Bank Janardhan Death: ಬ್ಯಾಂಕ್ ಜನಾರ್ಧನ್ (Bank Janardhan) ಕನ್ನಡ ಚಿತ್ರರಂಗದ ಹೆಸರಾಂತ ನಟ ಎಂದು ಹೇಳಬಹುದು. ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟನೆಯನ್ನು ಮಾಡಿರುವ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರು ಒಂದು ಕಾಲದ ಟಾಪ್ ಹಾಸ್ಯನಟ ಅನ್ನುವ ಹೆಗ್ಗಳಿಕೆ ಕೂಡ ಗಳಿಸಿಕೊಂಡಿದ್ದರು. ಬರಿ ಚಿತ್ರಗಳಲ್ಲಿ ಮಾತ್ರವಲ್ಲದೆ ಕನ್ನಡದ ಹಲವು ಧಾರಾವಾಹಿಯಲ್ಲಿ ಕೂಡ ನಟ ಬ್ಯಾಂಕ್ ಜನಾರ್ಧನ್ ಅವರು ನಟನೆಯನ್ನು ಮಾಡುವುದರ ಮೂಲಕ ಮೆಚ್ಚುಗೆ ಗಳಿಸಿಕೊಂಡಿದ್ದರು. ವಿಷ್ಣುವರ್ಧನ್, ಅಂಬರೀಷ್, ಜಗ್ಗೇಶ್, ಅನಂತ ನಾಗ್, ಶಂಕರ್ ನಾಗ್ ಸೇರಿದಂತೆ ಹಲವು ನಾಯಕ ನಟರ ಜೊತೆ ನಟನೆಯನ್ನ ಮಾಡಿರುವ ನಟ ಬ್ಯಾಂಕ್ ಜನಾರ್ಧನ್ ಅವರು ಇಂದು ನಮ್ಮೆಲ್ಲರನ್ನೂ ಬಿಟ್ಟು ಇಹಲೋಕವನ್ನು ತ್ಯಜಿಸಿದ್ದಾರೆ.
ನಮ್ಮೆಲ್ಲರನ್ನೂ ಬಿಟ್ಟು ಅಗಲಿದ ಬ್ಯಾಂಕ್ ಜನಾರ್ಧನ್
ಕನ್ನಡದ ಸುಮಾರು 500 ಕ್ಕೂ ಅಧಿಕ ಚಿತ್ರಗಳಲ್ಲಿ ಮತ್ತು ಕನ್ನಡದ ಹಲವು ಧಾರಾವಾಹಿಯಲ್ಲಿ ನಟನೆಯನ್ನು ಮಾಡಿರುವ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ತನ್ನ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದುಬಂದಿದೆ. ಹಲವು ಸಮಯಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟ ಬ್ಯಾಂಕ್ ಜನಾರ್ಧನ್ ಅವರಿಗೆ ಈ ಹಿಂದೆ ಎರಡು ಹೃದಯಾಘಾತ ಕೂಡ ಆಗಿತ್ತು. ಕೆಲವು ದಿನಗಳಿಂದ ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ಧನ್ ಅವರನ್ನು ಕುಟುಂಬದವರು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಸುಮಾರು 75 ವರ್ಷ ವಯಸ್ಸಿನ ನಟ ಬ್ಯಾಂಕ್ ಜನಾರ್ಧನ್ ಅವರು 1991 ರ ವರೆಗೆ ಚಿತ್ರಗಳಲ್ಲಿ ನಟನೆಯನ್ನು ಮಾಡುವುದರ ಮೂಲಕ ತಮ್ಮ ವೃತ್ತಿ ಜೀವನ ನಡೆಸಿದ್ದರು ಎಂದು ಹೇಳಬಹುದು. ಅದಾದ ನಂತರ ಕನ್ನಡದ ಹಲವು ಧಾರಾವಾಹಿಯಲ್ಲಿ ಕೂಡ ನಟನೆಯನ್ನು ಮಾಡಿದ್ದರು. ರೋಬೊ ಫ್ಯಾಮಿಲಿ, ಪಾಪ ಪಾಂಡು, ಜೋಕಾಲಿ ಮತ್ತು ಮಾಂಗಲ್ಯ ಧಾರಾವಾಹಿಯಲ್ಲಿ ಕೂಡ ನಟ ಬ್ಯಾಂಕ್ ಜನಾರ್ಧನ್ ಅವರು ಹಿರಿಯ ನಟನಾಗಿ ಕಾರ್ಯ ನಿರ್ವಹಿಸಿದ್ದರು. ನಟ ಬ್ಯಾಂಕ್ ಜನಾರ್ಧನ್ ಅವರು ಕನ್ನಡದ ಹಾಸ್ಯನಟ ಜಗ್ಗೇಶ್ ಅವರ ಹಲವು ಚಿತ್ರಗಳಲ್ಲಿ ನಟನೆಯನ್ನು ಮಾಡುವುದು ಮಾತ್ರವಲ್ಲದೆ ನಟ ಕಾಶೀನಾಥ್ ಅವರು ಅಜಗಜಾಂತರ ಚಿತ್ರದಲ್ಲಿ ಪೋಷಕ ನಟನಾಗಿ ನಟನೆ ಮಾಡಿದ್ದರು.
2023 ರಲ್ಲಿ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತ ಆಗಿತ್ತು ಅವರು ವೈದ್ಯರ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದರು. ಹೃದಯಾಘಾತದ ನಂತರ ಯಾವುದೇ ಚಿತ್ರಗಳಲ್ಲಿ ಅಥವಾ ಧಾರಾವಾಹಿಯಲ್ಲಿ ನಟ ಬ್ಯಾಂಕ್ ಜನಾರ್ಧನ್ ಅವರು ನಟನೆ ಮಾಡಿಲ್ಲ. ಸದ್ಯ ನಟ ಬ್ಯಾಂಕ್ ಜನಾರ್ಧನ್ ಅವರು ಇಂದು ಮಧ್ಯರಾತ್ರಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ತನ್ನ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದುಬಂದಿದೆ. ರಂಗಭೂಮಿ ಕಲಾವಿದರಾಗಿದ್ದ ಬ್ಯಾಂಕ್ ಜನಾರ್ಧನ್ ಅವರು ಸುಮಾರು 60 ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ಕೂಡ ನಟನೆ ಮಾಡಿದ್ದರು ಎಂದು ತಿಳಿದುಬಂದಿದೆ.