Indian Railways Jobs: SSLC ಮತ್ತು ITI ಪಾಸ್ ಆದವರಿಗೆ ಈಗ ಭಾರತೀಯ ರೈಲ್ವೆ (Indian Railways) ಬಂಪರ್ ಗುಡ್ ನ್ಯೂಸ್ ನೀಡಿದೆ. ಭಾರತೀಯ ರೈಲ್ವೆ ಮತ್ತೆ ಜಾಬ್ ಆಫರ್ ನೀಡಿದ್ದು SSLC ಮತ್ತು ITI ಪಾಸ್ ಆದವರಿಗೆ ಅರ್ಜಿ ಸಲ್ಲಿಸುವುದರ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. SSLC ಮತ್ತು ITI ಪಾಸ್ ಆದವರಿಗೆ ಅರ್ಜಿ ಸಲ್ಲಿಸುವುದರ ಮೂಲಕ ಕೇಂದ್ರ ಸರ್ಕಾರೀ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ. ಹಾಗಾದರೆ ಭಾರತೀಯ ರೈಲ್ವೆಯಲ್ಲಿ ಯಾವ ಉದ್ಯೋಗಗಕ್ಕೆ ಅರ್ಜಿ ಕರೆಯಲಾಗಿದೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೆಯಲ್ಲಿ ಉದ್ಯೋಗಗಕ್ಕೆ ಅರ್ಜಿ ಆಹ್ವಾನ
ಭಾರತೀಯ ರೈಲ್ವೆ ಈಗ SSLC ಮತ್ತು ITI ಮಾಡಿದವರಿಗೆ ಉದ್ಯೋಗದ ಅರ್ಜಿ ಕರೆದಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ರೈಲ್ವೆ ಇಲಾಖೆ ಬರೋಬ್ಬರಿ 9970 ಹುದ್ದೆಗಳಿಗೆ ಅರ್ಜಿ ಕರೆದಿದೆ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಸ್ಸಿಸ್ಟಂಟ್ ಲೋಕೋ ಪೈಲೆಟ್ ಹುದ್ದೆ ಇದಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. SSLC ಮತ್ತು ITI ಪಾಸ್ ಆದವರು ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಯಾವ ರೈಲ್ವೆ ಇಲಾಖೆಯಲ್ಲಿ ಎಷ್ಟು ಹುದ್ದೆ ಕರೆಯಲಾಗಿದೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಕೇಂದ್ರ ರೈಲ್ವೆ 356 ಹುದ್ದೆ
ಪೂರ್ವ ಮಧ್ಯ ರೈಲ್ವೆ 700 ಹುದ್ದೆ
ಪೂರ್ವ ಕರಾವಳಿ ರೈಲ್ವೆ 1461 ಹುದ್ದೆ
ಪೂರ್ವ ರೈಲ್ವೆ 768 ಹುದ್ದೆ
ಉತ್ತರ ಮಧ್ಯ ರೈಲ್ವೆ 508 ಹುದ್ದೆ
ಈಶಾನ್ಯ ರೈಲ್ವೆ 100 ಹುದ್ದೆ
ಈಶಾನ್ಯ ಗಡಿನಾಡಿನ ರೈಲ್ವೆ 125 ಹುದ್ದೆ
ಉತ್ತರ ರೈಲ್ವೆ 521 ಹುದ್ದೆ
ವಾಯುವ್ಯ ರೈಲ್ವೆ 679 ಹುದ್ದೆ
ದಕ್ಷಿಣ ರೈಲ್ವೆ 989 ಹುದ್ದೆಗಳು
ಆಗ್ನೇಯ ಮಧ್ಯ ರೈಲ್ವೆ 568 ಹುದ್ದೆಗಳು
ಆಗ್ನೇಯ ರೈಲ್ವೆ 796 ಹುದ್ದೆಗಳು
ದಕ್ಷಿಣ ರೈಲ್ವೆ 510 ಹುದ್ದೆಗಳು
ಪಶ್ಚಿಮ ಮಧ್ಯ ರೈಲ್ವೆ 759 ಹುದ್ದೆಗಳು
ಪಶ್ಚಿಮ ರೈಲ್ವೇಸ್ 885 ಹುದ್ದೆಗಳು
ಮೆಟ್ರೊಲ್ ರೈಲು ಕೋಲ್ಕತ್ತಾ 225 ಹುದ್ದೆಗಳು
18 ವರ್ಷದಿಂದ 30 ವರ್ಷದ ಒಳಗಿನ ಜನರು ರೈಲ್ವೆ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂಪಾಯಿ ಮತ್ತು ತೃತೀಯ ಲಿಂಗಿ ಹಾಗು ಮಾಜಿ ಸೈನಿಕರ ಅರ್ಜಿ ಶುಲ್ಕ 250 ರೂಪಾಯಿ ಆಗಿದೆ. 10ನೇ ತರಗತಿ, ITI ಮತ್ತು ಡಿಪ್ಲೋಮ ಮಾಡಿದವರು ಅರ್ಜಿ ಸಲ್ಲಿಸಬಹುದು. ಪರೀಕ್ಷೆಯಲ್ಲಿ ಪಾಸ್ ಆದವರಿಗೆ ವಿವಿಧ ಪರೀಕ್ಷೆಯನ್ನು ಮಾಡಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.