Unknown Transactions Rule: ಭಾರತೀಯ ತೆರಿಗೆ ಇಲಾಖೆ (Income Tax India) ಕೆಲವು ಬಗೆಯ ವಹಿವಾಟಿನ ಮೇಲೆ ನಿಗಾ ಇಟ್ಟಿದ್ದು ನಾವು ಕೆಲವು ಬಗೆಯ ವಹಿವಾಟು ಮಾಡಿದರೆ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅದೇ ರೀತಿಯ್ಲಲಿ ನಾವು ದಿನನಿತ್ಯದ ವಹಿವಾಟಿನಲ್ಲಿ ಕೆಲವು ಬಗೆಯ ವಹಿವಾಟು ಮಾಡುವಂತಿಲ್ಲ ಮತ್ತು ಮಾಡಿದರೆ ತೆರಿಗೆ ಇಲಾಖೆಗೆ ಒಳಗೆ ಮಾಡಿದರೆ ಉತ್ತಮ, ಇಲ್ಲವಾದರೆ ನಿಮ್ಮ ಮನೆಗೆ ತೆರಿಗೆ ಇಲಾಖೆಯಿಂದ ನೋಟೀಸ್ ಕಡ್ಡಾಯವಾಗಿ ಬರುತ್ತದೆ ಎಂದು ಹೇಳಬಹುದು. ಭಾರತಲ್ಲಿ ಈ 7 ಬಗೆ ಹಣಕಾಸಿನ ವಹಿವಾಟು ಮಾಡಿದರೆ ತೆರಿಗೆ ಇಲಾಖೆಯಿಂದ ನೋಟೀಸ್ ಪಡೆದುಕೊಳ್ಳಬೇಕಾಗುತ್ತದೆ. ಹಾಗಾದರೆ ತೆರಿಗೆ ನಿಯಮದ ಪ್ರಕಾರ, ನಾವು ಯಾವ ರೀತಿಯ ಹಣಕಾಸಿನ ವಹಿವಾಟು ಮಾಡಬಾರದು ಮತ್ತು ಮಾಡಿದರೆ ದಂಡ ಕಟ್ಟಬೇಕಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ 7 ವಹಿವಾಟು ಮಾಡಿದರೆ ಬರಲಿದೆ ತೆರಿಗೆ ನೋಟೀಸ್
* ಆದಾಯ ತೆರಿಗೆ ನಿಯಮದ, ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದು ನೀವು ಪ್ರತಿ ಬಾರಿ 2 ಲಕ್ಷಕ್ಕಿಂತ ಅಧಿಕ ಹಣಕಾಸಿನ ವಹಿವಾಟು ಮಾಡುತ್ತಿದ್ದರೆ ನೀವು ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯ ನಿಯಮದ ಪ್ರಕಾರ ನೀವು ಪ್ರತಿ ಬಾರಿ ಕ್ರೆಡಿಟ್ ಕಾರ್ಡ್ ಮೂಲಕ 2 ಲಕ್ಷಕ್ಕಿಂತ ಅಧಿಕ ಹಣಕಾಸಿನ ವಹಿವಾಟು ಮಾಡುವಂತಿಲ್ಲ.
* ಇನ್ನು ಆದಾಯ ತೆರಿಗೆ ನಿಯಮದ, ನೀವು ಎರಡು ಲಕ್ಷಕ್ಕಿಂತ ಅಧಿಕ ಮೌಲ್ಯದ ವಿದೇಶಿ ಪ್ರಯಾಣ ಮಾಡಿದರೂ ಕೂಡ ನೀವು ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಷ್ಟು ಮೌಲ್ಯದ ವಿದೇಶಿ ಪ್ರಯಾಣ ಕೂಡ ತೆರಿಗೆ ಇಲಾಖೆಯ ಒಳಗೆ ಬರುತ್ತದೆ.
* ನಗದು ರೂಪದಲ್ಲಿ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವುದು ಕೂಡ ಕಾನೂನು ಬಾಹಿರ ಆಗಿದೆ. ನೀವು ಪದೇಪದೇ ಈ ರೀತಿಯಲ್ಲಿ ನಗದು ಬಿಲ್ ಪಾವತಿ ಮಾಡಿದರೆ ನೀವು ತೆರಿಗೆ ಇಲಾಖೆಯಿಂದ ನೋಟೀಸ್ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ.
* ಮ್ಯೂಚುಯಲ್ ಫಂಡ್ ಮತ್ತು ಷೇರುಗಳಲ್ಲಿ ಹೂಡಿಕೆ
ನೀವು ಹೆಚ್ಚು ಹೆಚ್ಚು ಹಣವನ್ನು ಪ್ರತಿ ತಿಂಗಳು ಅಥವಾ ಪ್ರತಿನಿತ್ಯ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ನೀವು ತೆರಿಗೆ ಇಲಾಖೆಯಿಂದ ನೋಟೀಸ್ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಚ್ಚರ. ಹೆಚ್ಚು ಹೆಚ್ಚು ಮ್ಯೂಚುಯಲ್ ಫಂಡ್ ವಹಿವಾಟು ಮತ್ತು ಷೇರು ಮಾರುಕಟ್ಟೆಯ ವಹಿವಾಟು ತೆರಿಗೆ ಇಲಾಖೆಯ ಒಳಗೆ ಬರುತ್ತದೆ.
* ಬ್ಯಾಂಕ್ ಖಾತೆಯಲ್ಲಿ ಹತ್ತು ಲಕ್ಷಕ್ಕಿಂತ ಅಧಿಕ ಹಣವನ್ನು ಜಮಾ ಮಾಡಿದರೆ ಕೂಡ ತೆರಿಗೆ ಇಲಾಖೆಯಿಂದ ನೋಟೀಸ್ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣಗಳಿಂದ ನಗದು ಠೇವಣಿ ಮಾಡುವ ಮುನ್ನ ಎಚ್ಚರ.
* 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ವಹಿವಾಟು ಮಾಡಿದರೆ ನೀವು ತೆರಿಗೆ ಇಲಾಖೆಯಿಂದ ನೋಟೀಸ್ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ.