Ayushman Bharat Treatment Details List: ಬಡಜನರ ಆರೋಗ್ಯದ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಅತೀ ದೊಡ್ಡ ಯೋಜನೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ (Ayushman Bharat Scheme) ಕೂಡ ಒಂದು ಎಂದು ಹೇಳಬಹುದು. ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ 5 ಲಕ್ಷ ರೂಪಾಯಿ ತನಕ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಇನ್ನು ಆಯುಷ್ಮಾನ್ ಭಾರತ್ ಯೋನನೆಯಲ್ಲಿ ಕೆಲವು ಬದಲಾವಣೆ ಕೂಡ ಮಾಡಲಾಗಿದೆ ಮತ್ತು ಮಾಡಿದ ಬದಲಾವಣೆಯ ಅಡಿಯಲ್ಲಿ 70 ವರ್ಷ ಮೇಲ್ಪಟ್ಟ ಜನರು ಕೂಡ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಸಾಕಷ್ಟು ಜನರು ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಯಾವ ಯಾವ ರೋಗಕ್ಕೆ ಅಥವಾ ಖಾಯಿಲೆಗೆ ಚಿಕಿತ್ಸೆ ನೀಡಲಾಗುತ್ತದೆ ಅನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹಾಗಾದರೆ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಯಾವ ಯಾವ ರೋಗ ಅಥವಾ ಖಾಯಿಲೆಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೋಟ್ಯಾಂತರ ಜನರಿಗೆ ಸಹಕಾರಿಯಾದ ಆಯುಷ್ಮಾನ್ ಭಾರತ್
ಹೌದು, ಆಯುಷ್ಮಾನ್ ಭಾರತ್ ಯೋಜನೆಗಳು ಕೋಟ್ಯಾಂತರ ಬಡಜನರ ಜೀವ ಉಳಿಸಿದೆ ಎಂದು ಹೇಳಬಹುದು. ಇನ್ನು ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಕೋಟ್ಯಾಂತರ ಜನರು ಉಚಿತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಪ್ರತಿಯೊಂದು ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಲಭ್ಯವಾಗಿದ್ದು ಈಗ 70 ವರ್ಷ ಮೇಲ್ಪಟ್ಟ ಜನರು ಕೂಡ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.
ಈ ಚಿಕಿತ್ಸೆಗಳಿಗೆ ಸಿಗಲ್ಲ ಆಯುಷ್ಮಾನ್ ಭಾರತ್ ವಿಮೆ
ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಕೆಲವು ಚಿಕಿತ್ಸೆಗಳನ್ನು ಹೊರಗಿಡಲಾಗಿದ್ದು ಜನರು ಆ ಚಿಕಿತ್ಸೆ ಯಾವುದೆಂದು ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಯಾವ ಚಿಕಿತ್ಸೆಗೆ ಆಯುಷ್ಮಾನ್ ಭಾರತ್ ಯೋಜನೆ ಲಭ್ಯವಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
* ಶೀತ, ಜ್ವರ ಅಥವಾ ಕೆಲವು ಸಾಮಾನ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ದಾಖಲಾರದರೆ ಅಥವಾ ತೀರಾ ಕಡಿಮೆ ವೆಚ್ಚದ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡರೆ ಅಂತಹ ಚಿಕಿತ್ಸೆಗಳು ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಬರುವುದಿಲ್ಲ.
* ಇನ್ನು ಕೆಲವು ಜನರು ಕೇವಲ ಆರೋಗ್ಯ ತಪಾಸಣೆ ಮಾಡಲು ಮಾತ್ರ ಆಸ್ಪತ್ರೆಗೆ ಹೋಗಿ ಬರುತ್ತಾರೆ, ಆದರೆ ತಪಾಸಣೆಯ ವೆಚ್ಚ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಬರುವುದಿಲ್ಲ.
* ಇನ್ನು ಕೆಲವು ಸಮಯ ಕೆಲವು ರೋಗಿಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ಅದೇ ದಿನ ಅವರಿಗೆ ಕೆಲವು ಸಾಮಾನ್ಯ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರೆ ಆ ಚಿಕ್ಸಿತೆಗಳಿಗೆ ಆಯುಷ್ಮಾನ್ ಭಾರತ್ ಯೋಜನೆಯ ವಿಮೆ ಸಿಗುವುದಿಲ್ಲ.
* ಚಿಕ್ಕ ಮಕ್ಕಳಾಗಿರಬಹುದು ಅಥವಾ ಯಾವುದೇ ದೊಡ್ಡ ವ್ಯಕ್ತಿಯಾಗಿರಬಹುದು ದಂತ ಚಿಕಿತ್ಸೆ ಮಾಡಿಸಿಕೊಂಡರೆ ಅವರಿಗೆ ಈ ವಿಮೆ ಲಭ್ಯ ಇರುವುದಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯ ನಿಯಮದ ಪ್ರಕಾರ ದಂತ ಚಿಕಿತ್ಸೆಗೆ ಆಯುಷ್ಮಾನ್ ಭಾರತ್ ಯೋಜನೆ ವಿಮೆ ಲಭ್ಯವಿಲ್ಲ.
* ಕಾಸ್ಮೆಟಿಕ್ ಚಿಕಿತ್ಸೆ, ಕೃತಕ ಉಸಿರಾಟ, ಬಂಜೆತನ ಸಮಸ್ಯೆ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳಿಗೆ ಆಯುಷ್ಮಾನ್ ಭಾರತ್ ಯೋಜನೆಯ ವಿಮೆ ಲಭ್ಯವಿರುವುದಿಲ್ಲ.