8th Pay Update: ಈ ಸರ್ಕಾರೀ ನೌಕರರಿಗೆ ಸಿಗಲ್ಲ 8ನೇ ವೇತನ ಆಯೋಗದ ಸಂಬಳ, ಹೊಸ ನಿಯಮ ಜಾರಿ

8th Pay Commission Rules And Regulations: 8ನೇ ವೇತನ ಆಯೋಗ (8th Pay Commission) ಯಾವಾಗ ಜಾರಿಗೆ ಬರುತ್ತದೆ ಎಂದು ಸಾಕಷ್ಟು ಸರ್ಕಾರೀ ನೌಕರರು ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು. ಜೂನ್ ತಿಂಗಳಲ್ಲಿ ದೇಶದಲ್ಲಿ 8ನೇ ವೇತನ ಆಯೋಗ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಜಾರಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಕೂಡ ಜಾರಿಗೆ ತರಲು ಮುಂದಾಗಿದೆ. ಸದ್ಯ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಜಾರಿಗೆ ಬಗ್ಗೆ ಜೂನ್ ತಿಂಗಳಲ್ಲಿ ಅಂತಿಮ ನಿರ್ಧಾರ ತಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. 8ನೇ ವೇತನ ಆಯೋಗ ಮುಂದಿನ ವರ್ಷ, ಅಂದರೆ 2026 ರಲ್ಲಿ ದೇಶದಲ್ಲಿ ಜಾರಿಗೆ ಬರಲಿದೆ. ಇನ್ನು ಇದರ ನಡುವೆ ಸಾಕಷ್ಟು ನೌಕರರು 8ನೇ ವೇತನ ಆಯೋಗದ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಯಾವ ಯಾವ ಸರ್ಕಾರೀ ನೌಕರರು 8ನೇ ವೇತನ ಆಯೋಗದ ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಜೂನ್ ತಿಂಗಳಲ್ಲಿ ಜಾರಿಯಾಗಲಿದೆ 8ನೇ ವೇತನ ಆಯೋಗ
ಕೇಂದ್ರ ಸರ್ಕಾರ ದೇಶದಲ್ಲಿ 8ನೇ ವೇತನ ಆಯೋಗ ಜಾರಿಗೆ ಬಗ್ಗೆ ನಿರ್ಧಾರವನ್ನು ಜೂನ್ ತಿಂಗಳಲ್ಲಿ ತಗೆದುಕೊಳ್ಳಲಿದೆ ಮತ್ತು 8ನೇ ವೇತನ ಆಯೋಗ 2026 ರ ವರ್ಷದಲ್ಲಿ ದೇಶಾದ್ಯಂತ ಜಾರಿಗೆ ಬರಲಿದೆ. 8ನೇ ವೇತನ ಆಯೋಗ ಜಾರಿಯಾದ ನಂತರ ಕೇಂದ್ರ ಸರ್ಕಾರೀ ನೌಕರರ ಮೂಲವೇತನ 70 ಸಾವಿರಕ್ಕೆ ಏರಿಕೆ ಆಗುವುದು ಮಾತ್ರವಲ್ಲದೆ ಕೇಂದ್ರ ಸರ್ಕಾರೀ ನೌಕರರ ಪಿಂಚಣಿಯಲ್ಲಿ ಕೂಡ ದೊಡ್ಡ ಬದಲಾವಣೆ ಆಗಲಿದೆ. ಈ ನಡುವೆ ಕೆಲವು ಕೇಂದ್ರ ಸರ್ಕಾರೀ ನೌಕರರು ಕೇಂದ್ರದ 8ನೇ ವೇತನ ಆಯೋಗದ ಅಡಿಯಲ್ಲಿ ಪಿಂಚಣಿ ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ ಅನ್ನುವ ಸುದ್ದಿ ಹರಿದಾಡುತ್ತಿದೆ.

ಈ ಸರ್ಕಾರೀ ನೌಕರರಿಗೆ ಸಿಗಲ್ಲ 8ನೇ ವೇತನ
ಅದೇ ರೀತಿಯಲ್ಲಿ ಕೆಲವು ಸರ್ಕಾರೀ ನೌಕರರು 8ನೇ ವೇತನ ಆಯೋಗ ಜಾರಿಯಾದ ನಂತರ ಕೂಡ 8ನೇ ವೇತನ ಆಯೋಗದ ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಜನವರಿ 1 2026 ಕ್ಕಿಂತ ಮೊದಲು ನಿವೃತ್ತಿ ಪಡೆದುಕೊಂಡ ಕೇಂದ್ರ ಸರ್ಕಾರೀ ನೌಕರರು 8ನೇ ವೇತನ ಆಯೋಗದ ಅಡಿಯಲ್ಲಿ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ಇದರ ಬಗ್ಗೆ ಸ್ಪಷ್ಟನೆ ನೀಡದೆ ಇದ್ದರೂ ಕೂಡ ಸಾಕಷ್ಟು ಸರ್ಕಾರೀ ನೌಕರರಲ್ಲಿ ಕಳವಳ ಹೆಚ್ಚಾಗಿದೆ. 2025 ರ ಹೊಸ ಹಣಕಾಸು ಮಸೂದೆಯ ಪ್ರಕಾರ ಕೇಂದ್ರ ಸರ್ಕಾರ 8ನೇ ವೇತನ ಆಯೋಗದ ಅಡಿಯಲ್ಲಿ ಪಿಂಚಣಿ ಪಡೆಯುವವರನ್ನು ಎರಡು ಗುಂಪುಗಳಾಗಿ ವಿಂಗಡಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜನವರಿ 1 2026 ರ ಮೊದಲು ನಿವೃತ್ತಿ ಪಡೆಯುವ ಸರ್ಕಾರೀ ನೌಕರರು 8ನೇ ವೇತನ ಆಯೋಗದ ಪಿಂಚಣಿ ಲಾಭ ಪಡೆಯುತ್ತಾರಾ ಅಥವಾ ಇಲ್ಲವಾ ಅನ್ನುವ ಪ್ರಶ್ನೆಗೆ ಕೇಂದ್ರ ಸರ್ಕಾರವೇ ಉತ್ತರ ನೀಡಬೇಕಾಗಿದೆ.

Leave a Comment