Seniro Citizen Saving Scheme Investment Plan: ಹೂಡಿಕೆ ಮಾಡಲು ಬಹಳ ಉತ್ತಮವಾದ ವೇದಿಕೆ ಅನಿಸಿಕೊಂಡಿರುವ ಪೋಸ್ಟ್ ಆಫೀಸ್ (Post Office) ಈಗಾಗಲೇ ಜನರಿಗಾಗಿ ಹಲವು ಯೋಜನೆಯನ್ನು ಪರಿಚಯ ಮಾಡಿದೆ. ಪೋಸ್ಟ್ ಆಫೀಸ್ ಹೂಡಿಕೆ ಮಾಡುವ ಜನರಿಗಾಗಿ ಈಗಾಗಲೇ ಹಲವು ಯೋಜನೆಯನ್ನು ಪರಿಚಯ ಮಾಡಿದೆ. ಈ ನಡುವೆ ಪೋಸ್ಟ್ ಆಫೀಸ್ ತಿಂಗಳ ಆದಾಯ ಗಳಿಸಲು ಕೂಡ ಯೋಜಾನೆಯನ್ನು ಬಿಡುಗಡೆ ಮಾಡಲಾಗಿದೆ. ನಾವು ಹೇಳುವ ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಪ್ರತಿ ತಿಂಗಳು ಆದಾಯ ಗಳಿಸಿಕೊಳ್ಳಬಹುದು. ವಿಶೇಷವಾಗಿ ದೇಶದ ಹಿರಿಯ ನಾಗರಿಕರು ಈ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು. ಹಿರಿಯ ನಾಗರೀಕರಿಗಾಗಿ ಪೋಸ್ಟ್ ಆಫೀಸ್ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಪೋಸ್ಟ್ ಆಫೀಸ್ ನ ಹಿರಿಯ ನಾಗರೀಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 20,500 ರೂಪಾಯಿ ಮಾಸಿಕ ಆದಾಯ ಗಳಿಸಿಕೊಳ್ಳಬಹುದು.
ಹಿರಿಯ ನಾಗರೀಕ ಉಳಿತಾಯ ಯೋಜನೆ
ಹೌದು, ಪೋಸ್ಟ್ ಆಫೀಸ್ ಈಗ ಹಿರಿಯ ನಾಗರೀಕರಿಗಾಗಿ ವಿಶೇಷವಾದ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ. ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿ ಇರುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಅಡಿಯಲ್ಲಿ ಐದು ವರ್ಷದ ಕಾಲ ಪ್ರತಿ ತಿಂಗಳು 20,500 ರೂಪಾಯಿ ಪಿಂಚಣಿ ಪಡೆದುಕೊಳ್ಳಬಹುದು. ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡುವುದರ ಮೂಲಕ ದೇಶದ ಹಿರಿಯ ನಾಗರಿಕರು ಪ್ರತಿ ತಿಂಗಳು 20,500 ರೂಪಾಯಿ ಪಿಂಚಣಿ ಪಡೆದುಕೊಳ್ಳಬಹುದು.
ಹಿರಿಯ ನಾಗರಿಕರಿಗೆ ಸಿಗಲಿದೆ ಪ್ರತಿ ತಿಂಗಳು 20500 ರೂಪಾಯಿ
ನಿಮ್ಮ ವೃದ್ದಾಪ್ಯದಲ್ಲಿ ನಿಮಗೆ ಉತ್ತಮವಾದ ಆದಾಯ ಬೇಕು ಮತ್ತು ನಿಮ್ಮ ಹಣಕ್ಕೆ ಸುರಕ್ಷತೆ ಬೇಕು ಅಂದರೆ ನೀವು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಹೇಳಬಹುದು. ಈ ಯೋಜನೆಯಲ್ಲಿ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಉತ್ತಮ ಆದಾಯ ಗಳಿಸಿಕೊಳ್ಳಬಹುದು. ಹಾಗಾದರೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಪ್ರತಿ ತಿಂಗಳು 20500 ರೂಪಾಯಿ ಪಿಂಚಣಿ ಪಡೆಯಬೇಕಾದರೆ ಎಷ್ಟು ಹಣ ಹೂಡಿಕೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
30 ಲಕ್ಷ ರೂ ಹೂಡಿಕೆ ಮಾಡಿದರೆ ಸಿಗಲಿದೆ 20500 ರೂಪಾಯಿ
ಪೋಸ್ಟ್ ಆಫೀಸ್ ನ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಪ್ರತಿ ತಿಂಗಳು 20,500 ರೂಪಾಯಿ ಪಿಂಚಣಿ ಪಡೆದುಕೊಳ್ಳಬೇಕು ಅಂದರೆ ನೀವು ಪೋಸ್ಟ್ ಆಫೀಸ್ ನ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಸುಮಾರು 30 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಸರ್ಕಾರೀ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಈ ಯೋಜನೆಯಲ್ಲಿ ಅಧಿಕ ಬಡ್ಡಿ ನೀಡಲಾಗುತ್ತದೆ. ಹೌದು, ಪೋಸ್ಟ್ ಆಫೀಸ್ ನ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 8.2 ಬಡ್ಡಿ ನೀಡಲಾಗುತ್ತದೆ.
ಈ ಹಿಂದೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಹೂಡಿಕೆ ಮಿತಿ 15 ಲಕ್ಷ ರೂಪಾಯಿ ಆಗಿತ್ತು, ಆದರೆ ಈಗ ಅದನ್ನು 30 ಲಕ್ಷ ರೂಪಾಯಿ ಹೆಚ್ಚಳ ಮಾಡಲಾಗಿದೆ. ಇನ್ನು ಹೂಡಿಕೆಯನ್ನು ನೀವು ಏಕಕಾಲದಲ್ಲಿ ಮಾಡಬಹುದು ಅಥವಾ ಪ್ರತಿ ತಿಂಗಳಿಗೆ ಅಥವಾ ತ್ರೈಮಾಸಿಕವಾಗಿ ಕೂಡ ಮಾಡಬಹುದು. ಕೆಲಸದಿಂದ ನಿವೃತ್ತಿ ಪಡೆದುಕೊಂಡ 55 ರಿಂದ 60 ವರ್ಷದ ಒಳಗಿನ ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹಿರಿಯ ನಾಗರಿಕರು ಈ ಯೋಜನೆಯ ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಪಡೆದುಕೊಳ್ಳಬಹುದು. ಯೋಜನೆಯ ಅವಧಿ 5 ವರ್ಷಗಳು ಆಗಿತ್ತು ಅದನ್ನು ಮತ್ತೆ 3 ವರ್ಷಕ್ಕೆ ವಿಸ್ತರಿಸಬಹುದು.