This One Is For Orange Army Abhishek Sharma Letter: ನಿನ್ನೆ ರಾಜೀವ್ ಗಾಂಧಿ ಸ್ಟೇಡಿಯಂ (Rajiv Gandhi Stadium) ನಲ್ಲಿ ನಡೆದ ಪಂದ್ಯ ಹಲವು ದಾಖಲೆಗಳಿಗೆ ಕಾರಣವಾಗಿದೆ ಎಂದು ಹೇಳಬಹುದು. ದೇಶದ ಕ್ರಿಕೆಟ್ ಪ್ರಿಯರ ಬಾಯಲ್ಲಿ ಈಗ ಕೇಳಿಬರುತ್ತಿರುವುದು ಒಂದೇ ಒಂದು ಮಾತು ಅಂದರೆ IPL ಮಾತು ಎಂದು ಹೇಳಬಹುದು. ರಾತ್ರಿಯಾದರೆ ಸಾಕು ಜನರು ಐಪಿಎಲ್ ನಲ್ಲಿ ಬಹಳ ಬ್ಯುಸಿ ಆಗುತ್ತಾರೆ ಎಂದು ಹೇಳಬಹುದು. ಈ ಬಾರಿಯ ಐಪಿಎಲ್ ನಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿರುವುದನ್ನು ನಾವು ನೋಡಿದ್ದೇವೆ, ಅದೇ ರೀತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ನಿನ್ನೆ ಐಪಿಎಲ್ ನಲ್ಲಿ ದೊಡ್ಡ ದಾಖಲೆ ಮಾಡಿದೆ ಎಂದು ಹೇಳಬಹುದು. ದೊಡ್ಡ ಮೊತ್ತದ ರನ್ ಚೇಸ್ ಮಾಡುವುದರ ಮೂಲಕ ಐಪಿಎಲ್ ನಲ್ಲಿ ಇನ್ನೊಂದು ದಾಖಲೆ ಬರೆದಿದೆ ಸನ್ ರೈಸರ್ಸ್ ಹೈದರಾಬಾದ್. ಈ ನಡುವೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಪೋಟಕ ಆಟಗಾರ ಅನಿಸಿಕೊಂಡಿರುವ ಅಭಿಷೇಕ್ ಶರ್ಮಾ ಅವರು ಕಡಿಮೆ ಬಾಲ್ ನಲ್ಲಿ ಶತಕ ಹೊಡೆಯುವುದರ ಮೂಲಕ ವಿಶೇಷ ದಾಖಲೆ ಮಾಡಿದ್ದಾರೆ.
ಶತಕ ಸಿಡಿಸಿ ದಾಖಲೆ ಬರೆದ ಅಭಿಷೇಕ್ ಶರ್ಮಾ
ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಪೋಟಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಅವರು ಅತೀ ಕಡಿಮೆ ಬಾಲ್ ನಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕೇವಲ 55 ಎಸೆತದಲ್ಲಿ 14 ಬೌಂಡರಿ ಮತ್ತು 10 ಸಿಕ್ಸರ್ ಸಿಡಿಸುವುದರ ಮೂಲಕ ಅಭಿಷೇಕ್ ಶರ್ಮಾ ಒಂದು ವಿಶೇಷವಾದ ದಾಖಲೆ ಮಾಡಿದ್ದಾರೆ ಎಂದು ಹೇಳಬಹುದು. ಇನ್ನು ಶತಕ ಸಿಡಿಸಿದ ನಂತರ ಅಭಿಷೇಕ್ ಶರ್ಮಾ ಅವರು ತಮ್ಮ ಜೇಬಿನಿಂದ ಒಂದು ಚೀಟಿ ತಗೆದು ತೋರಿಸಿದ್ದಾರೆ ಮತ್ತು ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.
ಅಭಿಷೇಕ್ ಶರ್ಮಾ ತೋರಿಸಿದ ಚೀಟಿಯಲ್ಲಿ ಏನಿದೆ
ಕಡಿಮೆ ಎಸೆತದಲ್ಲಿ ದಾಖಲೆಯ ಶತಕ ಸಿಡಿಸಿದ ನಂತರ ಅಭಿಷೇಕ್ ಶರ್ಮಾ ಅವರು ತಮ್ಮ ಜೇಬಿನಿಂದ ಚೀಟಿಯನ್ನು ತಗೆದು ಅಭಿಮಾನಿಗಳಿಗೆ ತೋರಿಸಿದ್ದಾರೆ. ಇನ್ನು ಅಭಿಷೇಕ್ ಶರ್ಮಾ ಅವರು ತೋರಿಸಿದ ಚೀಟಿಯಲ್ಲಿ ಏನಿದೆ ಎಂದು ಸಾಕಷ್ಟು ಜನರು ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕೇಳುವುದು ಮಾತ್ರವಲ್ಲದೆ ಹುಡುಕಾಟ ಕೂಡ ಮಾಡುತ್ತಿದ್ದಾರೆ. ಹೌದು ಅಭಿಷೇಕ್ ಶರ್ಮಾ ಅವರು “This One Is For Orange” ಎಂದು ಬರೆದುಕೊಂಡಿದ್ದರು, ಅಷ್ಟೇ ಅಲ್ಲದೆ ಇದು ಸನ್ ರೈಸರ್ಸ್ ಹೈದರಾಬಾದ್ ಅಭಿಮಾನಿಗಳಿಗಾಗಿ ಎಂದು ಚೀಟಿಯಲ್ಲಿ ಬರೆದಿದ್ದರು. ನಿನ್ನೆ ಪಂಜಾಬ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ 247 ರನ್ ಗುರಿಯನ್ನು ಕೇವಲ 18.3 ಓವರ್ ನಲ್ಲಿ ಹೊಡೆಯುವುದರ ಮೂಲಕ ವಿಶೇಷ ಸಾಧನೆ ಮಾಡಿದೆ.
ಐಪಿಎಲ್ ನಲ್ಲಿ ಸತತ ಸೋಲು ಕಾಣುತ್ತಿರುವ ಸನ್ ರೈಸರ್ಸ್ ಹೈದರಾಬಾದ್
ಹೌದು, ಈ ಬಾರಿಯ ಐಪಿಎಲ್ ನಲ್ಲಿ ಬಲಿಷ್ಠ ತಂಡ ಅನಿಸಿಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಸತತ ಸೋಲು ಕಾಣುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕಳೆದ ಐಪಿಎಲ್ ನಲ್ಲಿ ದಾಖಲೆಯ ರನ್ ಹೊಡೆಯುವುದರ ಮೂಲಕ ಸತತ ಸಾಧನೆ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ನಿನ್ನೆ ದಾಖಲೆಯ ಮೊತ್ತದ ರನ್ ಚೇಸ್ ಮಾಡುವುದರ ಮೂಲಕ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ 2025 ರಲ್ಲಿ ಹೊಸ ದಾಖಲೆ ಸೃಷ್ಟಿಮಾಡಿದೆ.