Subsidy On Electric Scooter: ದೇಶದಲ್ಲಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಖರೀದಿ ಮಾಡುತ್ತಿರುವುದನ್ನು ನಾವು ನೋಡಬಹುದು. ಇನ್ನು ಹಲವು ಎಲೆಕ್ಟ್ರಿಕ್ ಸ್ಕೂಟರ್ ತಯಾಕರ ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಲಾಂಚ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದರ ನಡುವೆ ಈಗ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದು. ಹೌದು, ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ 36000 ರೂಪಾಯಿ ಸಬ್ಸಿಡಿ ಪಡೆದುಕೊಳ್ಳಬಹುದು. ಹಾಗಾದರೆ ಯಾವ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 36,000 ರೂಪಾಯಿ ಸಬ್ಸಿಡಿ ಸಿಗಲಿದೆ ಮತ್ತು ಸ್ಕೂಟರ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಸಿಗಲಿದೆ 36,000 ರೂಪಾಯಿ ಸಬ್ಸಿಡಿ
ದೆಹಲಿ ಸರ್ಕಾರ ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು 36000 ರೂಪಾಯಿ ಸಬ್ಸಿಡಿ ನೀಡಲು ಮುಂದಾಗಿದೆ. ಇನ್ನು ದೆಹಲಿ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಸುಮಾರು 10,000 ಕ್ಕೂ ಅಧಿಕ ಮಹಿಳೆಯರು ಸಬ್ಸಿಡಿ ಅಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲಿದ್ದಾರೆ. EV ನೀತಿ 2.0 ಅಡಿಯಲ್ಲಿ ಯಾವ ಮಹಿಳೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುತ್ತಾಳೋ ಅವರು ದೆಹಲಿ ಸರ್ಕಾರದಿಂದ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ 36,000 ರೂಪಾಯಿ ಸಬ್ಸಿಡಿ ಪಡೆದುಕೊಳ್ಳಲಿದ್ದಾರೆ.
ಸಹೋದರಿ ಅಥವಾ ಹೆಂಡತಿ ಹೆಸರಲ್ಲಿ ಸ್ಕೂಟರ್ ಖರೀದಿಸಬಹುದು
ಈ ಯೋಜನೆ ಕೆಲವೇ ಮಹಿಳೆಯರಿಗೆ ಮಾತ್ರ ಸೀಮಿತವಾದ ಕಾರಣ ಜನರು ಸಹೋದರಿ ಅಥವಾ ಹೆಂಡತಿಯ ಹೆಸರಿನಲ್ಲಿ ಈ ಸ್ಕೂಟರ್ ಖರೀದಿ ಮಾಡಬಹುದು. ಸರ್ಕಾರದ EV ನೀತಿ 2.0 ಅಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯ ಆಗಲಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ. ದೆಹಲಿಯಲ್ಲಿ ದಿನಗಳು ಉರುಳುತ್ತಿದ್ದಂತೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ, ಈ ಕಾರಣಗಳಿಂದ ದೆಹಲಿ ಸರ್ಕಾರ ರಸ್ತೆಗಳಲ್ಲಿ ಹೆಚ್ಚು ಹೆಚ್ಚಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಕಾರುಗಳು ಎಡಾಡಬೇಕು ಅನ್ನುವ ಉದ್ದೇಶದಿಂದ EV ನೀತಿ 2.0 (EV Policy 2.0) ಅಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳ ಮಾಡಲು ಈ ತೀರ್ಮಾನ ತಗೆದುಕೊಂಡಿದೆ.
ಇನ್ನು ಸ್ಕೂಟರ್ ಬ್ಯಾಟರಿ ಮತ್ತು ಸಾಮರ್ಥ್ಯವನ್ನು ಆಧರಿಸಿ ಸಬ್ಸಿಡಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಮಹಿಳೆಯರು ಗರಿಷ್ಟ 36,000 ರೂಪಾಯಿಯ ತನಕ ಸಬ್ಸಿಡಿ ಪಡೆದುಕೊಳ್ಳಬಹುದು. ಕರ್ನಾಟಕದಲ್ಲಿ ಕೂಡ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಕಾರುಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇನ್ನು ಈ ಯೋಜನೆ ಸದ್ಯ ದೆಹಲಿ ಸರ್ಕಾರ ಜಾರಿಗೆ ತಂದಿದ್ದು ನಮ್ಮ ಕರ್ನಾಟಕದಲ್ಲಿ ಕೂಡ ಜಾರಿಗೆ ಬರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಮಾಲಿನ್ಯ ಕಡಿಮೆ ಉದ್ದೇಶದಿಂದ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಕಾರುಗಳ ಮಾರಾಟ ಹೆಚ್ಚಳ ಮಾಡುವ ಗುರಿ ಇಟ್ಟುಕೊಂಡಿದೆ.