Bank Accounts Deposit Limits: ಈಗಿನ ಕಾಲದಲ್ಲಿ ಬ್ಯಾಂಕ್ ಖಾತೆ ಪ್ರತಿಯೊಬ್ಬರಿಗೂ ಬಹಳ ಅವಶ್ಯಕ ಎಂದು ಹೇಳಬಹುದು. ಡಿಜಿಟಲ್ ಕ್ಷೇತ್ರ ಬಹಳ ಮುಂದುವರೆದ ಕಾರಣ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ಹಲವು ಬದಲಾವಣೆ ಆಗಿರುವುದನ್ನು ನಾವು ಕಾಣಬಹುದು. ಇದರ ನಡುವೆ ಬ್ಯಾಂಕುಗಳ ಉಳಿತಾಯ ಖಾತೆಗಳಿಗೂ ಸಂಬಂಧಪಟ್ಟಂತೆ ಕೆಲವು ಹೊಸ ನಿಯಮಗಳು ಜಾರಿಗೆ ಬಂದಿರುವುದನ್ನು ನಾವು ಕಾಣಬಹುದು. ಹೌದು, ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿರುವವರು RBI ನಿಯಮ ಮತ್ತು ಆದಾಯ ತೆರಿಗೆ ನಿಯಮಗಳನ್ನು ಪಾಲನೆ ಮಾಡುವುದು ಅತೀ ಅವಶ್ಯಕ ಮತ್ತು ಪಾಲನೆ ಮಾಡದೆ ಇದ್ದರೆ ಅವರು ಸಮಸ್ಯೆ ಎದುರಿಸಬೇಕಾಗುತ್ತದೆ.
ಠೇವಣಿ ನಿಯಮದಲ್ಲಿ ದೊಡ್ಡ ಬದಲಾವಣೆ
ಬ್ಯಾಂಕುಗಳ ಉಳಿತಾಯ ಖಾತೆಯಲ್ಲಿ (Bank Saving Accounts) ಹಣ ಠೇವಣಿ ಮಾಡುವುದಕ್ಕೂ ಸಂಬಂಧಪಟ್ಟಂತೆ ಕೆಲವು ಹೊಸ ನಿಯಮಗಳು ಜಾರಿಗೆ ಬಂದಿರುವುದನ್ನು ನಾವು ಕಾಣಬಹುದು. ಹೌದು, ಬ್ಯಾಂಕುಗಳ ಉಳಿತಾಯ ಖಾತೆಯಲ್ಲಿ ನಿಗದಿತ ಮಿತಿಗಿಂತ ಅಧಿಕ ಹಣವನ್ನು ಠೇವಣಿ ಮಾಡಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ. RBI ಮತ್ತು ಆದಾಯ ತೆರಿಗೆ ಇಲಾಖೆ (Income Tax Department) ಬ್ಯಾಂಕುಗಳ ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಬಹುದು ಅನ್ನುವುದನ್ನು ಕೂಡ ನಿಯಮ ಹೊರಡಿಸಿದೆ ಮತ್ತು ಆ ನಿಯಮಗಳ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.
ಉಳಿತಾಯ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ
RBI ಮತ್ತು ಆದಾಯ ತೆರಿಗೆ ನಿಯಮಗಳ ಪ್ರಕಾರ ಬ್ಯಾಂಕುಗಳ ಉಳಿತಾಯ ಖಾತೆಯಲ್ಲಿ ಒಂದೇ ಬಾರಿಗೆ, ಅಂದರೆ ವಾರ್ಷಿಕವಾಗಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ ಆ ಹಣದ ಮೂಲವನ್ನು RBI ಅಥವಾ ತೆರಿಗೆ ಇಲಾಖೆ ಕೇಳಿದಾಗ ನೀಡಬೇಕಾಗುತ್ತದೆ. ಹಣ ಎಲ್ಲಿಂದ ಬಂತು ಮತ್ತು ಯಾರಿಂದ ಬಂತು ಅನ್ನುವ ಮೂಲವನ್ನು ತಿಳಿಸದೇ ಇದ್ದರೆ ಆದಾಯ ತೆರಿಗೆ ನಿಮಗೆ ನೋಟೀಸ್ ಕಳುಹಿಸುತ್ತದೆ.
ನಿಮ್ಮ ಉಳಿತಾಯ ಖಾತೆಗೆ ಹತ್ತು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣ ಜಮಾ ಆದರಷ್ಟೇ ಬ್ಯಾಂಕುಗಳು ತಮ್ಮ ಖಾತೆಯ ಮಾಹಿತಿಯನ್ನು RBI ಗೆ ತಿಳಿಸುತ್ತದೆ. ನಿಮ್ಮ ಉಳಿತಾಯ ಖಾತೆಯಲ್ಲಿ ಮಿತಿಗಿಂತ ಅಧಿಕ ಹಣಕಾಸಿನ ವಹಿವಾಟು ಆಗುತ್ತಿದೆ ಎಂದು RBI ಗೆ ತಿಳಿದರೆ ನಿಮ್ಮ ಮಾಹಿತಿಯನ್ನು RBI ನೇರವಾಗಿ ಆದಾಯ ತೆರಿಗೆ ತಿಳಿಸುತ್ತದೆ. ಒಮ್ಮೆ ನಿಮ್ಮ ಬ್ಯಾಂಕ್ ಮಾಹಿತಿ ತೆರಿಗೆ ಇಲಾಖೆಯ ಬಳಿ ಹೋದರೆ ತೆರಿಗೆ ಇಲಾಖೆ ನಿಮಗೆ ಕಡ್ಡಾಯವಾಗಿ ಆದಾಯ ತೆರಿಗೆ ನೋಟೀಸ್ ಕಳುಹಿಸುತ್ತದೆ.
ಇನ್ನು ಆದಾಯ ತೆರಿಗೆ ಮತ್ತು RBI ನಿಯಮದ ಪ್ರಕಾರ ಬ್ಯಾಂಕ್ ಖಾತೆಗಳಿಗೆ 50 ಸಾವಿರಕ್ಕಿಂತ ಅಧಿಕ ಹಣವನ್ನು ಜಮಾ ಮಾಡಲು ಬಯಸಿದರೆ ನೀವು ಪಾನ್ ಕಾರ್ಡ್ ಕಡ್ಡಾಯವಾಗಿ ನೀಡಬೆಕೆಗೌತ್ತದೆ. ಅದೇ ರೀತಿಯಲ್ಲಿ ಮಿತಿಗಿಂತ ಅಧಿಕ ಹಣವನ್ನು ಜಮಾ ಮಾಡಿದರೆ, ಆದಾಯ ತೆರಿಗೆ ಸೆಕ್ಷನ್ 141, 142 (1) ಮತ್ತು 148 ರ ಅಡಿಯಲ್ಲಿ ಆದಾಯ ತೆರಿಗೆ ನಿಮಗೆ ಪ್ರಶ್ನೆ ಮಾಡಿದರೆ ನೀವು ಅದಕ್ಕೆ ಸರಿಯಾದ ಉತ್ತರ ನೀಡಬೇಕಾಗುತ್ತದೆ. ನೀವು ನೀಡಿದ ಉತ್ತರ ಆದಾಯ ತೆರಿಗೆ ಇಲಾಖೆಗೆ ತ್ರಪ್ತಿಯಾಗದೆ ಇದ್ದರೆ ನೀವು ಆದಾಯ ತೆರಿಗೆ ಇಲಾಖೆ ಸೆಕ್ಷನ್ 68 ರ ಅಡಿಯಲ್ಲಿ ಶೇಕಡಾ 60 ರಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ.