Brahmanda Guruji About Narendra Modi: ನರೇಂದ್ರ ಮೋದಿ (Narendra Modi) ದೇಶದ ಅಗ್ರಗಣ್ಯ ಪ್ರಧಾನಿ ಎಂದು ಹೇಳಬಹುದು. ಸತತ ಎರಡನೆಯ ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿ ಅವರು ದೇಶದಲ್ಲಿ ಮಾತ್ರಲ್ಲದೆ ಬೇರೆ ಬೇರೆ ದೇಶದಲ್ಲಿ ಕೂಡ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಈ ನಡುವೆ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ ಮತ್ತು ಯಾವ ಸಮಯದಲ್ಲಿ ಯಾವ ರಾಜಕಾರಣಿ ಅಧಿಕಾರದಿಂದ ಕೆಳಕ್ಕೆ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ನಡುವೆ ಕರ್ನಾಟಕದಲ್ಲಿ ಜ್ಯೋತಿಷ್ಯ ನುಡಿಯುವುದರ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ಬ್ರಹ್ಮಾಂಡ ಗುರೂಜಿ ಅವರು ನರೇಂದ್ರ ಮೋದಿಯವರ ರಾಜಕೀಯ ಭವಿಷ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಬಗ್ಗೆ ಈಗ ಬ್ರಹ್ಮಾಂಡ ಗುರೂಜಿ (Brahmanda Guruji) ಭವಿಷ್ಯ ನುಡಿದಿದ್ದಾರೆ.
ಮೋದಿ ರಾಜೀನಾಮೆ ಬಗ್ಗೆ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ
ಕರ್ನಾಟಕದಲ್ಲಿ ಜ್ಯೋತಿಷ್ಯ ನುಡಿಯುವುದರ ಮೂಲಕ ಬಹಳ ಫೇಮಸ್ ಆದ ಮತ್ತು ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡಿದ್ದ ಬ್ರಹ್ಮಾಂಡ ಗುರೂಜಿ ಅವರು ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಕೊಡುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಧರ್ಮರಾಯಸ್ವಾಮಿ ರಥೋತ್ಸವ ನಡೆಯುತ್ತಿದ್ದು ಈ ಕಾರ್ಯಕ್ರಮಕ್ಕೆ ಬ್ರಹ್ಮಾಂಡ ಗುರೂಜಿ ಅವರು ಕೂಡ ಬಂದಿದ್ದಾರೆ. ಇನ್ನು ಧರ್ಮರಾಯಸ್ವಾಮಿ ದೇವಾಯಲಕ್ಕೆ ಬಂದಬಳಿಕ ಬ್ರಹ್ಮಾಂಡ ಗುರೂಜಿ ಅವರು ಮಾಧ್ಯಮದ ಮುಂದೆ ಮಾತನಾಡಿದ ಸಮಯದಲ್ಲಿ ನರೇಂದ್ರ ಮೋದಿಯವರ ರಾಜೀನಾಮೆ ಬಗ್ಗೆ ಕೂಡ ಮಾತನಾಡಿದ್ದಾರೆ.
ಚೈತ್ರ ಪೌರ್ಣಮಿಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ ಅವರು ಈ ವರ್ಷದಲ್ಲಿ ಅನೇಕ ರೋಗರುಜಿನಗಳು ಮನುಷ್ಯನನ್ನು ಕಡಲಿದ್ದಾರೆ ಎಂದು ಹೇಳಿದ್ದಾರೆ ಮತ್ತು ನರೇಂದ್ರ ಮೋದಿಯವರು ರಾಜೀನಾಮೆ ಕೊಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಒಂದೂವರೆ ವರ್ಷದಲ್ಲಿ ನರೇಂದ್ರ ಮೋದಿಯವರು ರಾಜೀನಾಮೆ ಕೊಡಲಿದ್ದು ಯೋಗಿ ಆದಿತ್ಯನಾಥ್ ಅವರು ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.
ವೈರಾಗ್ಯ ಬಂದಮೇಲೆ ರಾಜೀನಾಮೆ ಕೊಡುವುದು ಸಾಮಾನ್ಯ, ಸದ್ಯ ಒಬ್ಬ ಸನ್ಯಾಸಿ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಮತ್ತು ಕೆಲಸದಲ್ಲಿ ವೈರಾಗ್ಯ ಬದಮೇಲೆ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸಾಮಾನ್ಯವಾಗಿದೆ ಮತ್ತು ಅದೇ ರೀತಿಯಲ್ಲಿ ನರೇಂದ್ರ ಮೋದಿ ಕೂಡ ಮುಂದಿನ ಒಂದೂವರೆ ವರ್ಷದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ ಮತ್ತು ಯೋಗಿ ಆದಿತ್ಯನಾಥ್ ಅವರು ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ.
ಭಾರತ ಗೋರಕ್ಷಣಾ ದೇಶವಾಗಲಿದೆ ಮತ್ತು ಅದೂ ನರೇಂದ್ರ ಮೋದಿ ಮತ್ತು ಯೋಗು ಆದಿತ್ಯನಾಥ್ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರೆ ಬ್ರಹ್ಮಾಂಡ ಗುರೂಜಿ ಅವರು ಭಾರತ ಮುಂದಿನ ಪ್ರಧಾನಿ ಯೋಗಿ ಆದಿತ್ಯನಾಥ್ (Yogi Adityanath) ಆಗಲಿದ್ದಾರೆ ಮತ್ತು ನರೇಂದ್ರ ಮೋದಿ ಮುಂದಿನ ಒಂದು ವರ್ಷದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಅವರು ಭವಿಷ್ಯ ನುಡಿಯುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ.