯಮದಲ್ಲಿ ಈಗಾಗಲೇ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೌದು, ಹೊಸ ವರ್ಷದ ಆರಂಭದಲ್ಲಿ ಭಾರತೀಯ ತೆರಿಗೆ ಇಲಾಖೆ ಅನೇಕ ಹೊಸ ನಿಯಮಗಳನ್ನು ಜಾರಿಗೆ ತರುವುದರ ಮೂಲಕ ತೆರಿಗೆ ನಿಯಮಗಳನ್ನು ಕಠಿಣ ಮಾಡಿದೆ ಎಂದು ಹೇಳಬಹುದು. ಇದರ ನಡುವೆ ಬ್ಯಾಂಕ್ ಖಾತೆಗಳಲ್ಲಿ ಇಡುವ ಹಣಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ತೆರಿಗೆ ನಿಯಮವನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬೇಕು, ಎಷ್ಟು ಹಣ ಇಟ್ಟರೆ ಮನೆಗೆ ತೆರಿಗೆ ನೋಟೀಸ್ (Income Tax Notice) ಬರಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವೀಗ ತಿಳಿಯೋಣ.
ಬ್ಯಾಂಕ್ ಖಾತೆಗೂ ಕೂಡ ಇದೆ ತೆರಿಗೆ ನಿಯಮ
ಹೌದು, ಬ್ಯಾಂಕ್ ಖಾತೆಯಲ್ಲಿ ಹಣ ಠೇವಣಿ ಮಾಡಿ ಇಡುವುದಕ್ಕೆ ಸಂಬಂಧಿಸಿದಂತೆ ಕೂಡ ಭಾರತದಲ್ಲಿ ಅನೇಕ ಹೊಸ ನಿಯಮವನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ಅದೇ ರೀತಿಯಲ್ಲಿ ಉಳಿತಾಯ ಖಾತೆಯಲ್ಲಿ (Saving Accounts) ಒಂದೇ ಬಾರಿಗೆ ಮಿತಿಗಿಂತ ಹೆಚ್ಚಿನ ಹಣವನ್ನು ಜಮಾ ಮಾಡಿದರೆ ಆತ ಕಡ್ಡಾಯವಾಗಿ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಬಹುದು. ಉಳಿತಾಯ ಖಾತೆಯಲ್ಲಿ ನಿಗದಿತ ಮಿತಿಗಿಂತ ಅಧಿಕ ಹಣವನ್ನು ಜಮಾ ಮಾಡುವಂತೆ ಇಲ್ಲ ಮತ್ತು ಜಮಾ ಮಾಡಿದರೆ ದಂಡಯವಾಗಿ ತೆರಿಗೆ ಪಾವತಿ ಮಾಡಬೇಕು.
ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ
ಹೌದು, ಭಾರತೀಯ ತೆರಿಗೆ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಿಂದ 10 ಲಕ್ಷಕ್ಕಿಂತ ಅಧಿಕ ಹಣವನ್ನು ತನ್ನ ಖಾತೆಯಿಂದ ಹಿಂಪಡೆದರೆ ಅಥವಾ ಖಾತೆಗೆ ಜಮಾ ಮಾಡಿದರೆ ಆತನಿಗೆ ತೆರಿಗೆ ಇಲಾಖೆಯಿಂದ ನೋಟೀಸ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೀತಿಯಲ್ಲಿ ಒಬ್ಬ ವ್ಯಕ್ತಿ ತನ್ನ ಉಳಿತಾಯ ಖಾತೆಯಿಂದ ಒಂದೇ ದಿನಕ್ಕೆ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಪದೇಪದೇ ಹಿಂಪಡೆದರೆ ಆತ ಕೂಡ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ನೀವು ಒಂದೇ ಬಾರಿಗೆ ನಿಮ್ಮ ಉಳಿತಾಯ ಖಾತೆಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಜಮಾ ಮಾಡಿದರೆ ನಿಮ್ಮ ದಾಖಲೆಯನ್ನು ಬ್ಯಾಂಕ್ ತೆರಿಗೆ ಇಲಾಖೆಗೆ ಸಲ್ಲಿಸುತ್ತದೆ. ತೆರಿಗೆ ನಿಯಮದ ಪ್ರಕಾರ ನೀವು ಒಂದೇ ಬಾರಿಗೆ ಬ್ಯಾಂಕ್ ಖಾತೆಗೆ 50 ಸಾವಿರಕ್ಕಿಂತ ಅಧಿಕ ಅಧಿಕ ಹಣವನ್ನು ಜಮಾ ಮಾಡಿದರೆ ಪಾನ್ ಕಾರ್ಡ್ ನೀಡಬೇಕು ಅಥವಾ ಪಾನ್ ಕಾರ್ಡ್ ಇಲ್ಲದಿದ್ದರೆ ನೀವು 60/61 ಅನ್ನು ಸಲ್ಲಿಸಬೇಕಾಗುತ್ತದೆ.
ನಿಮ್ಮ ಹಣದ ಮೂಲವನ್ನು ತೆರಿಗೆ ಇಲಾಖೆಗೆ ನೀಡಬೇಕು
ನೀವು ಒಂದೇ ಬಾರಿಗೆ ಮಿತಿಗಿಂತ ಅಧಿಕ ಹಣ ಜಮಾ ಮಾಡಿ ನಿಮ್ಮ ಮನೆಗೆ ತೆರಿಗೆ ನೋಟೀಸ್ ಬಂದರೆ ನೀವು ತೆರಿಗೆ ಇಲಾಖೆಗೆ ಆದಾಯದ ಮೂಲವನ್ನು ತೋರಿಸುವುದು ಅತೀ ಕಡ್ಡಾಯವಾಗಿದೆ. ಒಂದುವೇಳೆ ನೀವು ತೆರಿಗೆ ಮೂಲವನ್ನು ತೋರಿಸದೆ ಇದ್ದರೆ ಕಡ್ಡಯಾಗಿ ತೆರಿಗೆ ಪಾವತಿ ಮಾಡಬೇಕು. ನೀವು ಜಮಾ ಮಾಡಿದ ಹಣದ ಮೂಲವನ್ನು ಸರ್ಕಾರಕ್ಕೆ ನೀಡದೆ ಇದ್ದರೆ ನೀವು ಕಡ್ಡಾಯವಾಗಿ ತೆರಿಗೆ ಇಲಾಖೆಯಿಂದ ದೊಡ್ಡ ಮೊತ್ತದ ದಂಡಕ್ಕೆ ಒಳಗಾಗಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆ ಈಗ ಹಣಕಾಸು ಕ್ಷೇತ್ರದಲ್ಲಿ ಅನೇಕ ಹೊಸ ಬದಲಾವಣೆಯನ್ನು ಜಾರಿಗೆ ತರುವುದರ ಮೂಲಕ ವಂಚನೆಯನ್ನು ತಡೆಗಟ್ಟುವ ಕೆಲಸ ಮಾಡುತ್ತಿದೆ. ಸದ್ಯ ಭಾರತೀಯ ತೆರಿಗೆ ಇಲಾಖೆ ಹಣಕಾಸು ನೀತಿಯನ್ನು ಕಠಿಣ ಮಾಡಿದ್ದು ನೀವು ತೆರಿಗೆ ಇಲಾಖೆಯಿಂದ ನೋಟೀಸ್ ಪಡೆದುಕೊಂಡರೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ.